ತರಬೇತಿ ವಿಮಾನಗಳ ಡಿಕ್ಕಿ: ಇಬ್ಬರು ವಿದ್ಯಾರ್ಥಿ ಪೈಲೆಟ್ ಸಾವು

ಒಟ್ಟಾವೋ:ಎರಡು ಸಣ್ಣ ವಿಮಾನಗಳು ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಕೆನಡಾದ ದಕ್ಷಿಣ ಮ್ಯಾನಿಟೋಬಾದಲ್ಲಿ ನಡೆದಿದೆ. ಅವರಲ್ಲಿ ಒಬ್ಬರನ್ನು ಭಾರತೀಯ ಮೂಲದ ಶ್ರೀಹರಿ ಸುಖೇಶ್ ಎಂದು ಹೇಳಲಾಗಿದೆ. ಶ್ರೀಹರಿ ಸುಕೇಶ್ ಮೂಲತಃ ಕೊಚ್ಚಿ ಮೂಲದವರಾಗಿದ್ದು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇನ್ನೋರ್ವ ಮೃತ ಪೈಲೆಟ್ ಕೆನಡಾದ ಪ್ರಜೆ ಸವನ್ನಾ ಎಂದು ಗುರುತಿಸಲಾಗಿದೆ.
ತರಬೇತಿ ವಿಮಾನಗಳ ಹಾರಾಟದ ವೇಳೆ ಎರಡು ವಿಮಾನಗಳು ಪರಸ್ಪರ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಕೆನಡಾದ ಮ್ಯಾನಿಟೋಬಾ ಪ್ರಾಂತ್ಯದ ಸ್ಟೈನ್‌ಬಾಚ್ ಪ್ರದೇಶದಲ್ಲಿ ಮಂಗಳವಾರ(ಜು.8) ಬೆಳಗ್ಗೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಇಬ್ಬರೂ ವಿದ್ಯಾರ್ಥಿ ಪೈಲಟ್‌ಗಳು ಸೆಸ್ನಾ ಸಿಂಗಲ್-ಎಂಜಿನ್ ವಿಮಾನವನ್ನು ಹಾರಿಸುತ್ತಿದ್ದರು ಮತ್ತು ಅಪಘಾತ ಸಂಭವಿಸಿದಾಗ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಅಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ. ತರಬೇತಿ ಹಾರಾಟದ ಸಮಯದಲ್ಲಿ ಇಬ್ಬರೂ ಪೈಲೆಟ್ ಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಹಾರ್ವೆಯ ಏರ್ ಪೈಲಟ್ ತರಬೇತಿ ಶಾಲೆಯ ಅಧ್ಯಕ್ಷರಾದ ಆಡಮ್ ಪೆನ್ನರ್ ತಿಳಿಸಿದ್ದಾರೆ.
