ಟ್ರಾಫಿಕ್ ಫೈನ್ ರಿಯಾಯಿತಿಗೆ ಉತ್ತಮ ಪ್ರತಿಕ್ರಿಯೆ: 4 ದಿನಗಳಲ್ಲಿ ₹14.8 ಕೋಟಿ ಸಂಗ್ರಹಿಸಿದ ಬೆಂಗಳೂರು ಪೊಲೀಸ್

ಬೆಂಗಳೂರು: ಟ್ರಾಫಿಕ್ ಫೈನ್ಗೆ ಬೆಂಗಳೂರು ಪೊಲೀಸರ ಶೇಕಡಾ 50 ರಿಯಾಯಿತಿಗೆ ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಉಪಕ್ರಮವನ್ನು ಸದುಪಯೋಗಪಡಿಸಿಕೊಂಡು ಸವಾರರು ಬಾಕಿ ದಂಡ (Fine) ಪಾವತಿಸುವ ಮೂಲಕ ಅರ್ಧದಷ್ಟು ಹಣ ಉಳಿತಾಯ ಮಾಡುತ್ತಿದ್ದಾರೆ. ಇಲ್ಲೊಬ್ಬರು ಸವಾರರು, ತಮ್ಮ ಒಂದೇ ವಾಹನದ ಮೇಲಿದ್ದ 100 ಕೇಸ್ಗೆ ಬರೋಬರಿ 46,500 ರೂ. ದಂಡ ಕಟ್ಟಿದ್ದಾರೆ.

ಶೇಕಡಾ 50 ರಿಯಾಯಿತಿಯಲ್ಲಿ ಬೈಕ್ ಮಾಲೀಕನಿಂದ ಹೆಚ್.ಎ.ಎಲ್ ಟ್ರಾಫಿಕ್ ಪೊಲೀಸರು ದಂಡ ಕಟ್ಟಿಸಿಕೊಂಡಿದ್ದಾರೆ. ಬಾಕಿ ದಂಡ ಪಾವತಿಗೆ ಸರ್ಕಾರ ಆಗಸ್ಟ್ 23 ರಿಂದ ಸೆಪ್ಟೆಂಬರ್ 9ರ ವರೆಗೆ 50% ರಿಯಾಯಿತಿ ನೀಡಿದೆ. ಹೀಗಾಗಿ ಬಾಕಿ ಉಳಿಸಿಕೊಂಡ ದಂಡವನ್ನು ವಾಹನ ಮಾಲೀಕರು ಪಾವತಿಸುತ್ತಿದ್ದಾರೆ.
ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸಂಚಾರ ಪೊಲೀಸರು ಶೇ 50ರಷ್ಟು ರಿಯಾಯಿತಿ ಘೋಷಣೆ ಮಾಡಿದ್ದರು. ಬೆಂಗಳೂರಿನಲ್ಲಿ ಬಾಕಿ ಉಳಿದಿದ್ದ ದಂಡ ವಸೂಲಿಗೆ ಪೊಲೀಸ್ ಇಲಾಖೆ 50% ರಿಯಾಯಿತಿ ನೀಡಿದೆ. ಸದ್ಯ ಇದಕ್ಕೆ ಸವಾರರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಪರಿಣಾಮ ಆರಂಭವಾಗಿ 4 ದಿನಗಳಲ್ಲಿ 14,89,36,300 ರೂ ಹಣ ಬಾಕಿ ದಂಡ ಸಂಗ್ರಹವಾಗಿತ್ತು. ಆ ಮೂಲಕ 5,25,551 ಬಾಕಿ ಕೇಸ್‌ಗಳಿಗೆ ವಾಹನ ಮಾಲೀಕರು ದಂಡ ಪಾವತಿ ಮಾಡಿದ್ದಾರೆ.
ನಿಮ್ಮ ಬಾಕಿ ದಂಡವನ್ನು ರಿಯಾಯಿತಿಯೊಂದಿಗೆ ಪಾವತಿ ಮಾಡುವ ವಿಧಾನ
- ಈ ಕೆಳಗಿನ ಮೊಬೈಲ್ ಆ್ಯಪ್‌ಗಳನ್ನು ಬಳಸಿ (ಪ್ಲೇ ಸ್ಟೋರ್ ಮತ್ತು ಅಪಲ್ ಸ್ಟೋರ್‌ನಲ್ಲಿ ಲಭ್ಯ)
- ಕರ್ನಾಟಕ ರಾಜ್ಯ ಪೊಲೀಸ್ ಆ್ಯಪ್, ಆಸ್ಟಮ್ (BTP/ಟ್ರಾಫಿಕ್ ಉಲ್ಲಂಘನೆ ವ್ಯವಸ್ಥೆ)
ಪ್ರಕ್ರಿಯೆ
- ನಿಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿ.
- ನಿಮ್ಮ ವಾಹನದ ಫೋಟೋ, ವಿವರಗಳನ್ನು ಪರಿಶೀಲಿಸಿ.
- ರಿಯಾಯಿತಿಯೊಂದಿಗೆ ದಂಡವನ್ನು ಪಾವತಿಸಿ.
- ಯಾವುದೇ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮುಖೇನ ಪಾವತಿಸಬಹುದು.
- ಅಥವಾ ನಗರದ ಇನ್ಸಾಂಟ್ರಿ ರಸ್ತೆ, “ಜೆಡಿಯನ್ ಎಕ್ಸ್‌ಪ್ರೆಸ್ ಹತ್ತಿರ ಮೊದಲನೇ ಮಹಡಿಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ (TMC)ಗೆ ಭೇಟಿ ನೀಡಬಹುದಾಗಿದೆ.
