Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಬುಡಕಟ್ಟು ಜನಾಂಗ: ಇದು ಅಚ್ಚರಿಯ ಸತ್ಯ!

Spread the love

हिम्बा ट्राइबच्या महिला कधीच अंघोळ करत नाहीत, तरी देखील सगळ्यात सुंदर -  Majha Paper

ಸ್ನಾನ ದೇಹವನ್ನು ಮಾತ್ರ ಶುಚಿಗೊಳಿಸುವುದು ಮಾತ್ರವಲ್ಲ ಮನಸ್ಸನ್ನು ಹಗುರಾಗಿಸುತ್ತದೆ. ಆಯಾಯ ದೇಶದ ಜನರು ಬೆಳಗ್ಗೆ ಹಾಗೂ ಸಂಜೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ನಾನ ಮಾಡುತ್ತಾರೆ. ಆದರೆ ಒಂದೆರಡು ದಿನ ಸ್ನಾನ ಮಾಡದೇ ಇದ್ರೆ ಹೇಗೋ ಇರಬಹುದು. ಸ್ನಾನ ಮಾಡದೇನೆ ಇದ್ರೆ ಹೇಗೆ ಆಗ್ಬಹುದು, ಇದನ್ನು ಊಹಿಸಲು ಕೂಡ ಅಸಾಧ್ಯ.

ಆದರೆ ಈ ಬುಡಕಟ್ಟು ಜನಾಂಗದ ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡ್ತಾರೆಯಂತೆ. ನಿಮಗೆ ಇದನ್ನು ನಂಬಲು ಕಷ್ಟವಾಗಬಹುದು, ಆದರೆ ಇದು ಸತ್ಯ. ಸ್ನಾನ ಮಾಡದೇ ಇದ್ರೂ ಇಲ್ಲಿನ ಮಹಿಳೆಯರು ದೇಹದ ಸ್ವಚ್ಛತೆಯನ್ನು (cleanliness) ಕಾಪಾಡಿಕೊಳ್ತಾರೆ.

ಈ ಬುಡಕಟ್ಟು ಜನಾಂಗದಲ್ಲಿ ಸ್ನಾನಕ್ಕಿದೆ ನಿಷೇಧ

ಈ ಬುಡಕಟ್ಟು ಜನಾಂಗದವರು ತಮ್ಮ ಹಿರಿಯರು ಪಾಲಿಸಿಕೊಂಡ ಬಂದ ಸಂಪ್ರದಾಯವನ್ನು ಇವತ್ತಿಗೂ ಕೂಡ ಅನುಸರಿಸಿಕೊಂಡು ಬರುತ್ತಿದ್ದಾರಂತೆ. ಅಂತಹ ಆಚರಣೆಗಳಲ್ಲಿ ಒಂದು ಸ್ನಾನ ಮಾಡದೇ ಇರುವುದು. ಪ್ರಪಂಚದಲ್ಲಿರುವ ಈ ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ಸ್ನಾನ ಮಾಡುವುದನ್ನೇ ನಿಷೇಧಿಸಲಾಗಿದೆ, ಹೌದು, ಈ ಬುಡಕಟ್ಟು ಜನಾಂಗದ ಹೆಸರು ಹಿಂಬಾ ಬುಡಕಟ್ಟು. ಆಫ್ರಿಕಾ ನಮೀಬಾ ದೇಶದ ಮರುಭೂಮಿಗಳಲ್ಲಿ ಈ ಬುಡಕಟ್ಟು ಜನಾಂಗದ ಜನರು ನೆಲೆಸಿದ್ದು, ಆಧುನಿಕತೆಯಿಂದ ಸಂಪೂರ್ಣ ದೂರ ಉಳಿದಿದ್ದಾರೆ.

ಈ ದಿನ ಮಾತ್ರ ಸ್ನಾನ ಮಾಡ್ತಾರೆ ಇಲ್ಲಿನ ಮಹಿಳೆಯರು

ನಮ್ಗೆಲ್ಲರಿಗೂ ಒಂದು ದಿನ ಸ್ನಾನ ಮಾಡದೇ ಇದ್ರೆ ಕಿರಿಕಿರಿ ಅನುಭವ ಆಗ್ತದೆ, ಕೆಲವರ ದೇಹದಿಂದ ಗಬ್ಬು ವಾಸನೆ ಬರಲು ಶುರುವಾಗುತ್ತದೆ, ಆದರೆ ಬುಡಕಟ್ಟು ಜನಾಂಗದ ಮಹಿಳೆಯರು ಬೇಸಿಗೆಯಿರಲಿ, ಚಳಿಗಾಲವಿರಲಿ, ಮಳೆಗಾಲವೇ ಇರಲಿ ಸ್ನಾನ ಮಾಡುವುದೇ ಇಲ್ಲ. ಅಷ್ಟೇ ಅಲ್ಲದೇ, ಈ ಮಹಿಳೆಯರು ಬಟ್ಟೆ ಕೂಡ ಒಗೆಯೋದಿಲ್ಲವಂತೆ. ಆದರೆ ಜೀವಮಾನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡೋದು, ಅದುವೇ ತಮ್ಮ ಮದುವೆ ದಿನವಂತೆ.

ಸ್ನಾನ ಮಾಡದಿದ್ರೂ ಸ್ವಚ್ಛತೆಗೆ ಕಡೆಗೆ ಗಮನಹರಿಸ್ತಾರೆ ಈ ಮಹಿಳೆಯರು

ಮದುವೆ ದಿನ ಮಾತ್ರ ಸ್ನಾನ ಮಾಡಿದ್ರು ಕೂಡ ಇಲ್ಲಿನ ಮಹಿಳೆಯರು ಸ್ವಚ್ಛತೆಯ ಕಡೆಗೆ ಹೆಚ್ಚು ಗಮನಹರಿಸ್ತಾರೆ. ದೇಹದ ಸ್ವಚ್ಛತೆಗಾಗಿ ಗಿಡಮೂಲಿಕೆಯನ್ನು ಬಳಸ್ತಾರೆ. ಹೌದು ತಮ್ಮ ಸುತ್ತಮುತ್ತಲಿನಲ್ಲಿ ಸಿಗುವ ವಿಶೇಷ ಗಿಡಮೂಲಿಕೆಗಳನ್ನು ನೀರಿನಲ್ಲಿ ಕುದಿಸುತ್ತಾರೆ. ಅದರ ಹೊಗೆಯನ್ನು ಬಳಸಿ ತಮ್ಮ ದೇಹವನ್ನು ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಸೂರ್ಯನ ಬೆಳಕಿನಿಂದ ಚರ್ಮವನ್ನು ರಕ್ಷಿಸಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾದ ವಿಶೇಷ ಲೋಷನ್ ಬಳಸುತ್ತಾರೆ.


Spread the love
Share:

administrator

Leave a Reply

Your email address will not be published. Required fields are marked *