‘ಥಗ್ ಲೈಫ್’ ಬಿಗ್ ಫೇಲ್! ಪ್ರೇಕ್ಷಕರ ನಿರೀಕ್ಷೆಗೆ ತಕ್ಕ ಚಿತ್ರ ಕೊಡಲಾಗಲಿಲ್ಲ ಸೋಲನ್ನು ಒಪ್ಪಿಕೊಂಡ ನಿರ್ದೇಶಕ ಮಣಿರತ್ನಂ

ಕಮಲ್ ಹಾಸನ್ ಮತ್ತು ನಿರ್ದೇಶಕ ಮಣಿರತ್ನಂ ಕಾಂಬಿನೇಷನ್‌ನ ʻಥಗ್ ಲೈಫ್ʼ ಸಿನಿಮಾ ಕೊನೆಗೂ ಸೋಲನ್ನು ಒಪ್ಪಿಕೊಂಡಿದೆ. ಪ್ರೇಕ್ಷಕರು ನಿರೀಕ್ಷೆ ಮಾಡಿದಂತೆ ನಾವು ಚಿತ್ರವನ್ನು ಕೊಡಲಿಲ್ಲ ಅಂತ ಸ್ವತಃ ಮಣಿರತ್ನಂ ಅವರೇ ಒಪ್ಪಿಕೊಂಡಿದ್ದಾರೆ. ಹೊಸ ಮಾದರಿಯ ಸಿನಿಮಾವನ್ನು ಕೊಡಲು ನಾವು ಪ್ರಯತ್ನಿಸಿದೆವು. ಆದರೆ, ಎಲ್ಲೋ ಹಾದಿ ತಪ್ಪಿದೆ ಅಂತಾನೂ ಅವರು ವಿನಮ್ರ ವಾಗಿ ಹೇಳಿಕೊಂಡಿದ್ದಾರೆ.


ಥಗ್ ಲೈಫ್ಸ್ ಸಿನಿಮಾ ಟ್ರೈಲರ್ ಹಾಗೂ ಟೀಸರ್ ನೋಡಿದ್ದ ಪ್ರೇಕ್ಷಕರು, ಅತೀವ ನಿರೀಕ್ಷೆ ಇಟ್ಟುಕೊಂಡಿದ್ದರು. ಕಮಲ್ ಹಾಸನ್ ಮತ್ತು ಮಣಿರತ್ನಂ ಬರೋಬ್ಬರಿ 37 ವರ್ಷಗಳ ನಂತರ ಒಟ್ಟಾಗಿ ಸಿನಿಮಾ ಮಾಡಿದ್ದರಿಂದ ಬೇರೆ ರೀತಿಯ ಚಿತ್ರವನ್ನೇ ನಿರೀಕ್ಷೆ ಮಾಡಲಾಗಿತ್ತು. ಮತ್ತೊಂದು ನಾಯಗನ್ ರೀತಿಯ ಸಿನಿಮಾ ಆಗಿರಲಿದೆ ಅಂತ ನಂಬಿಕೊಂಡಿತ್ತು. ಆದರೆ, ಸಿನಿಮಾ ರಿಲೀಸ್ ನಂತರ ಎಲ್ಲವೂ ಹುಸಿಯಾಗಿತ್ತು.

ಇದೀಗ ಥಗ್ ಲೈಫ್ ಸೋಲಿಗೆ ಕ್ಷಮೆ ಕೇಳಿದ್ದಾರೆ ನಿರ್ದೇಶಕ ಮಣಿರತ್ನಂ. ಥಗ್ ಲೈಫ್ ಬಗ್ಗೆ ಭಾರತವೇ ಅತೀ ನಿರೀಕ್ಷೆ ಹೊಂದಿತ್ತು. ಆದರೆ, ಜನರ ಮನಸ್ಸನ್ನು ಗೆಲ್ಲುವಲ್ಲಿ ʻಥಗ್ ಲೈಫ್ʼ ಸಿನಿಮಾ ಸೋತಿದೆ. ಜನರು ಅತೀ ನಿರೀಕ್ಷೆಯನ್ನು ಹೊಂದಿದ್ದರು. ನಾಯಗನ್ ರೀತಿಯ ಸಿನಿಮಾ ಆಗಲಿದೆ ಅಂತ ಕನಸು ಕಟ್ಟಿದ್ದರು. ಈ ಹಿಂದಿನ ಇತಿಹಾಸವನ್ನು ಸೃಷ್ಟಿಸುವಲ್ಲಿ ನಾವು ಎಡವಿದ್ದೆ. ಹೊಸ ಪ್ರಯತ್ನ ಮಾಡಿದೆವು. ಆದರೆ, ಅದು ಸರಿಯಾದ ದಾರಿಯಲ್ಲಿ ಇರಲಿಲ್ಲ ಅನಿಸತ್ತೆ. ಪ್ರೇಕ್ಷಕರಿಗೆ ನಿರಾಸೆ ಮಾಡಿದ್ದಕ್ಕೆ ಕ್ಷಮಿಸಿ’ ಅಂದಿದ್ದಾರೆ ಮಣಿರತ್ನಂ
