Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಛತ್ತೀಸ್‌ಗಢದಲ್ಲಿ ಭೀಕರ ರೈಲು ಅಪಘಾತ: ನಿಂತಿದ್ದ ಗೂಡ್ಸ್ ರೈಲಿಗೆ ಪ್ರಯಾಣಿಕ ರೈಲು ಡಿಕ್ಕಿ; 6 ಸಾವು, ಹಲವರಿಗೆ ಗಾಯ

Spread the love

ರಾಯ್‌ಪುರ: ಗೂಡ್ಸ್‌ ರೈಲಿಗೆ ಪ್ರಯಾಣಿಕ ರೈಲು ಡಿಕ್ಕಿ (Passenger Train) ಹೊಡೆದ ಪರಿಣಾಮ ಕನಿಷ್ಠ ಆರು ಮಂದಿ ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ (Chhattisgarh’s Bilaspur) ಜಿಲ್ಲೆಯಲ್ಲಿ ನಡೆದಿದೆ.

ಬಿಲಾಸ್‌ಪುರ-ಕಟ್ನಿ ವಿಭಾಗದಲ್ಲಿ ಕೊರ್ಬಾ ಪ್ರಯಾಣಿಕ ರೈಲು ಲಾಲ್ ಖಾದನ್ ಪ್ರದೇಶದ ಬಳಿ ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕೆಲವು ಬೋಗಿಗಳು ಒಂದರ ಮೇಲೆ ಹೋಗಿ ಬಿದ್ದಿದ್ದವು.

ರೈಲ್ವೆ ರಕ್ಷಣಾ ತಂಡಗಳು, ಆರ್‌ಪಿಎಫ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ತುರ್ತು ವೈದ್ಯಕೀಯ ತಂಡಗಳು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿವೆ

ಈ ಅಪಘಾತದ ಬಳಿಕ ಈ ಮಾರ್ಗವಾಗಿ ಸಂಚರಿಸಬೇಕಿದ್ದ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದರೆ ಕೆಲವನ್ನು ಬೇರೆ ಕಡೆಗೆ ತಿರುಗಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *