ಮಹಾರಾಷ್ಟ್ರದ ಭಂದಾರದಲ್ಲಿ ದುರಂತ: ಗುಂಡಿ ತಪ್ಪಿಸಲು ಹೋದ ಶಾಲಾ ಮಕ್ಕಳ ಒಮ್ನಿ ವಾಹನ ಸೇತುವೆಯಿಂದ ಕೆಳಕ್ಕೆ ಉರುಳಿ 10 ಮಕ್ಕಳಿಗೆ ಗಾಯ

ಭಂದಾರ : ಗುಂಡಿ ತಪ್ಪಿಸಲು ಹೋದ ಶಾಲಾ ಮಕ್ಕಳ ವಾಹನ ಸೇತುವೆಯಿಂದ ಕೆಳಕ್ಕೆ ಉರುಳಿದ ಘಟನೆ ಮಹಾರಾಷ್ಟ್ರದ ಭಂದಾರ ಜಿಲ್ಲೆಯಲ್ಲಿ ನಡೆದಿದೆ. ಪ್ರಾಥಮಿಕ ಶಾಲೆಯ ಮಕ್ಕಳನ್ನು ಶಾಲೆಯಿಂದ ಮರಳಿ ಮನೆಗೆ ಕರೆದುಕೊಂಡು ಬರುವಾಗ ಈ ಘಟನೆ ನಡೆದಿದೆ. ಸಣ್ಣ ಸೇತುವೆಯಿಂದ ಕಾರು ಕೆಳಕ್ಕೆ ಉರುಳಿದೆ. ಇದರ ಪರಿಣಾಮ, 10 ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡ ಮಕ್ಕಳನ್ನು ಭಂದಾರ ಜಿಲ್ಲಾಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲಾ ಮಕ್ಕಳ ಓಮ್ಮಿ ವಾಹನ ಅಪಘಾತ
ಭಂದಾರ ಜಿಲ್ಲೆಯ ಪ್ರಾಥಮಿಕ ಶಾಲೆ ಮಕ್ಕಳ ಖಾಸಗಿ ಮಾರುತಿ ಒಮ್ನಿ ವಾಹನ ಅಪಘಾತಕ್ಕೀಡಾಗಿದೆ. ಸಣ್ಣ ಒಮ್ನಿ ಕಾರಿನಲ್ಲಿ 10 ವಿದ್ಯಾರ್ಥಿಗಳನ್ನು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ವಾಹನ ಸೇತುವೆ ಆಗಮಿಸುತ್ತಿದ್ದಂತೆ ರಸ್ತೆ ಗಂಡಿ ಕಾಣಿಸಿದೆ. ಗುಂಡಿ ತಪ್ಪಿಸಲು ಚಾಲಕ ಪ್ರಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಶಾಲಾ ವಾಹನ ನೇರವಾಗಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಶಾಲಾ ವಾಹನದಲ್ಲಿದ್ದ ಎಲ್ಲಾ 10 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಆಸ್ಪತ್ರಗೆ ದೌಡಾಯಿಸಿದ ಪೋಷಕರು
ಶಾಲಾ ವಾಹನ ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಮಕ್ಕಳ ಫೋಷಕರು ಗಾಯಗೊಂಡಿದ್ದಾರೆ. ಮಕ್ಕಳ ಪೋಷಕರು ಜಿಲ್ಲಾಸ್ಪತ್ರೆಗೆ ದೌಡಾಯಿಸಿದ್ದಾರೆ. ಗಂಭೀರ ಗಾಯವಿಲ್ಲದಿದ್ದರೂ, 10 ಮಕ್ಕಳಿಗೂ ಗಾಯವಾಗಿದೆ. ಮಕ್ಕಳ ಚೀರಾಟ, ನೋವು ನೋಡಿ ಪೋಷಕರು ಕಂಗಾಲಾಗಿದ್ದಾರೆ. ವೈದ್ಯರ ತಂಡ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದೆ.
ಸ್ಥಳೀಯರು, ಪೋಷಕರ ಆಕ್ರೋಶ
ಭಂದಾರ ಜಿಲ್ಲೆಯಲ್ಲಿ ಅತೀ ಹೆಚ್ಚು ಕೆರೆಗಳಿವೆ. ಹೀಗಾಗಿ ಈ ಜಿಲ್ಲೆಯನ್ನು ಮಹಾರಾಷ್ಟ್ರದ ಕೆರೆ ಜಿಲ್ಲೆ ಎಂದು ಕರೆಯುತ್ತಾರೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಈ ಜಿಲ್ಲೆಯನ್ನು ಅಧಿಕಾರಿಗಳು ನಿರ್ಲಕ್ಷ್ಯಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಹಣ ಬಿಡುಗಡೆ ಮಾಡಿದರೂ ಸ್ಥಳೀಯ ಜಿಲ್ಲಾಡಳಿತ, ಪಂಚಾಯಿತಿ ಇಲ್ಲಿ ರಸ್ತೆ ದುರಸ್ತಿ ಬಗ್ಗೆ ಆಸಕ್ತಿ ವಹಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಪೊಷಕರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ರಸ್ತೆಗಳ ಗುಂಡಿ ಪರಿಣಾಮ ಈ ಅವಘಡ ಸಂಭವಿಸಿದೆ. ಇದಕ್ಕೆ ಹೊಣೆ ಯಾರು? ಮಕ್ಕಳು ತೀವ್ರ ನರಳಾಡುತ್ತಿದ್ದಾರೆ. ಇದು ಕಾಣಿಸುತ್ತಿಲ್ಲವೇ ಎಂದು ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.