ಒಡಿಶಾದ ದುಡುಮಾ ಜಲಪಾತದಲ್ಲಿ ದುರಂತ: ವಿಡಿಯೋ ಶೂಟ್ ಮಾಡುತ್ತಿದ್ದ ಯೂಟ್ಯೂಬರ್ ನೀರಿಗೆ ಕೊಚ್ಚಿಹೋಗಿ ನಾಪತ್ತೆ

ಕೊರಾಪುಟ್: ಯೂಟ್ಯೂಬ್ ವಿಡಿಯೋ ಶೂಟ್ ಮಾಡಲು ಒಡಿಶಾದ ಕೊರಾಪುಟ್ ಜಿಲ್ಲೆಯ ದುಡುಮಾ ಜಲಪಾತಕ್ಕೆ ತೆರಲಿದ್ದ ಯೂಟ್ಯೂಬರ್ ಜಲಪಾತದ ನೀರಿನಲ್ಲಿ ಕೊಟ್ಟಿ ಹೋದ ಘಟನೆ ನಡೆದಿದೆ.
ನಾಪತ್ತೆಯಾಗಿರುವ ಯೂಟ್ಯೂಬರ್ ಬೆರ್ಹಾಂಪುರದ ಸಾಗರ್ ತುಡು ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ, ಸಾಗರ್ ತನ್ನ ಸ್ನೇಹಿತ ಕಟಕ್‌ನ ಅಭಿಜಿತ್ ಬೆಹೆರಾ ಜೊತೆ ಮಧ್ಯಾಹ್ನ ತನ್ನ ಚಾನೆಲ್‌ಗಾಗಿ ಡ್ರೋನ್ ದೃಶ್ಯಗಳನ್ನು ಚಿತ್ರೀಕರಿಸಲು ಜನಪ್ರಿಯ ಪ್ರವಾಸಿ ದುಡುಮಾ ಜಲಪಾತಕ್ಕೆ ಬಂದಿದ್ದಾರೆ. ಈ ವೇಳೆ ಸಾಗರ್ ಜಲಪಾತ ಮಧ್ಯೆ ಇರುವ ಬಂಡೆಯೊಂದರ ಮೇಲೆ ನಿಂತು ವಿಡಿಯೋ ಶೂಟಿಂಗ್ ಮಾಡಿದ್ದಾರೆ. ಈ ವೇಳೆ ಮಚ್‌ಕುಂಡ್ ಅಣೆಕಟ್ಟಿನಿಂದ ಏಕಾಏಕಿ ನೀರು ಬಿಟ್ಟ ಕಾರಣ , ಜಲಪಾತದಲ್ಲಿ ನೀರನ ರಭಸ ಒಂದೇ ಸಮಸೆ ಏರಿಕೆಯಾಗಿದೆ. ಬಂಡೆ ಮೇಲೆ ನಿಂತಿದ್ದ ಸಾಗರ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಸ್ಥಳೀಯರು ಮತ್ತು ಇತರ ಪ್ರವಾಸಿಗರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಜಾರಿಬಿದ್ದು ನಾಪತ್ತೆಯಾದರು.
ಮಾಹಿತಿ ತಿಳಿಯುತ್ತಿದ್ದಂತೆ ಮಚ್ಕುಂಡ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಈ ವರದಿ ಸಲ್ಲಿಕೆಯಾಗುವವರೆಗೂ ಆತನ ಸುಳಿವು ಪತ್ತೆಯಾಗಿಲ್ಲ.
ಕೊರಾಪುಟ್‌ನ ಲ್ಯಾಮ್ಟಾಪುಟ್ ಪ್ರದೇಶದಲ್ಲಿ ಭಾರಿ ಮಳೆಯಾದ ಕಾರಣ ಮಚಕುಂಡ ಅಣೆಕಟ್ಟಿನ ಅಧಿಕಾರಿಗಳು ಅಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಿದ ನಂತರ ಸುಮಾರು 2,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
