Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಧ್ಯಪ್ರದೇಶದಲ್ಲಿ ದಾರುಣ ಘಟನೆ: ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಗೆ ವಿದ್ಯಾರ್ಥಿಯಿಂದ ಪೆಟ್ರೋಲ್ ಸುರಿದು ಬೆಂಕಿ

Spread the love

ಭೋಪಾಲ್: ಶಿಕ್ಷಕಿ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದಕ್ಕೆ, ವಿದ್ಯಾರ್ಥಿಯೊಬ್ಬ ಟೀಚರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಧ್ಯಪ್ರದೇಶದ ನರಸಿಂಗಪುರದಲ್ಲಿ ನಡೆದಿದೆ. ಘಟನೆಯಲ್ಲಿ ಶಿಕ್ಷಕಿಯ ದೇಹ ಶೇ.30ರಷ್ಟು ಸುಟ್ಟು ಹೋಗಿದೆ. ಅವರು ಜಬಲ್ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ಹೆಸರು ಸೂರ್ಯಾಂಶ್ ಕೊಚಾರ್, ಆತ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ.ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಪೆಟ್ರೋಲ್ ಬಾಟಲಿಯೊಂದಿಗೆ ಶಿಕ್ಷಕಿಯ ಮನೆಗೆ ತಲುಪಿದ್ದ. 26 ವರ್ಷದ ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ.

ಪ್ರಾಥಮಿಕ ತನಿಖೆಯಲ್ಲಿ ಸೂರ್ಯಾಂಶ್ ಶಿಕ್ಷಕಿಯನ್ನು ಪ್ರೀತಿಸುತ್ತಿದ್ದ ಆದರೆ ಅದು ಒನ್​ ಸೈಡೆಡ್ ಪ್ರೀತಿಯಾಗಿತ್ತು. ಆಗಸ್ಟ್ 15 ರ ಕಾರ್ಯಕ್ರಮಕ್ಕೆ ಶಿಕ್ಷಕಿ ಸೀರೆ ಧರಿಸಿ ಬಂದಾಗ, ಆರೋಪಿ ವಿದ್ಯಾರ್ಥಿನ ಏನೇನೋ ಮನಬಂದಂತೆ ಕಮೆಂಟ್ ಮಾಡಿದ್ದ, ಇದರಿಂದ ಕೋಪಗೊಂಡ ಶಿಕ್ಷಕಿ ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದರು.

ಬಳಿಕ ಸೂರ್ಯಾಂಶ್​ಗೆ ಮುಖ್ಯೋಪಾಧ್ಯಾಯರು ಕರೆ ಮಾಡಿ ಬೈದಿದ್ದರು, ಇದರಿಂದ ಆತ ಕೋಪಗೊಂಡಿದ್ದ. ಶಿಕ್ಷಕಿಗೆ ತೊಂದರೆ ಕೊಡಬೇಕೆಂದೇ ಆತ ಅಲ್ಲಿಗೆ ತೆರಳಿದ್ದ. ಶಿಕ್ಷಕಿಯನ್ನು ಮೂರು ತಿಂಗಳ ಹಿಂದಷ್ಟೇ ಅತಿಥಿ ಶಿಕ್ಷಕಿಯನ್ನಾಗಿ ನೇಮಿಸಲಾಗಿತ್ತು. ಕೊತ್ವಾಲಿ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಡೊಂಗರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣಪುರ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದರು. ಪ್ರಸ್ತುತ ಆತ ಬಂಧನದಲ್ಲಿದ್ದು, ವಿವರವಾದ ತನಿಖೆ ನಡೆಯುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *