‘ಟೂರಿಸ್ಟ್ ಫ್ಯಾಮಿಲಿ’ ಬ್ಲಾಕ್ಬಸ್ಟರ್ ಯಶಸ್ಸು: ನಿರ್ದೇಶಕ ಅಭಿಶಾನ್ ಜೀವಂತ್ಗೆ ನಿರ್ಮಾಪಕರಿಂದ ದುಬಾರಿ ಬಿಎಂಡಬ್ಲ್ಯು ಕಾರ್ ಗಿಫ್ಟ್!

ಈ ವರ್ಷ ರಿಲೀಸ್ ಆದ ಸಣ್ಣ ಸಿನಿಮಾ ಒಂದು ಸಾಕಷ್ಟು ದಾಖಲೆ ಸೃಷ್ಟಿ ಮಾಡಿದೆ ಎಂದರೆ ಅದು ತಮಿಳಿನ ‘ಟೂರಿಸ್ಟ್ ಫ್ಯಾಮಿಲಿ’ ಚಿತ್ರ. ಸರಳ ಕಥೆಯೊಂದಿಗೆ ನಿರ್ಮಿಸಲಾದ ಈ ಸಿನಿಮಾ ಬ್ಲಾಕ್ಬಸ್ಟರ್ ಆಯಿತು. ಬಾಕ್ಸ್ ಆಫೀಸ್ನಲ್ಲಿ ದಾಖಲೆಯ ಕಲೆಕ್ಷನ್ ಗಳಿಸಿತು. ತಮಿಳು ಹಾಗೂ ತೆಲುಗಿನಲ್ಲಿ ಭಾರಿ ಕಲೆಕ್ಷನ್ ಗಳಿಸಿತು. ಒಟಿಟಿಯಲ್ಲಿಯೂ ದಾಖಲೆಯ ವೀಕ್ಷಣೆಗಳನ್ನು ಗಳಿಸಿತು. ಈಗ ಈ ಚಿತ್ರದ ನಿರ್ದೇಶಕರಿಗೆ ಕಾರು ಗಿಫ್ಟ್ ಆಗಿ ಸಿಕ್ಕಿದೆ.

ಕೇವಲ 5 ಕೋಟಿ ರೂ.ಗಳಲ್ಲಿ ನಿರ್ಮಿಸಲಾದ ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾ 75 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದನ್ನು ನೋಡಿದ ನಂತರ ಅನೇಕ ಸೆಲೆಬ್ರಿಟಿಗಳು ಹೊಗಳಿದ್ದು ಗಮನಾರ್ಹ. ಈ ಟೂರಿಸ್ಟ್ ಫ್ಯಾಮಿಲಿ ಸಿನಿಮಾದೊಂದಿಗೆ, ಅಭಿಶಾನ್ ಜೀವಿಂತ್ ಎಂಬ ಹೊಸ ನಿರ್ದೇಶಕರನ್ನು ಚಿತ್ರರಂಗಕ್ಕೆ ಪರಿಚಯಿಸಲಾಯಿತು. ಅದಕ್ಕೂ ಮೊದಲು, ಯೂಟ್ಯೂಬರ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಖ್ಯಾತಿಯನ್ನು ಗಳಿಸಿದ್ದ ಅಭಿಶಾನ್, ತಮ್ಮ ಮೊದಲ ಸಿನಿಮಾದಿಂದಲೇ ಬ್ಲಾಕ್ಬಸ್ಟರ್ ಗಳಿಸಿದರು. ನಿರ್ದೇಶಕರಾಗಿ ಮಾತ್ರವಲ್ಲದೆ, ಈ ಸಿನಿಮಾದಲ್ಲಿನ ನಟನೆಯಿಂದಲೂ ಗಮನ ಸೆಳೆದರು.
ಈ ಯುವ ಮತ್ತು ಪ್ರತಿಭಾನ್ವಿತ ನಿರ್ದೇಶಕರು ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದಾರೆ. ಈ ತಿಂಗಳ 31 ರಂದು ಅವರು ತಾವು ಪ್ರೀತಿಸಿದಹುಡುಗಿಯನ್ನು ಮದುವೆಯಾಗಲಿದ್ದಾರೆ. ಈ ನಿಟ್ಟಿನಲ್ಲಿ, ಟೂರಿಸ್ಟ್ ಫ್ಯಾಮಿಲಿ ನಿರ್ಮಾಪಕ ಮಗೇಶ್ ರಾಜ್ ಅವರು ಮದುವೆಗೆ ಮುನ್ನ ಅಭಿಶಾನ್ ಅವರಿಗೆ ಅಚ್ಚರಿಯ ಉಡುಗೊರೆಯನ್ನು ನೀಡಿದರು.
ನಿರ್ಮಾಪಕ ಮಗೇಶ್ ರಾಜ್ ಅವರು ಅಭಿಶನ್ ಅವರ ವಿವಾಹದ ಸಂದರ್ಭದಲ್ಲಿ ದುಬಾರಿ ಬೆಲೆಯ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಖ್ಯಾತ ಚಲನಚಿತ್ರ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಇವುಗಳನ್ನು ನೋಡಿದ ಸಿನಿಮಾ ಫ್ಯಾನ್ಸ್ ಮತ್ತು ನೆಟ್ಟಿಗರು ಯುವ ನಿರ್ದೇಶಕ ಅಭಿಶನ್ ಅವರನ್ನು ಅಭಿನಂದಿಸುತ್ತಿದ್ದಾರೆ ಮತ್ತು ಹಾರೈಸುತ್ತಿದ್ದಾರೆ. ಅಲ್ಲದೆ ನಿರ್ಮಾಪಕರ ವಿಶಾಲ ಹೃದಯವನ್ನು ಕೊಂಡಾಡಿದ್ದಾರೆ.
‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾದ ಬಗ್ಗೆ ಹೇಳುವುದಾದರೆ, ಹಿರಿಯ ನಟಿ ಸಿಮ್ರಾನ್, ಶಶಿ ಕುಮಾರ್, ಯೋಗಿ ಬಾಬು ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಲಂಕಾದಿಂದ ಭಾರತಕ್ಕೆ ವಲಸೆ ಬರುವ ಕುಟುಂಬ ಒಂದರ ಕಥೆಯನ್ನು ಇದು ಹೊಂದಿದೆ