Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರೆಸ್ಟೀಜ್ ಗ್ರೂಪ್ ಮುಖ್ಯಸ್ಥರಿಗೆ ಸಂಕಷ್ಟ: ಕೋರ್ಟ್ ಸೂಚನೆ ಮೇರೆಗೆ FIR ದಾಖಲು!

Spread the love

ಬೆಂಗಳೂರಿನ ಪ್ರಖ್ಯಾತ ಪ್ರೆಸ್ಟೀಜ್ ಗ್ರೂಪ್‌ನ ಮುಖ್ಯಸ್ಥರಾದ ಝೈದ್ ಸಾದಿಕ್, ನಯೀಮ್ ನೂರ್ ಹಾಗೂ ಸೊರೊನೊಶೆ ವೆಂಕಟೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮಾನ್ಯ ನ್ಯಾಯಾಲಯವು ನೇರ ನಿರ್ದೇಶನ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನದ ಒತ್ತಡ ಹಾಗೂ ಪ್ರಾಣ ಬೆದರಿಕೆಯಂತಹ ಗಂಭೀರ ಆರೋಪಗಳಿದ್ದರೂ, ಆರಂಭದಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ದೂರುದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಧೀಶರ ಮುಂದೆ ವಿಡಿಯೋ ಸಾಕ್ಷ್ಯಗಳನ್ನು ಮಂಡಿಸಿ, ಘಟನೆಯ ವಿವರಗಳನ್ನು ಮನವರಿಕೆ ಮಾಡಿಕೊಟ್ಟ ನಂತರ ಈ ಮಹತ್ವದ ಆದೇಶ ಹೊರಬಿದ್ದಿದೆ. ಇದೇ ವೇಳೆ, ಮಹಜರು ಪ್ರಕ್ರಿಯೆಯ ಸಮಯದಲ್ಲಿ ದೂರುದಾರರನ್ನು ಕಚೇರಿಯೊಳಗೆ ಸೇರಿಸದೆ ನಿಯಮಬಾಹಿರವಾಗಿ ವರ್ತಿಸಿದ ಆರೋಪದ ಮೇಲೆ ಪಿಎಸ್‌ಐ ಮಠಪತಿ ಅವರ ವಿರುದ್ಧವೂ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ. ಇಷ್ಟು ದೊಡ್ಡ ಮಟ್ಟದ ಆರೋಪಗಳಿದ್ದರೂ ಆರಂಭಿಕ ಹಂತದಲ್ಲಿ ತನಿಖೆ ವಿಳಂಬವಾಗಿದ್ದು ಏಕೆ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *