ಕಸಾಯಿಖಾನೆಗೆ ಸಾಗುತ್ತಿದ್ದ ಗೋವುಗಳ ಲಾರಿ ಅಪಘಾತ: ಚಾಲಕ ಪರಾರಿ, 4 ಗೋವುಗಳ ದುರ್ಮರಣ

ಕೊಪ್ಪಳ: ಅಕ್ರಮವಾಗಿ ಕಸಾಯಿಖಾನೆಗೆ ಸಾಗುತ್ತಿದ್ದ ಗೋವುಗಳು ತುಂಬಿದ್ದ ಲಾರಿ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ತಾಲೂಕಿನ ಹಿಟ್ನಾಳ ಟೋಲ್ ಗೇಟ್ ಹತ್ತಿರ ಲಾರಿ ಡ್ರೈವರ್ ನ ಅಚಾತುರ್ಯದಿಂದ ಡಿವೈಡರ್ಗೆ ಗುದ್ದಿ ಪಲ್ಟಿಯಾಗಿದೆ. ಅದರಲ್ಲಿದ್ದ ಇಪ್ಪತ್ತಕ್ಕೂ ಹೆಚ್ಚು ಗೋವುಗಳು ಉಸಿರುಗಟ್ಟಿ ಒ ದ್ದಾಡುತ್ತಿದ್ದವು. ಲಾರಿಯಲ್ಲಿದ್ದ ಚಾಲಕ ಮತ್ತು ಇನ್ನಿತರರು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಬಳಿಕ ಸ್ಥಳೀಯರು ಕೆಲವು ಗೋವುಗಳನ್ನು ರಕ್ಷಣೆ ಮಾಡಿದರು. ಹಿಟ್ನಾಳ ಗ್ರಾಮದ ಸಂಜೀವರೆಡ್ಡಿ ಎಂಬುವವರು ಸ್ಥಳೀಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಸಾರ್ವಜನಿಕರು 16 ಗೋವುಗಳನ್ನು ರಕ್ಷಣೆ ಮಾಡಿದರು. ಆದರೂ ನಾಲ್ಕು ಗೋವುಗಳು ಉಸಿರುಗಟ್ಟಿ ಸತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಮುನಿರಾಬಾದ್ ಪೋಲಿಸ್ ಠಾಣೆಯ ಪಿ.ಎಸ್.ಐ. ಸುನೀಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬದುಕಿದ್ದ ಗೋವುಗಳನ್ನು ಕೊಪ್ಪಳದ ಗೋಶಾಲೆಗೆ ಸಾಗಿಸಬೇಕು ಹಾಗೂ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.