Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಾಲೆಗೆ ತಡವಾಗುತ್ತದೆ ಎಂದು ಸೇತುವೆ ಬಿಟ್ಟು ಪೈಪ್ ಮೇಲೆ ದಾಟಲು ಹೋಗಿ ದುರಂತ

Spread the love

ಗಂಗಾವತಿ:ಸಿದ್ದಿಕೇರಿ ಕ್ಯಾಂಪ್ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಿನ್ನೆ ( ಜುಲೈ 22 ) ಕಾಲುಜಾರಿ ಬಿದ್ದು ಏಳನೇ ತರಗತಿ ವಿದ್ಯಾರ್ಥಿನಿ ಚೈತ್ರಾ ನರಿಯಪ್ಪ ಯಾದವ್‌ ಮೃತಪಟ್ಟಿದ್ದಾಳೆ.

ಕರೇಕಲ್ಲಪ್ಪ ಕ್ಯಾಂಪ್‌ನ ಕುರಿಹಟ್ಟಿಯ ವಿದ್ಯಾರ್ಥಿನಿ ಸಿದ್ದಿಕೇರಿ ಕ್ಯಾಂಪ್‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ದಿನ ಶಾಲೆಗೆ ತೆರಳಲು ಕಾಲುವೆ ದಾಟಬೇಕಾದ ಅನಿವಾರ್ಯತೆ ಇದ್ದು, ಅದಕ್ಕೆಂದು ಕಬ್ಬಿಣದ ಸೇತುವೆ ಸಹ ಇದೆ.

ಆದರೆ ಆ ಸೇತುವೆ ದೂರವಾಗುತ್ತೆ ಎಂಬ ಕಾರಣಕ್ಕೆ ಕಾಲವೆ ಮೇಲೆ ಹಾಕಿದ್ದ ಕೆರೆ ತುಂಬಿಸುವ ಯೋಜನೆ ಪೈಪ್‌ಲೈನ್ ಬಳಸಿ ಕಾಲುವೆ ದಾಟಲು ಮುಂದಾಗಿದ್ದಾಳೆ. ಈ ವೇಳೆ ಕಾಲು ಜಾರಿ ದುರ್ಘಟನೆ ಸಂಭವಿಸಿದೆ. ಕಂದಾಯ ನಿರೀಕ್ಷಕ ಮಹೇಶ ದಲಾಲ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸಿದೆ.


Spread the love
Share:

administrator

Leave a Reply

Your email address will not be published. Required fields are marked *