ಬಿಹಾರದಲ್ಲಿ ಸಿಲಿಂಡರ್ ಸ್ಫೋಟದ ದುರಂತ: ನಾಲ್ಕು ಮಕ್ಕಳು ಸುಟ್ಟು ಭಸ್ಮ

ಬಿಹಾರ :ಮುಜಫರ್‌ಪುರ ಜಿಲ್ಲೆಯಲ್ಲಿ ಅಡುಗೆ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಸಂಭವಿಸಿ ನಾಲ್ಕು ಮಕ್ಕಳು ಸುಟ್ಟು ಕರಕಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಜಫರ್ ಪುರ ಜಿಲ್ಲೆಯ ಬರಿಯಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರಮಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ವಿಪುಲ್ ಕುಮಾರ್ (5), ಬ್ಯೂಟಿ ಕುಮಾರಿ (8), ಹನ್ಸಿಕಾ ಕುಮಾರಿ (3) ಮತ್ತು ಶ್ರಿಷ್ಟಿ ಕುಮಾರಿ (4) ಎಂದು ಗುರುತಿಸಲಾಗಿದೆ.
ಮೃತರ ಸಂಬಂಧಿಕರಿಗೆ 4 ಲಕ್ಷ ರೂ. ಪರಿಹಾರ ನೀಡಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಬ್ರತಾ ಸೇನ್ ಅವರು ಪ್ರಾಥಮಿಕವಾಗಿ ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅನಿಸುತ್ತದೆ ಎಂದು ಹೇಳಿದರು.
ಮೃತರ ಹತ್ತಿರದ ಸಂಬಂಧಿಕರಿಗೆ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ತಕ್ಷಣವೇ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.’ಮನೆಗಳಿಗೆ ಹಾನಿಯಾದ ಜನರಿಗೆ ಜಿಲ್ಲಾಡಳಿತದಿಂದ ಪಡಿತರ ನೀಡಲಾಗುವುದು. ಜಿಲ್ಲಾಡಳಿತವು ಅವರಿಗೆ ಆರ್ಥಿಕ ಸಹಾಯವನ್ನೂ ನೀಡುತ್ತದೆ’ ಎಂದು ಹೇಳಿದರು.
