ಟ್ರಂಪ್-ಕ್ಸಿ ಭೇಟಿ; ಚೀನಾ ಮೇಲಿನ ಟ್ಯಾರಿಫ್ ಕಡಿತ, ಅಪರೂಪದ ಭೂನಿಕ್ಷೇಪ ಪೂರೈಕೆ ಒಪ್ಪಂದ

ನವದೆಹಲಿ/ಸಿಯೋಲ್: ಚೀನಾ (China) ಮೇಲೆ ಅಮೆರಿಕ (America) ವಿಧಿಸುತ್ತಿರುವ ಶೇ.57ರಷ್ಟು ಟ್ಯಾರಿಫ್ (Tariffs) ಅನ್ನು ಶೇ.47ಕ್ಕೆ ಇಳಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.

ಆರು ವರ್ಷಗಳ ನಂತರ ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನ ಭೇಟಿಯಾಗಿ ದ್ವೀಪಕ್ಷೀಯ ಮಾತುಕತೆ ನಡೆಸಿದ್ದಾರೆ. ಎರಡು ದೇಶಗಳ ನಡುವೆ ಅಪರೂಪದ ಭೂಮಿಯ ನಿಕ್ಷೇಪಗಳ ಪೂರೈಕೆಗೆ ಒಪ್ಪಂದವಾಗಿದೆ. ಸಭೆಯ ನಂತರ ರಷ್ಯಾದಿಂದ ಕಚ್ಚಾತೈಲ ಪೂರೈಕೆ ನಡುವೆ ಚೀನಾದಿಂದ ಆಮದು ಮಾಡುವ ಸರಕುಗಳಿಗೆ ವಿಧಿಸಲಾಗುತ್ತಿರುವ ಶುಲ್ಕವನ್ನು 57% ನಿಂದ 47%ಗೆ ಕಡಿಮೆ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಬಳಿಕ ಮಾತನಾಡಿದ ಟ್ರಂಪ್, ಈ ಸಭೆಯಲ್ಲಿ ಬಹಳಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಎರಡು ದೇಶಗಳ ನಡುವೆ ವ್ಯಾಪಾರ ಮತ್ತು ಸಹಕಾರದ ಬಗ್ಗೆ ಹಲವು ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ನಾವು ಒಬ್ಬರಿಗೊಬ್ಬರು ಚೆನ್ನಾಗಿ ಅರಿತಿದ್ದೇವೆ. ನಮಗೆ ಉತ್ತಮ ಸಂಬಂಧವಿದೆ. ನಾವು ಅತ್ಯಂತ ಯಶಸ್ವಿ ಸಭೆ ನಡೆಸಲಿದ್ದೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಜಿನ್‌ಪಿಂಗ್ ಬಹಳ ಕಠಿಣ ಸಂಧಾನಕಾರರು. ಅವರು ಒಂದು ದೊಡ್ಡ ದೇಶದ ಶ್ರೇಷ್ಠ ನಾಯಕ. ನಾವು ಬಹಳ ಸಮಯದವರೆಗೆ ಉತ್ತಮ ಸಂಬಂಧವನ್ನು ಹೊಂದಲಿದ್ದೇವೆ ಟ್ರಂಪ್ ತಿಳಿಸಿದ್ದಾರೆ
ಹಲವು ಸವಾಲುಗಳ ನಡುವೆಯೂ ಚೀನಾ ಮತ್ತು ಯುಎಸ್ ಸಂಬಂಧ ಉತ್ತಮವಾಗಿದೆ. ನಾವಿಬ್ಬರೂ ಸರಿಯಾದ ಹಾದಿಯಲ್ಲಿ ಉಳಿಯಬೇಕು. ಚೀನಾ-ಯುಎಸ್ ಸಂಬಂಧಗಳನ್ನು ಖಚಿತಪಡಿಸಿಕೊಳ್ಳಬೇಕು. ಚೀನಾದ ಅಭಿವೃದ್ಧಿಯು ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸುವ ನಿಮ್ಮ ದೃಷ್ಟಿಕೋನದೊಂದಿಗೆ ಕೈಜೋಡಿಸುತ್ತದೆ ಎಂದು ನಾನು ಭಾವಿಸಿದ್ದೇನೆ. ಎರಡೂ ದೇಶಗಳು ಪರಸ್ಪರ ಯಶಸ್ವಿಯಾಗಲು ಮತ್ತು ಒಟ್ಟಿಗೆ ಸಮೃದ್ಧಿಯಾಗಲು ಸಂಪೂರ್ಣವಾಗಿ ಸಮರ್ಥವಾಗಿವೆ. ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಪಾಲುದಾರರು ಮತ್ತು ಸ್ನೇಹಿತರಾಗಿರಬೇಕು ಎಂದು ನಾನು ಹಲವು ಬಾರಿ ಸಾರ್ವಜನಿಕವಾಗಿ ಹೇಳಿದ್ದೇನೆ. ಇತಿಹಾಸವು ನಮಗೆ ಕಲಿಸಿದ್ದು ಇದನ್ನೇ ಎಂದು ಜಿನ್‌ಪಿಂಗ್ ಮಾತನಾಡಿದ್ದಾರೆ.
ಚೀನಾ ನಡುವೆ ಮಾತುಕತೆ ನಡೆಯುತ್ತಿರುವ ಹೊತ್ತಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ತಕ್ಷಣ ಪ್ರಾರಂಭಿಸಲು ಯುದ್ಧ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ರಷ್ಯಾ ಮತ್ತು ಚೀನಾ ನಡೆಸಿದ ಪರಮಾಣು ಪರೀಕ್ಷೆಗಳಿಗೆ ನೇರ ಪ್ರತಿಕ್ರಿಯೆಯಾಗಿ ಮೂವತ್ತು ವರ್ಷಗಳ ಬಳಿಕ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆ ಅಮೆರಿಕ ಮುಂದಾಗಿದೆ