ಸಿಂಧ್ ನದಿಗೆ ಉರುಳಿದ ಐಟಿಬಿಪಿ ಬಸ್:ರಕ್ಷಣಾ ಕಾರ್ಯಾಚರಣೆ ಆರಂಭ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಐಟಿಬಿಪಿ ಯೋಧರನ್ನು ಕರೆದೊಯ್ಯುತ್ತಿದ್ದ ಬಸ್ ಭಾರೀ ಮಳೆಯ ನಡುವೆ ಸಿಂಧ್ ನದಿಗೆ ಉರುಳಿ ಬಿದ್ದಿದೆ.

ಈಗಾಗಲೇ ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಸಂಬಂಧಪಟ್ಟ ಸಂಸ್ಥೆಗಳೂ ನೆರವಿಗೆ ಧಾವಿಸಿವೆ. ಭಾರೀ ಮಳೆಯ ಹಿನ್ನೆಲೆ ದುರಂತ ಸಂಭವಿಸಿದ್ದು, ಕೆಲವು ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ.
ರಕ್ಷಣಾ ತಂಡಗಳ ಹುಡುಕಾಟದ ವೇಲೆ ಈವರೆಗೆ ಮೂವರು ಶಸ್ತ್ರಾಸ್ತ್ರಗಳು ಸಿಕ್ಕಿವೆ. ಇನ್ನುಳಿದ ಶಸ್ತ್ರಾಸ್ತ್ರಗಳಿಗೆ ಹುಡುಕಾಟ ನಡೆಯುತ್ತಿದೆ. ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಕಾರ್ಯಾಚರಣೆ ಮುಂದುವರಿದಿದೆ.