Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾಕಿಸ್ತಾನದಲ್ಲಿ ರೈಲು ಹೈಜಾಕ್‌: 16 ಉಗ್ರರ ಹತ್ಯೆ, 104 ಪ್ರಯಾಣಿಕರ ರಕ್ಷಣೆ

Spread the love

ಕ್ವೆಟ್ಟಾ: ಪಾಕಿಸ್ತಾನದ ಸಂಘರ್ಷಪೀಡಿತ ಪ್ರಾಂತ್ಯ ಬಲೂಚಿಸ್ತಾನದ ಸುರಂಗ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಬಲೂಚಿ ಬಂಡುಕೋರರು ಪ್ರಯಾಣಿಕ ರೈಲನ್ನು ಹೈಜಾಕ್‌ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳು, 16 ಉಗ್ರರನ್ನು ಹತ್ಯೆಗೈದು, 104 ಪ್ರಯಾಣಿಕರನ್ನು ರಕ್ಷಿಸಿವೆ ಎಂದು ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಿನ್ನೆ ಮಧ್ಯಾಹ್ನ 9 ಬೋಗಿಗಳಿದ್ದ ಜಾಫರ್ ಎಕ್ಸ್‌ಪ್ರೆಸ್ 400 ಪ್ರಯಾಣಿಕರನ್ನು ಹೊತ್ತು ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಶಸ್ತ್ರಸಜ್ಜಿತ ಉಗ್ರರು ಪರ್ವತ ಪ್ರದೇಶವಾಗಿರುವ ಗುಡಲರ್ ಮತ್ತು ಪಿರು ಕುನ್ರಿ ಎಂಬಲ್ಲಿನ ಸುರಂಗ ಮಾರ್ಗದಲ್ಲಿ ರೈಲಿಗೆ ತಡೆಯೊಡ್ಡಿ ದಾಳಿ ನಡೆಸಿದ್ದಾರೆ. ಬಲೂಚಿಸ್ತಾನ ಲಿಬರೇಶನ್ ಆರ್ಮಿ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಭದ್ರತಾ ಪಡೆಗಳು ನೀಡಿದ ಮಾಹಿತಿಯಂತೆ, ಸದ್ಯ ಉಗ್ರರ ಜೊತೆ ಗುಂಡಿನ ಚಕಮಕಿ ನಡೆಯುತ್ತಿದೆ. 104 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಈ ಪೈಕಿ ಮಹಿಳೆಯರು ಮತ್ತು ಮಕ್ಕಳಿದ್ದಾರೆ. ಸುಮಾರು 16 ಉಗ್ರರನ್ನು ಹತ್ಯೆ ಮಾಡಲಾಗಿದೆ. ಹಲವರು ಗಾಯಗೊಂಡಿದ್ದಾರೆ.

ಉಗ್ರರು ಕೆಲವು ಪ್ರಯಾಣಿಕರನ್ನು ಪರ್ವತ ಪ್ರದೇಶಕ್ಕೆ ಕೊಂಡೊಯ್ದಿರುವ ಕುರಿತು ಮಾಹಿತಿ ಇದೆ. ಭದ್ರತಾ ಪಡೆಗಳು ಕಳೆದ ರಾತ್ರಿಯೂ ಕಾರ್ಯಾಚರಣೆ ನಡೆಸಿವೆ. ಇದಕ್ಕೂ ಮುನ್ನ ರಕ್ಷಿಸಲಾಗದ 58 ಪ್ರಯಾಣಿಕರ ಪೈಕಿ 31 ಮಂದಿ ಮಹಿಳೆಯರು ಮತ್ತು 15 ಮಂದಿ ಮಕ್ಕಳಿದ್ದಾರೆ. ಇವರನ್ನು ಮತ್ತೊಂದು ರೈಲಿನ ಮೂಲಕ ಬಲೂಚಿಸ್ತಾನದ ಮಚ್ ಎಂಬ ಪಟ್ಟಣಕ್ಕೆ ರವಾನಿಸಲಾಗಿತ್ತು.

ಉಗ್ರರು ಕತ್ತಲಲ್ಲಿ ಪರಾರಿಯಾಗಲು ಸಣ್ಣ ಸಣ್ಣ ಗುಂಪುಗಳಾಗಿ ರಚಿಸಿಕೊಂಡಿದ್ದಾರೆ. ಆದರೆ ಸುರಂಗ ಮಾರ್ಗವನ್ನು ಭದ್ರತಾ ಪಡೆಗಳು ಸುತ್ತುವರೆದಿವೆೆ. ಉಳಿದ ಪ್ರಯಾಣಿಕರನ್ನೂ ಸದ್ಯದಲ್ಲೇ ರಕ್ಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಭದ್ರತಾ ಪಡೆಗಳು 80 ಮಂದಿ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದವು. ಇದರಲ್ಲಿ 43 ಮಂದಿ ಪುರುಷರು, 26 ಮಹಿಳೆಯರು ಮತ್ತು 11 ಮಂದಿ ಮಕ್ಕಳಿದ್ದರು ಎಂದು ಬಲೂಚಿಸ್ತಾನ ಸರ್ಕಾರದ ವಕ್ತಾರ ಶಹೀದ್ ರಿಂದ್ ಹೇಳಿದ್ದಾರೆ.

ಸಂಬಂಧಪಟ್ಟ ಅಧಿಕಾರಗಳು ಈ ಕುರಿತು ಹೆಚ್ಚಿನ ಮಾಹಿತಿ ನೀಡದಿದ್ದರೂ, ರಿಂದ್ ಅವರ ಪ್ರಕಾರ, ಸುರಂಗ ಮಾರ್ಗದಲ್ಲಿ ರೈಲನ್ನು ತಡೆದಿರುವ ಕುರಿತು ರೈಲು ಸಿಬ್ಬಂದಿ ಮಾಹಿತಿ ನೀಡಿದ ತಕ್ಷಣವೇ ಭದ್ರತಾ ಪಡೆಗಳು ಹಾಗು ಸೇನಾ ಪಡೆಗಳು ಸುರಂಗ ಮಾರ್ಗವಿರುವ ಪರ್ವತ ಪ್ರದೇಶಗಳನ್ನು ತಲುಪಿದ್ದವು.


Spread the love
Share:

administrator

Leave a Reply

Your email address will not be published. Required fields are marked *