ರಾಮನಗರದಲ್ಲಿ ದಾರುಣ ಅಂತ್ಯ: ಕೌಟುಂಬಿಕ ಕಲಹದಿಂದ ಬೇಸತ್ತು ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ; ಸಾವಿಗೂ ಮುನ್ನ ವಿಡಿಯೋದಲ್ಲಿ ಪತ್ನಿ ವಿರುದ್ಧ ಗಂಭೀರ ಆರೋಪ

ರಾಮನಗರ: ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಡದಿ (Bidadi) ರೈಲು ನಿಲ್ದಾಣದ ಸಮೀಪ ನಡೆದಿದೆ.

ಆತ್ಮಹತ್ಯೆಗೆ ಶರಣಾದವನನ್ನು ಹಾರೋಹಳ್ಳಿ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ರೇವಂತ್ ಕುಮಾರ್ (30) ಎಂದು ಗುರುತಿಸಲಾಗಿದೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡ್ತಿದ್ದ ರೇವಂತ್, ಕಳೆದ ಐದು ತಿಂಗಳ ಹಿಂದಷ್ಟೇ ಮಲ್ಲಿಕಾ ಎಂಬವಳನ್ನು ಮದುವೆಯಾಗಿದ್ದ. ಇನ್ನೂ ಆತ್ಮಹತ್ಯೆಗೂ ಮುನ್ನ ರೇವಂತ್ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾನೆ
ವೀಡಿಯೋದಲ್ಲಿ ನನಗೆ ಬದುಕಲು ಆಗ್ತಿಲ್ಲ. ಹೆಂಡತಿಯಿಂದ (Wife) ತುಂಬಾ ಟಾರ್ಚರ್ ಆಗ್ತಿದೆ. ಸಿಕ್ಕಾಪಟ್ಟೆ ಕಿರುಕುಳ ಕೊಡ್ತಿದ್ದಾಳೆ. ನನ್ನ ಸಾವಿಗೆ ಅವಳೇ ಕಾರಣ ಎಂದು ಆರೋಪಿಸಿದ್ದಾನೆ.
ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.