Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮೆರಿಕದಲ್ಲಿ ಟ್ರಂಪ್ ಸುಂಕದ ಬಿಸಿ: ಭಾರತೀಯ ಉತ್ಪನ್ನಗಳ ಬೆಲೆ ದುಪ್ಪಟ್ಟು!

Spread the love

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ರಫ್ತು ಆಗುವ ವಸ್ತುಗಳ ಮೇಲೆ ಭಾರೀ ಸುಂಕ ವಿಧಿಸಿರುವ ಪರಿಣಾಮ ಅಮೆರಿಕದಲ್ಲಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲು ಶೇ.25 ರಷ್ಟು ಸುಂಕ ಜಾರಿಯಾಗಿದ್ದು, ಅದನ್ನು ಶೇ.50ಕ್ಕೆ ಏರಿಸುವುದಾಗಿ ಘೋಷಿಸಲಾಗಿದೆ.

ಆದರೆ ಹೊಸ ಸುಂಕ ಇನ್ನೂ ಜಾರಿಯಾಗದಿದ್ದರೂ, ಈಗಾಗಲೇ ಶೇ.25 ರಷ್ಟು ಸುಂಕದಿಂದಲೇ ಬೆಲೆಗಳು ತೀವ್ರ ಏರಿಕೆ ಕಂಡಿವೆ.

ಅಮೆರಿಕದಲ್ಲಿ ವಾಸಿಸುವ ಭಾರತೀಯರ ದಿನಬಳಕೆ ವಸ್ತುಗಳಿಂದ ಹಿಡಿದು ಬಿಸ್ಕತ್ತುಗಳವರೆಗೂ ಎಲ್ಲವೂ ದುಬಾರಿ ಆಗಿದೆ. ಡಲ್ಲಾಸ್‌ನಲ್ಲಿರುವ ಪ್ರವಾಸಿ ಭಾರತೀಯ ರಜತ್, ವಾಲ್ಮಾರ್ಟ್ ಅಂಗಡಿಯಲ್ಲಿ ಭಾರತೀಯ ಆಹಾರ ಉತ್ಪನ್ನಗಳ ಬೆಲೆಗಳನ್ನು ವಿಡಿಯೋ ಮೂಲಕ ತೋರಿಸಿದ್ದು, ಅದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಲೆಗಳಲ್ಲಿ ಕಂಡುಬಂದ ಏರಿಕೆ:

ಭಾರತದಲ್ಲಿ ₹10ಕ್ಕೆ ಸಿಗುವ ಪಾರ್ಲೆ-ಜಿ ಬಿಸ್ಕತ್ತು ಅಮೆರಿಕದಲ್ಲಿ ₹370
ಹಲ್ದಿರಾಮ್ ತಿಂಡಿಗಳು, ಮಸಾಲೆಗಳು ತಲಾ ₹300ಕ್ಕೂ ಹೆಚ್ಚು
₹20 ಮೌಲ್ಯದ ಹೈಡ್ ಆಂಡ್ ಸೀಕ್ ಬಿಸ್ಕತ್ತು ಅಮೆರಿಕದಲ್ಲಿ ₹320
ಅರ್ಧ ಕೆಜಿ ಬೇಳೆಕಾಳುಗಳು ಸುಮಾರು ₹400
ಅಮೆರಿಕದಲ್ಲಿ ಜೀವನ ಸುಂದರ, ನಾಗರಿಕವಾಗಿದ್ದರೂ ಖರ್ಚುಗಳು ಅತಿ ಹೆಚ್ಚು ಎಂಬುದನ್ನು ಈ ಬೆಲೆ ಏರಿಕೆ ತೋರಿಸುತ್ತಿದೆ. ಅಲ್ಲಿನ ಭಾರತೀಯರು, “ಸಂಪಾದನೆ ಮಾತ್ರವಲ್ಲ, ಖರ್ಚು ಕೂಡ ಹೆಚ್ಚಾಗಿದೆ. ಅಮೆರಿಕದಲ್ಲಿ ನೆಲೆಸಲು ಬಯಸುವವರು ಮೊದಲೇ ಇದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಹೇಳುತ್ತಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *