ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ: ಹೈಕಮಾಂಡ್ ಅಂಗಳ ತಲುಪಿದ ಹಾಲಿನ ರಾಜಕೀಯ

ಬೆಂಗಳೂರು : ಯಾವ ಲೋಕಸಭಾ ಚುನಾವಣೆಗೂ ಕಮ್ಮಿಯಿಲ್ಲದಂತೆ ಮತ್ತು ರಾಜ್ಯದ ಪ್ರತಿಷ್ಠೆಯ ಕೆಎಂಎಫ್ ( Karnataka Milk Federation ) ಅಧ್ಯಕ್ಷ ಹುದ್ದೆಗೆ ನಾಲ್ವರು ಕಾಂಗ್ರೆಸ್ ನಾಯಕರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಜೊತೆಗೆ, ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯದ ಪ್ರತಿಷ್ಠೆಗೂ ಕಾರಣವಾಗಿದ

ಬ್ಯಾಕ್‌ಲಾಗ್ ಹುದ್ದೆ 24 ವರ್ಷದಿಂದ ಬಾಕಿ, ಭರ್ತಿಗಿಲ್ಲ ಇಚ್ಛಾಶಕ್ತಿ !
‘ಡಿಕೆಶಿ ಬಿಜೆಪಿ ಸೇರ್ಪಡೆ ಬಗ್ಗೆ ದಿಲ್ಲಿಯಲ್ಲಿ ಚರ್ಚೆಯಾಗಿತ್ತು – ಡಿಕೆಶಿ ಸಿಎಂ, ವಿಜಯೇಂದ್ರ ಡಿಸಿಎಂ ಮಾಡಲು ಮಾತುಕತೆಯಾಗಿತ್ತು’
ಸಹಕಾರಿ ರಂಗದ ಈ ಅಧ್ಯಕ್ಷ ಹುದ್ದೆಗೆ ಭಾರೀ ಲಾಬಿ ನಡೆಯುತ್ತಿದೆ. ಜೊತೆಗೆ, ಎಂದಿನಂತೆ ಈ ವಿಚಾರ ಕೂಡಾ ಹೈಕಮಾಂಡ್ ಅಂಗಣ ತಲುಪಿದೆ. ಯಾಕೆಂದರೆ, ಒಂದು ಹುದ್ದೆಗೆ ನಾಲ್ವರು ಪ್ರಯತ್ನವನ್ನು ನಡೆಸುತ್ತಿರುವುದು. ಜೊತೆಗೆ, ರಾಜ್ಯ ರಾಜಕೀಯದಲ್ಲಿ ಪ್ರಮುಖವಾದ ಹುದ್ದೆ ಇದಾಗಿರುವುದು.
ಸುಮಾರು 23 ಲಕ್ಷ ಸದಸ್ಯತ್ವನ್ನು ಹೊಂದಿರುವ ಈ ಹಾಲು ಒಕ್ಕೂಟ, ನಾಲ್ಕು ಒಕ್ಕೂಟದಿಂದ ಆರಂಭವಾಗಿ, ಹದಿನಾರು ಒಕ್ಕೂಟದ ವರೆಗೆ ಬೃಹತ್ ಆಗಿ ಬೆಳೆದು ನಿಂತಿದೆ. ಗುಜರಾತ್ ಮೂಲದ ಅಮುಲ್ ನಂತರ, ದೇಶದ ಎರಡನೇ ಅತಿದೊಡ್ಡ ಹಾಲು ಒಕ್ಕೂಟ ಸಂಸ್ಥೆ ಇದಾಗಿರುವುದರಿಂದ, ಇದರ ಮೇಲೆ ಹಿಡಿತ ಸಾಧಿಸುವುದು ರಾಜಕೀಯ ನಾಯಕರಿಗೆ ಗರ್ವದ ವಿಷಯವಾಗಿದೆ.
ಕಳೆದ ಮೇ 25ರಂದು ಬಮೂಲ್ ಚುನಾವಣೆ ನಡೆದಿತ್ತು
ಕಳೆದ ಮೇ 25ರಂದು ಬಮೂಲ್ ಚುನಾವಣೆ ನಡೆದಿತ್ತು. ಅದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.ಇದು, ಕೆಎಂಎಫ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು, ಸುರೇಶ್ ಇಟ್ಟ ಮೊದಲ ಹೆಜ್ಜೆಯೆಂದೇ ವ್ಯಾಖ್ಯಾನಿಸಲಾಗುತ್ತಿತ್ತು. ರಾಮನಗರ ಜಿಲ್ಲೆಯ ವ್ಯಾಪ್ತಿಯ ಐದು ತಾಲೂಕು ಸೇರಿದಂತೆ, ಆರು ನಿರ್ದೇಶಕರು ಆಯ್ಕೆಯಾಗಿದ್ದರು. ಎಲ್ಲವೂ, ಡಿಕೆ ಶಿವಕುಮಾರ್ ಅಣತಿಯಂತೆ ನಡೆದಿತ್ತು. ಕೆಎಂಎಫ್ ಅಡಿಯಲ್ಲಿ ಬರುವ ಈ ಬಮೂಲ್ ( Bangalore Milk Union Limited ) ನಲ್ಲಿ ಡಿಕೆ ಬ್ರದರ್ಸ್ ಹಿಡಿತವನ್ನು ಸಾಧಿಸಿದ್ದರು. ಲೋಕಸಭಾ ಚುನಾವಣೆ ಸೋಲಿನ ನಂತರ, ಸಹೋದರನಿಗೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಡಿಸಿಎಂ ಪ್ರಯತ್ನ ಇದಾಗಿತ್ತು.
ಹೈಕಮಾಂಡ್ ಅಂಗಣ ತಲುಪಿರುವ ಕೆಎಂಎಫ್ ಅಧ್ಯಕ್ಷ ಹುದ್ದೆ
ರಾಜ್ಯವ್ಯಾಪಿ ಪ್ರಭಾವವನ್ನು ಹೊಂದಿರುವ ಕೆಎಂಎಫ್ ಅಧ್ಯಕ್ಷ ಹುದ್ದೆಗೆ ನಾಲ್ವರು ತೀವ್ರ ಪೈಪೋಟಿಯನ್ನು ನಡೆಸುತ್ತಿದ್ದಾರೆ. ಹಾಲಿನ ವಿಚಾರವಾಗಿರುವುದರಿಂದ, ಜನರ ಗಮನವನ್ನು ಬಹುಬೇಗ ಸೆಳೆಯಬಹುದಾದ ಹುದ್ದೆ ಇದಾಗಿರುವುದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣ, ತೀವ್ರ ಕಸರತ್ತನ್ನು ಮಾಡುತ್ತಿವೆ. ಇದು ಬರೀ ಬೆಂಗಳೂರಿಗೆ ಸೀಮಿತವಾಗದೇ, ಹೈಕಮಾಂಡ್ ಅಂಗಣದಲ್ಲೂ ಸದ್ದನ್ನು ಮಾಡುತ್ತಿದೆ. ರಾಜಕೀಯವಾಗಿ ಇನ್ನಷ್ಟು ಪ್ರಭಲವಾಗುವಂತ ಹುದ್ದೆ ಇದಾಗಿರುವುದರಿಂದ ಹಿಂದಿನಿಂದಲೂ ಕೆಎಂಎಫ್ ಅಧ್ಯಕ್ಷ ಹುದ್ದೆಯ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ.
ಇನ್ನೊಂದು ಅವಧಿಗೆ ಮುಂದುವರಿಸಲು ಭೀಮಾ ನಾಯಕ್ ಒತ್ತಡ
ಸಹೋದರನನ್ನು ಅಧ್ಯಕ್ಷರನ್ನಾಗಿ ಮಾಡುವುದು ಒಂದು ಕಡೆ. ಇನ್ನೊಂದು ಕಡೆ, ಹಾಲು ಒಕ್ಕೂಟದಂತಹ ಮಹತ್ವದ ಚುನಾವಣೆಯಲ್ಲಿ ಹಿಡಿತ ಸಾಧಿಸುವುದು ಡಿಕೆ ಶಿವಕುಮಾರ್ ಅವರ ಉದ್ದೇಶ. ಆದರೆ, ಅದು ಅಷ್ಟು ಸುಲಭವಾಗಿಲ್ಲ ಎನ್ನುವುದು ಹಾಲಿನ ಸುತ್ತ ನಡೆಯುತ್ತಿರುವ ಪಾಲಿಟಿಕ್ಸ್. ಯಾಕೆಂದರೆ, ಕೆಎಂಎಫ್ ಅಧ್ಯಕ್ಷರಾಗಿದ್ದ ಭೀಮಾ ನಾಯಕ್, ನನ್ನನ್ನು ಇನ್ನೊಂದು ಅವಧಿಗೆ ಮುಂದುವರಿಸುವಂತೆ, ಮುಖ್ಯಮಂತ್ರಿ ಅವರ ಬಳಿ ಅವಲತ್ತು ತೋಡಿಕೊಂಡಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ಆದರೆ, ಇದರ ನಿರ್ಣಯ, ಸಿಎಂ ಬಳಿ ಉಳಿಯದೇ, ಹೈಕಮಾಂಡ್ ಅಂಗಣದಲ್ಲಿದೆ.
ಕೋಲಾರ ಜಿಲ್ಲೆ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ
ಇನ್ನೊಂದು ಕಡೆ, ಕೋಲಾರ ಜಿಲ್ಲೆ ಮಾಲೂರು ಕಾಂಗ್ರೆಸ್ ಶಾಸಕ ಕೆವೈ ನಂಜೇಗೌಡ ಕೂಡಾ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲು, ಸಿಎಂ ಸಿದ್ದರಾಮಯ್ಯನವರಲ್ಲಿ ಒತ್ತಡವನ್ನು ಹಾಕುತ್ತಿದ್ದಾರೆ. ಕಳೆದ ಬಾರಿ, ಅಧ್ಯಕ್ಷರನ್ನಾಗಿ ಮಾಡುವ ವಾಗ್ದಾನವನ್ನು ಇವರಿಗೆ ನೀಡಲಾಗಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಕಳೆದ ಜುಲೈ ತಿಂಗಳಲ್ಲಿ ನಂಜೇಗೌಡ್ರು, ಕೋಮುಲ್ ( ಕೋಲಾರ ಹಾಲು ಒಕ್ಕೂಟ) ಅಧ್ಯಕ್ಷರಾಗಿ ಹ್ಯಾಟ್ರಿಕ್ ಸಾಧಿಸಿದ್ದರು. ಕೋಚಿಮುಲ್ ಇದ್ದದ್ದು, ಕೋಮುಲ್ ಆಗಿತ್ತು. ನಂಜೇಗೌಡ್ರು, ಒಟ್ಟಾರೆಯಾಗಿ, ಕೆಎಂಎಫ್ ನಲ್ಲಿ ಹಿಡಿತವನ್ನು ಹೊಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಪರಮಾಪ್ತರಲ್ಲಿ ಒಬ್ಬರಾದ ರಾಘವೇಂದ್ರ ಹಿಟ್ನಾಳ
ಇದೆಲ್ಲಾ ಒಂದು ಕಡೆಯಾದರೆ, ಸಿಎಂ ಸಿದ್ದರಾಮಯ್ಯ ಪರಮಾಪ್ತರಲ್ಲಿ ಒಬ್ಬರಾದ ರಾಘವೇಂದ್ರ ಹಿಟ್ನಾಳ, ಅಧ್ಯಕ್ಷ ಹುದ್ದೆಗೆ ಭಾರೀ ಪೈಪೋಟಿಯನ್ನು ನಡೆಸುತ್ತಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಹಿಟ್ನಾಳ್, ಕಳೆದ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರಿಗಾಗಿ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡಲು ಸಿದ್ದರಿದ್ದರು. ಇವರ ಹೆಸರು, ಅಧ್ಯಕ್ಷ ಹುದ್ದೆಗೆ ಬಲವಾಗಿ ಕೇಳಿ ಬರುತ್ತಿದೆ. ಆದರೆ, ಎರಡು ಬಣಗಳ ನಡುವಿನ ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ, ಹೈಕಮಾಂಡ್ ಇದನ್ನು ಸೌಹಾರ್ದಯುತವಾಗಿ ಬಗೆಹರಿಸಲು ಮುಂದಾಗಿದೆ.
ಚುನಾವಣೆ ನಡೆಸಲು ಇರುವ ಟೆಕ್ನಿಕಲ್ ಪ್ರಾಬ್ಲಮ್
ಸದ್ಯದ ಹಾಲಿನ ರಾಜಕೀಯದ ಪ್ರಕಾರ, ಡಿಕೆ ಸುರೇಶ್, ಭೀಮಾ ನಾಯಕ್, ಕೆವೈ ನಂಜೇ ಗೌಡ ಮತ್ತು ರಾಘವೇಂದ್ರ ಹಿಟ್ನಾಳ್ ಪೈಪೋಟಿಯಲ್ಲಿದ್ದಾರೆ. ಆದರೆ, ಕೆಎಂಎಫ್ ವ್ಯಾಪ್ತಿಯ ಎಲ್ಲಾ ಹದಿನಾರು ಒಕ್ಕೂಟಗಳಿಗೆ ಚುನಾವಣೆ ನಡೆದ ಮೇಲೆಯೇ, ಅಧ್ಯಕ್ಷರ ಆಯ್ಕೆಯಾಗುವುದು. ಈ ಪೈಕಿ, ಹದಿನೈದಕ್ಕೆ ಚುನಾವಣೆ ಮುಗಿದಿದೆ. ಆದರೆ, ಇತ್ತೀಚೆಗಷ್ಟೇ ಪ್ರತ್ಯೇಕಗೊಂಡಿರುವ ಚಿಕ್ಕಬಳ್ಳಾಪುರ ಒಕ್ಕೂಟಕ್ಕೆ ಇನ್ನಷ್ಟೇ ಚುನಾವಣೆ ನಡೆಯಬೇಕಿದೆ. ಈಗ, ಇದಕ್ಕೆ ಮೊದಲು ಚುನಾವಣೆ ನಡೆದ ನಂತರ, ಕೆಎಂಎಫ್ ಅಧ್ಯಕ್ಷರ ಆಯ್ಕೆ ಇತ್ಯರ್ಥಗೊಳ್ಳಲಿದೆ.
