Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತ-ಪಾಕ್ ಸಂಘರ್ಷ ನಿಲುಗಡೆಗೆ ನಾನೇ ಕಾರಣ ಎಂಬ ಹೇಳಿಕೆ ಬದಲಿಸಿದ ಟ್ರಂಪ್: ‘ಅದು ಉಭಯ ನಾಯಕರ ನಿರ್ಧಾರ’ ಎಂದ ಅಮೆರಿಕ ಅಧ್ಯಕ್ಷ

Spread the love

ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷಕ್ಕೆ ತಾನೇ ಕಾರಣ ಎನ್ನುವುದಾಗಿ ಈ ಹಿಂದೆ ಹೇಳಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಇದೀಗ ನಿಲುವು ಬದಲಿಸಿದ್ದಾರೆ. ಉಭಯ ದೇಶಗಳ ನಾಯಕರು ತಾವಾಗಿಯೇ ಶಾಂತಿಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದು, ತಾನು ಯಾವುದೇ ರೀತಿಯಲ್ಲಿ ಮಧ್ಯಸ್ಥಿಕೆ ವಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಇಬ್ಬರೂ “ಅತ್ಯಂತ ಬುದ್ಧಿವಂತ” ನಾಯಕರು ಕದನ ಮುಂದುವರಿಸದೆ ಶಾಂತಿಪೂರ್ಣ ತೀರ್ಮಾನಕ್ಕೆ ಬಂದಿದ್ದಾರೆ ಎಂಬುದಾಗಿ ಟ್ರಂಪ್ ಹೇಳಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜೊತೆ ಶ್ವೇತಭವನದಲ್ಲಿ ಬುಧವಾರ ಮಧ್ಯಾಹ್ನ ನಡೆದ ಔತಣಕೂಟದ ನಂತರ ಟ್ರಂಪ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಹೇಳಿಕೆ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾರತ ಮತ್ತು ಪಾಕಿಸ್ತಾನಗಳು ಸಂಘರ್ಷವನ್ನು ನಿಲ್ಲಿಸಲು ಮತ್ತು ಮೇ 10ರಂದು ಯುದ್ಧವನ್ನು ನಿಲ್ಲಿಸಲು ನಿರ್ಧರಿಸಿದವು. ಅಂದಿನಿಂದ, ಎರಡು ನೆರೆಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಬಗೆಹರಿಸಲು ತಾನು ಮಧ್ಯಸ್ಥಿಕೆ ವಹಿಸಿ ಸಹಾಯ ಮಾಡಿದ್ದೇನೆ ಎಂದು ಟ್ರಂಪ್ ಪದೇ ಪದೇ ಹೇಳಿಕೊಂಡು ಬಂದಿದ್ದರು.
ಆತಿಥ್ಯ ವಹಿಸಿದ್ದ ಟ್ರಂಪ್, ” ಯುದ್ಧವನ್ನು ಕೊನೆಗೊಳಿಸಿದ್ದಕ್ಕಾಗಿ ನಾನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್‌ಗೂ ಧನ್ಯವಾದ ಹೇಳಲು ಬಯಸುತ್ತೇನೆ. ಈ ಕುರಿತು ಮೋದಿ ಅವರೊಂದಿಗೂ ಮಾತುಕತೆ ನಡೆಸಿದ್ದೇನೆ. ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದದ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ನಾವು ಪಾಕಿಸ್ತಾನದ ಜೊತೆ ವ್ಯಾಪಾರ ಒಪ್ಪಂದಕ್ಕೆ ಕೆಲಸ ಮಾಡುತ್ತಿದ್ದೇವೆ “ಎಂದು ಟ್ರಂಪ್‌ ಹೇಳಿದ್ದಾರೆ.

ಇದು ಭಾರತ- ಪಾಕ್‌ ಕೈಗೊಂಡ ನಿರ್ಧಾರ

ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷವನ್ನು ನಿಲ್ಲಿಸಿದ ಶ್ರೇಯವನ್ನು ತೆಗೆದುಕೊಳಲು ಬಯಸುವುದಿಲ್ಲ. ಏಕೆಂದರೆ ಉಭಯ ದೇಶಗಳ ನಾಯಕರು ಸ್ವಂತ ನಿರ್ಧಾರ ಕೈಗಳ್ಳುವ ಸಾಮರ್ಥ್ಯ ಇರುವ ಬುದ್ಧಿವಂತ ಮುಖಂಡರಾಗಿದ್ದಾರೆ. ಇಬ್ಬರೂ ಯುದ್ಧವನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿದೆ. ಒಂದು ವೇಳೆ ಈ ಸಂಘರ್ಷ ಮುಂದುವರಿಸಿದ್ದರೆ, ಪರಮಾಣು ಯುದ್ಧವೂ ಆಗಬಹುದಿತ್ತು ಎಂದು ಹೇಳಿಕೆ ನೀಡಿದ್ದಾರೆ.

ಜಿ7 ಶೃಂಗಸಭೆಯ ವೇಳೆ ಮೋದಿ- ಟ್ರಂಪ್‌ ಭೇಟಿ ಮೊಟಕು

ಜಿ7 ಶೃಂಗಸಭೆ ಸಂದರ್ಭದಲ್ಲೇ ಪ್ರಧಾನಿ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ಕೆನಡಾದಲ್ಲಿ ಭೇಟಿಯಾಗಲು ನಿರ್ಧರಿಸಿದ್ದರು. ಆದರೆ ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿದ ತಾತ್ಕಾಲಿಕ ತೀವ್ರತೆಯಿಂದಾಗಿ ಟ್ರಂಪ್ ತಮ್ಮ ಪ್ರವಾಸವನ್ನು ಕಡಿತಗೊಳಿಸಿ ವಾಷಿಂಗ್ಟನ್‌ಗೆ ಮರಳಿದರು. ಹಾಗಾದರೂ, ಕೆನಡಾದಿಂದ ಹೊರಡುವ ಮೊದಲು ಮೋದಿ ಮತ್ತು ಟ್ರಂಪ್ 35 ನಿಮಿಷಗಳ ದೂರವಾಣಿ ಸಂಭಾಷಣೆ ನಡೆಸಿದ್ದು, ಇದರಲ್ಲಿ ಆಪರೇಷನ್ ಸಿಂಧೂರ್ನ ಸಮಯದಲ್ಲಿ ಭಾರತ-ಪಾಕಿಸ್ತಾನ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಧ್ಯಸ್ಥಿಕೆ ಅಥವಾ ಭಾರತ-ಅಮೆರಿಕದ ವ್ಯಾಪಾರ ಒಪ್ಪಂದಗಳ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸ್ಪಷ್ಟಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *