Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಹಲ್ಗಾಂ ದಾಳಿಗೆ TRF ಹಣ ಹವಾಲಾ? ಎನ್‌ಐಎ ಮಲೇಷ್ಯಾ ಸಂಪರ್ಕಗಳನ್ನು ಪತ್ತೆ

Spread the love

ನವದೆಹಲಿ: ಪಹಲ್ಗಾಂ ಉಗ್ರ ದಾಳಿ ಕೃತ್ಯದ ಹೊಣೆ ಹೊತ್ತಿದ್ದ ದಿ ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ಉಗ್ರ ಸಂಘಟನೆಗೆ ಯಾರಿಂದ ನೆರವು ಹರಿದುಬರುತ್ತಿದೆ ಎನ್ನುವುದಕ್ಕೆ ಹೊಸ ಪುರಾವೆ ಸಿಕ್ಕಿದೆ. ಮಲೇಷ್ಯಾದಿಂದ ಹವಾಲಾ ಮೂಲಕ ಟಿಆರ್​ಎಫ್​ಗೆ ಹಣ ಹರಿದುಹೋಗುತ್ತಿರಬಹುದು ಎಂಬುದಕ್ಕೆ ಎನ್​ಐಎ ತನಿಖೆ ವೇಳೆ ಅನುಮಾನ ಮೂಡಿಸುವ ಸಾಕ್ಷ್ಯಾಧಾರಗಳು ಸಿಕ್ಕಿರುವುದು ಗೊತ್ತಾಗಿದೆ.

ದಿ ರೆಸಿಸ್ಟೆನ್ಸ್ ಫ್ರಂಟ್ ಎಂಬುದು ಪಾಕಿಸ್ತಾನ ಬೆಂಬಲಿತ ಕಾಶ್ಮೀರ ಉಗ್ರ ಸಂಘಟನೆ. 2024ರ ಏಪ್ರಿಲ್ 22ರಂದು ಪಹಲ್ಗಾಂನಲ್ಲಿ ಸಂಭವಿಸಿದ್ದ ಉಗ್ರ ದಾಳಿ ಘಟನೆಯ ಹೊಣೆಯನ್ನು ಈ ಸಂಘಟನೆ ಮೊದಲು ಹೊತ್ತಿತ್ತು. ನಂತರ ಅದನ್ನು ನಿರಾಕರಿಸಿತು. ಇದು ಲಷ್ಕರೆ ತೊಯ್ಯಬಾದ ಇನ್ನೊಂದು ಮುಖ ಎಂದು ಹೇಳಲಾಗುತ್ತಿದೆ. ಭಾರತದ ತನಿಖಾ ಸಂಸ್ಥೆಯಾದ ಎನ್​ಐಎ ಈ ಟಿಆರ್​ಎಫ್ ಸಂಘಟನೆಯ ಜಾಲವನ್ನು ಬೇದಿಸುವ ಕೆಲಸ ಮಾಡುತ್ತಿದೆ.

ಟಿಆರ್​ಎಫ್​ನೊಂದಿಗೆ ಶಾಮೀಲಾಗಿದ್ದಾರೆನ್ನಲಾದ ಶ್ರೀನಗರದ ವ್ಯಕ್ತಿಯೊಬ್ಬರ ಮೊಬೈಲ್ ಫೋನ್​ನಲ್ಲಿ 450ಕ್ಕೂ ಹೆಚ್ಚು ಸಂಪರ್ಕಗಳ ಜಾಡು ಹಿಡಿದಾಗ ಎನ್​ಐಎಗೆ ಕೆಲ ಪ್ರಬಲ ಸುಳಿವುಗಳು ಸಿಕ್ಕಿವೆ. ಈ ಕೆಲ ಕಾಂಟ್ಯಾಕ್ಟ್​ಗಳು ಹಿಂದಿನ ಕೆಲ ಭಯೋತ್ಪಾದನಾ ಕೃತ್ಯಗಳಲ್ಲಿ ಆರೋಪಿಗಳಾಗಿದ್ದಾರೆ. ಹಾಗೆಯೇ, ಮಲೇಷ್ಯಾ ಮೂಲಕ ಹವಾಲ ರೂಪದಲ್ಲಿ ಹಣ ಹರಿದುಬರುತ್ತಿರುವುದು, ಮತ್ತು ಈ ಹಣವನ್ನು ಟಿಆರ್​ಎಫ್​ಗೆ ಫಂಡಿಂಗ್ ಆಗಿ ಬಳಕೆ ಆಗುತ್ತಿರುವುದಕ್ಕೆ ಸಾಕ್ಷಿಗಳನ್ನು ಎನ್​ಐಎ ಪತ್ತೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಈ ಹವಾಲಾ ಜಾಲದಲ್ಲಿ ಮಲೇಷ್ಯಾದ ನಿವಾಸಿ ಸಾಜದ್ ಅಹ್ಮದ್ ಮಿರ್ ಮತ್ತು ಯಾಸಿರ್ ಹಾಯತ್ ಅವರ ಹೆಸರು ಪ್ರಧಾನವಾಗಿ ಶಂಕೆ ಮೂಡಿಸಿವೆ. ಶ್ರೀನಗರದ ಹಯತ್ ಅವರು ಮಲೇಷ್ಯಾಗೆ ಹಲವು ಬಾರಿ ಹೋಗ ಬಂದಿದ್ದಾರೆ. ಮಲೇಷ್ಯಾ ನಿವಾಸಿ ಮಿರ್​ನ ನೆರವಿನಿಂದ ಹಯಾತ್ ಟಿಆರ್​ಎಫ್​ಗೆ ಶಫತ್ ವಾನಿ ಎಂಬಾತನ ಮೂಲಕ 9 ಲಕ್ಷ ರೂ ಫಂಡಿಂಗ್ ರವಾನಿಸಿದ್ದಾನೆ.

ಟಿಆರ್​ಎಫ್​ನ ಪ್ರಮುಖ ಆಪರೇಟಿವ್ ಆಗಿರುವ ಶಫತ್ ವಾನಿ ಯಾವುದೂ ಯೂನಿವರ್ಸಿಟಿ ಕಾನ್ಫರೆನ್ಸಲ್ಲಿ ಪಾಲ್ಗೊಳ್ಳಲು ಮಲೇಷ್ಯಾಗೆ ಭೇಟಿ ನೀಡಿದ್ದ ಎನ್ನಲಾಗಿದೆ.

ದಿ ರೆಸಿಸ್ಟೆನ್ಸ್ ಫ್ರಂಟ್ 2019ರಲ್ಲಿ ರಚನೆಯಾಗಿದ್ದು. ಜಮ್ಮು ಕಾಶ್ಮೀರದ ಸಂಘಟನೆ ಎಂದು ಬಿಂಬಿಸುವ ಕೆಲಸ ನಡೆದಿದೆ. ಇದು ಪಾಕಿಸ್ತಾನ ಮೂಲದ ಲಷ್ಕರೆ ತೈಯಬಾದ ಪ್ರಾಕ್ಸಿ ಸಂಘಟನೆ ಎನ್ನಲಾಗಿದೆ. ಪಹಲ್ಗಾಂ ಘಟನೆ ಬಳಿಕ ಟಿಆರ್​ಎಸ್ ಅನ್ನು ಅಮೆರಿಕ ಕೂಡ ಉಗ್ರ ಸಂಘಟನೆಗಳ ಪಟ್ಟಿಗೆ ಸೇರಿಸಿದೆ.


Spread the love
Share:

administrator

Leave a Reply

Your email address will not be published. Required fields are marked *