ಬಾಡಿಗೆ ಖರ್ಚು ತಪ್ಪಿಸಲು ಶೌಚಾಲಯವೇ ಮನೆ: 18 ವರ್ಷದ ಯುವತಿಯ ಜೀವನಗಾಥೆ ವೈರಲ್!

ಹಣ ಉಳಿತಾಯ ಮಾಡುವುದಕ್ಕಾಗಿ ಶೌಚಾಲಯವನ್ನೇ ತನ್ನ ಮಲಗುವ ಕೋಣೆಯನ್ನಾಗಿ ಪರಿವರ್ತಿಸಿದ ಯುವತಿಯ ಜೀವನಗಾಥೆ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಚೀನಾದ ಹುನಾನ್ ಮೂಲದ 18 ವರ್ಷದ ಯಾಂಗ್, ಲೈಫ್ ವ್ಲಾಗ್ಗಳಲ್ಲಿ ಇದೀಗ ಟ್ರೆಂಡಿಂಗ್ ಆಗಿದ್ದಾಳೆ.
ಯಾಂಗ್, ಪೀಠೋಪಕರಣ ಅಂಗಡಿಯಲ್ಲಿ ಕೆಲಸ ಮಾಡುತ್ತಾಳೆ. ಅವಳು ತಿಂಗಳಿಗೆ 31,776 (2,700 ಯುವಾನ್) ರೂಪಾಯಿ ಗಳಿಸುತ್ತಾಳೆ. ಆದರೆ, ಆ ನಗರದಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ವೇತನ 88,266 (7,500 ಯುವಾನ್) ರೂಪಾಯಿ.

ಇನ್ನು ಆ ನಗರದಲ್ಲಿ ಒಂದು ಕೋಣೆಯ ಬಾಡಿಗೆ 9,415 (800 ಯುವಾನ್) ದಿಂದ 21,184 (1,800 ಯುವಾನ್) ರೂ. ವರೆಗೂ ಇರುತ್ತದೆ. ಹೀಗಾಗಿ ಅಲ್ಪ ಸಂಬಳ ಪಡೆಯುವ ಯಾಂಗ್, ತನ್ನ ಬಾಸ್ನಿಂದ ಶೌಚಾಲಯದಲ್ಲಿ ವಾಸಿಸಲು ಅನುಮತಿ ಕೇಳಿದಳು. ಆರು ಚದರ ಮೀಟರ್ ವಿಸ್ತೀರ್ಣದ ಕಚೇರಿ ಶೌಚಾಲಯದಲ್ಲಿ ವಾಸಿಸಲು ತಿಂಗಳಿಗೆ 588 ರೂ. ಬಾಡಿಗೆ ಒಪ್ಪಂದ ಮಾಡಿಕೊಂಡಳು.