ತಿರುಪತಿಯ ಪವಿತ್ರತೆಯ ವಿವಾದ – ಮಾಲ್ ವಿರೋಧಿಸಿ ಫೌಂಡೇಶನ್ ಮನವಿ

ಆಂಧ್ರಪ್ರದೇಶ:ಭಗವಾನ ಶ್ರೀ ವೆಂಕಟೇಶ್ವರನ ಕ್ಷೇತ್ರವಾದ ತಿರುಪತಿಯಲ್ಲಿ ಲುಲು ಸಮೂಹದ ಅಧ್ಯಕ್ಷ ಯೂಸುಫ ಅಲಿಯವರ ಅಂತರಾಷ್ಟ್ರೀಯ ಗುಣಮಟ್ಟದ ‘ಲುಲು ಮಾಲ್’ಗೆ ಅನುಮತಿ ನೀಡಿರುವುದರಿಂದ ತಿರುಮಲದ ಪಾವಿತ್ರ್ಯವು ನಾಶವಾಗುತ್ತದೆ.

ಆದುದರಿಂದ ತಿರುಪತಿಯಲ್ಲಿನ ಲುಲು ಮಾಲ್‌ಗೆ ನೀಡಲಾಗಿರುವ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ‘ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್’ (‘ಜಿ.ಎಚ್.ಎಚ್.ಎಫ್.’) ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರಿಗೆ ಮನವಿ ಮಾಡಿದೆ. ಲುಲು ಮಾಲ್‌ಗೆ ಅನುಮತಿ ನೀಡಲೇಬೇಕಾದರೆ, ಅದನ್ನು ತಿರುಮಲ, ತಿರುಪತಿ ಮತ್ತು ತಿರುಚಾನೂರು ಈ ಸ್ಥಳಗಳಿಂದ 75 ಕಿಲೋಮೀಟರ್ ವ್ಯಾಪ್ತಿಯ ಹೊರಗೆ ನೀಡಬೇಕು ಎಂದೂ ‘ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್’ ಅಭಿಪ್ರಾಯಪಟ್ಟಿದೆ. ಫೌಂಡೇಶನ್ ಏಪ್ರಿಲ್ 20, 2025 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಿರುಪತಿಯ ಪರಿಸರದ ಪಾವಿತ್ರ್ಯವನ್ನು ಕಾಪಾಡದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.