ಕಲಬುರಗಿಯಲ್ಲಿ ಶೋಕಾಂತಿಕ ಸ್ನೇಹದ ಮರಣ: ಪತ್ನಿಯ ಅಕ್ರಮ ಸಂಬಂಧಕ್ಕೆ ಕೋಪಗೊಂಡು ಗೆಳೆಯನ ಹತ್ಯೆ

ಕಲಬುರಗಿ: ತನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನ ಪ್ರಾಣವನ್ನೇ ಗೆಳೆಯ ತೆಗೆದಿರುವಂತಹ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಮುರಡಿಯಲ್ಲಿ ನಡೆದಿದೆ. ವೈರ್ನಿಂದ ಕತ್ತಿಗೆ ಬಿಗಿದು ಅಂಬರೀಶ್(28) ನನ್ನ ಅಜಯ್ ಹತ್ಯೆಗೈದಿದ್ದಾನೆ. ಕೊಲೆ ಮಾಡಿದ ಅಜಯ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸದ್ಯ ಘಟನೆ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.


ನಡೆದದ್ದೇನು?
ಅಂಬರೀಶ್ ಹಾಗೂ ಅಜಯ್ ಇಬ್ಬರು ಕುಚಿಕು ಗೆಳೆಯರು. ಆದರೆ ಅಜಯ್ ಪತ್ನಿ ಜೊತೆ ಅಂಬರೀಶ್ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ಕೆಲ ದಿನಗಳ ಹಿಂದೆ ಅಜಯ್ ಪತ್ನಿ ಮನೆ ತೊರೆದಿದ್ದಳು. ನನ್ನ ಪತ್ನಿ ನಿನ್ನ ಮಾತು ಕೇಳುತ್ತಾಳೆ. ನನ್ನ ಜೊತೆ ಇರುವುದಕ್ಕೆ ಹೇಳುವಂತೆ ಬಾ ಎಂದು ಅಂಬರೀಶ್ ನನ್ನ ಅಜಯ್ ಬೆಂಗಳೂರಿನಿಂದ ಮುರಡಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾನೆ.

ಈ ವೇಳೆ ತನ್ನ ಮನೆಯಲ್ಲಿ ವೈರ್ನಿಂದ ಕತ್ತಿಗೆ ಬಿಗಿದು ಅಂಬರೀಶ್ನನ್ನ ಅಜಯ್ ಹತ್ಯೆ ಮಾಡಿದ್ದಾನೆ. ಸ್ನೇಹಿತ ನನ್ನು ಕೊಲೆ ಮಾಡುವುದಷ್ಟೆ ಅಲ್ಲದೆ ಅಜಯ್ ಸ್ವತಃ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
