Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

10 ದಿನ ಕತ್ತಲೆ ಕೋಣೆಯಲ್ಲಿ ಯಾತನೆ: ನಿತ್ರಾಣಗೊಂಡ ಮಹಿಳೆ, ಮಗುವಿನ ರಕ್ಷಣೆ; ಗಂಡನ ಕುಟುಂಬದ ಸದಸ್ಯರ ಬಂಧನ

Spread the love

ಹೈದರಾಬಾದ್: ಮಹಿಳೆಯೊಬ್ಬಳಿಗೆ ಪುಟ್ಟ ಮಗುವಿತ್ತು. ಆಕೆಗೆ ಆಕೆಯ ಗಂಡ ತನ್ನ ತಮ್ಮನ ಜೊತೆ ಲೈಂಗಿಕ ಸಂಬಂಧ ಹೊಂದಲು ಒತ್ತಾಯಿಸುತ್ತಿದ್ದ. ಆದರೆ ಮೈದುನನ ಜೊತೆ ಮಲಗಲು ಆಕೆ ಒಪ್ಪಿರಲಿಲ್ಲ. ಆಕೆಯ ಗಂಡನ ಅಪ್ಪ-ಅಮ್ಮ ಕೂಡ ಸೊಸೆ ತಮ್ಮ ಕಿರಿಯ ಮಗನ ಜೊತೆ ಸಂಬಂಧ (Extramarital Affair) ಹೊಂದಬೇಕೆಂದು ಬಯಸಿದ್ದರು. ಇದಕ್ಕೆ ಆಕೆ ಒಪ್ಪದಿದ್ದಾಗ ಪುಟ್ಟ ಮಗುವಿನ ಜೊತೆ ಆಕೆಯನ್ನು 10 ದಿನ ರೂಂನಲ್ಲಿ ಕೂಡಿಹಾಕಲಾಗಿದೆ.

ಆ ರೂಂನಲ್ಲಿ ಅವರಿಗೆ ಆಹಾರ, ನೀರು, ಕರೆಂಟ್, ಟಾಯ್ಲೆಟ್ ಯಾವ ಸೌಲಭ್ಯವನ್ನೂ ನೀಡದೆ ಕತ್ತಲೆ ಕೋಣೆಯಲ್ಲಿ ಕೂಡಿಹಾಕಲಾಗಿತ್ತು. ಆಕೆಯ ಮಗುವಿಗೆ ಕೇವಲ ಎದೆಹಾಲನ್ನು ನೀಡುತ್ತಾ ಆಕೆ 10 ದಿನಗಳ ಕಾಲ ಆ ರೂಂನಲ್ಲಿ ಬಂಧಿಸಲ್ಪಟ್ಟಿದ್ದರು. ಆದರೆ, 10 ದಿನ ಹೊಟ್ಟೆಗೆ ಆಹಾರವಿಲ್ಲದೆ ಎಳೆಮಗುವಿಗೆ ಹಾಲನ್ನೂ ನೀಡುತ್ತಿದ್ದುದರಿಂದ ಆಕೆ ಸಂಪೂರ್ಣ ನಿತ್ರಾಣವಾಗಿದ್ದರು. ಅಲ್ಲದೆ, ಟಾಯ್ಲೆಟ್ ವ್ಯವಸ್ಥೆಯೂ ಇಲ್ಲದಿದ್ದರಿಂದ ಆ ರೂಂನಲ್ಲೇ ಆಕೆ ಮತ್ತು ಆಕೆಯ ಮಗು ಮಲವಿಸರ್ಜನೆ ಮಾಡುವ ಅನಿವಾರ್ಯತೆ ಇತ್ತು. ಅದರ ಜೊತೆಗೇ ಅವರು ಮಲಗಬೇಕಿತ್ತು!

ಈ ರೀತಿಯ ಅಮಾನವೀಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 2 ವರ್ಷಗಳ ಹಿಂದೆ ರಂಜಿತ್ ಎಂಬಾತನನ್ನು ಮದುವೆಯಾಗಿದ್ದ 25 ವರ್ಷದ ಮಹಿಳೆ ತನ್ನ ಅತ್ತೆ, ಮಾವ, ಅತ್ತಿಗೆಯ ಕಿರುಕುಳದಿಂದ ಬೇಸತ್ತಿದ್ದರು. ಆಕೆಗೆ ಹೆಣ್ಣು ಮಗುವಾಗಿತ್ತು. ಆದರೆ, ರಂಜಿತ್​​ನ ತಮ್ಮ ಪ್ರವೀಣ್ ಜೊತೆ ಸಂಬಂಧ ಬೆಳೆಸಿದರೆ ಆಕೆಗೆ ಗಂಡುಮಗುವಾಗುತ್ತದೆ ಎಂಬ ಕಾರಣಕ್ಕೆ ಅವರೆಲ್ಲರೂ ಆಕೆಯನ್ನು ಪ್ರವೀಣನ ಜೊತೆ ಮಲಗಲು ಒತ್ತಾಯಿಸುತ್ತಿದ್ದರು. ಇದಕ್ಕೆ ಆಕೆ ಒಪ್ಪಿರಲಿಲ್ಲ. ಇದರಿಂದ ಆಕೆಗೆ ಕಿರುಕುಳ ನೀಡಲಾಯಿತು.

ಈ ಪ್ರಕರಣವು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ತಲುಪಿದ ನಂತರ ಇದು ದೇಶಾದ್ಯಂತ ಗಮನ ಸೆಳೆದಿದೆ. ಪೊಲೀಸರು ಆ ಮನೆಗೆ ತೆರಳಿ ಆ ಮಹಿಳೆಯನ್ನು ಕತ್ತಲೆ ಕೋಣೆಯಿಂದ ಬಿಡುಗಡೆ ಮಾಡಿದರು. ನಂತರ ಆ ಕುಟುಂಬದ ಸದಸ್ಯರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.


Spread the love
Share:

administrator

Leave a Reply

Your email address will not be published. Required fields are marked *