Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಥಗ್ ಲೈಫ್’ ವಿರುದ್ಧ ನಿಷೇಧದ ಎಚ್ಚರಿಕೆ: ಕಮಲ್ ಹಾಸನ್ ಕ್ಷಮೆ ಕೇಳಲೇಬೇಕೆಂದು ಒತ್ತಾಯ

Spread the love

ಬೆಂಗಳೂರು: ಕನ್ನಡ ಭಾಷೆಯ ಕುರಿತು ತಮಿಳು ನಟ ಕಮಲ್ ಹಾಸನ್ ನೀಡಿರುವ ಹೇಳಿಕೆ ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ಭಾಷಾ ವಿವಾದದ ಕಿಡಿ ಹೊತ್ತಿಸಿದೆ.
ಎರಡು ದಿನದಲ್ಲಿ ಕನ್ನಡಿಗರ ಕ್ಷಮೆ ಕೇಳದಿದ್ದರೆ ಮೇ 5 ರಂದು ತೆರೆಕಾಣಲಿರುವ ಕಮಲ್ ಹಾಸನ್ ನಟನೆಯ ʼಥಗ್ ಲೈಪ್ʼ ಚಿತ್ರ ಬಿಡುಗಡೆ ನಿಷೇಧಿಸುವುದಾಗಿ ಚಲನ ಚಿತ್ರ ವಾಣಿಜ್ಯ ಮಂಡಳಿ ಹಾಗೂ ಕನ್ನಡ ಸಂಘಟನೆಗಳು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ತಮಿಳುನಾಡಿನಲ್ಲೂ ರಾಜಕೀಯ ಪಕ್ಷಗಳು ಕನ್ನಡ ಚಿತ್ರಗಳ ಬಿಡುಗಡೆ ತಡೆಯುವುದಾಗಿ ತಿರುಗೇಟು ನೀಡಿವೆ.

ಟಿವಿಕೆ(ತಮಿಳಗ ವಲ್ವುರಿಮಯಿ ಕಚ್ಚಿ) ಶಾಸಕ ವೇಲುಮುರುಗನ್ ಅವರು ಕಮಲ್ ಹಾಸನ್ ಅವರನ್ನು ಬೆಂಬಲಿಸಿ, ಥಗ್ ಲೈಫ್ ಚಿತ್ರಕ್ಕೆ ಕರ್ನಾಟಕದಲ್ಲಿ ನಿರ್ಬಂಧ ಹೇರಿದರೆ, ತಮಿಳುನಾಡಿನಲ್ಲಿ ಯಾವುದೇ ಕನ್ನಡ ಚಿತ್ರಗಳನ್ನು ಬಿಡುಗಡೆ ನಾವೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡಿಗರ ಆಕ್ರೋಶ

ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರದ ಪೋಸ್ಟರ್‌ಗಳನ್ನು ಹರಿದು ಹಾಕಿರುವ ಕನ್ನಡ ಪರ ಸಂಘಟನೆಗಳ ಮುಖಂಡರು ಕಮಲ್ ಹಾಸನ್ ಕ್ಷಮೆಗೆ ಪಟ್ಟು ಹಿಡಿದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಕಮಲ್ ಹಾಸನ್ ಹೇಳಿಕೆಗೆ ತೀವ್ರ ಅಸಮಾಧಾನ ಹೊರಹಾಕಿದೆ.

ಕಮಲ್ ಹೇಳಿಕೆಗೆ ಸಮರ್ಥನೆ

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂಬ ಕಮಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ವೇಕು ಮುರುಗನ್ ಅವರು, ಕನ್ನಡ ಸಂಶೋಧಕರು ಸೇರಿದಂತೆ ಭಾಷಾ ವಿದ್ವಾಂಸರು ತಮಿಳು ಭಾಷೆಯನ್ನು ಕನ್ನಡ, ಮಲಯಾಳಂ, ತುಳು ಮತ್ತು ಇತರ ದ್ರಾವಿಡ ಭಾಷೆಗಳ ಮೂಲ ಎಂದು ಒಪ್ಪಿಕೊಂಡಿದ್ದಾರೆ. ಇದು ಸಾಬೀತಾಗಿರುವ ಸತ್ಯ. ಆದರೆ, ಕರ್ನಾಟಕದ ಜನ ತಮಿಳರ ವಿರುದ್ಧ ಅಸೂಯೆ ಮತ್ತು ಸ್ಪರ್ಧಾತ್ಮಕ ಮನಸ್ಥಿತಿಯಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ರಾಜಕಾರಣಿಗಳು ಜನರಲ್ಲಿ ತಮಿಳು ವಿರೋಧಿ ಭಾವನೆ ಬೆಳೆಸುತ್ತಿದ್ದಾರೆ. ತಮಿಳಿಗಿಂತ ಹಿಂದಿ ಮತ್ತು ಸಂಸ್ಕೃತವನ್ನು ಬೆಂಬಲಿಸುತ್ತಿದ್ದಾರೆ. ಆದರೆ, ಕಮಲ್ ಅವರ ಹೇಳಿಕೆಯನ್ನು ತಮಿಳುನಾಡು ರಾಜಕಾರಣಿಗಳು ಬೆಂಬಲಿಸಲಿದ್ದಾರೆ ಎಂದಿದ್ದಾರೆ.

ಕಮಲ್ ಹೇಳಿಕೆಯನ್ನು ಈಗಾಗಲೇ ಡಿಎಂಕೆ, ಪಿಎಂಕೆ, ವಿಸಿಕೆ, ಎನ್ ಟಿಕೆ ಸೇರಿದಂತೆ ಹಲವು ಪಕ್ಷಗಳು ಬೆಂಬಲಿಸಿವೆ. ಡಿಎಂಕೆ ವಕ್ತಾರ ಟಿಕೆಎಸ್ ಎಳಂಗೋವನ್ ಅವರು ಕೂಡ ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

“ಕಮಲ್ ಹಾಸನ್ ಹೇಳಿಕೆ ಅವರ ಸ್ವಂತದ್ದಲ್ಲ. ಐತಿಹಾಸಿಕ ಸಂಗತಿಗಳನ್ನು ಮಾತನಾಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಜನರನ್ನು ವಿಭಜಿಸಲು ಈ ಹೇಳಿಕೆಯನ್ನು ದಾಳವಾಗಿ ಬಳಸಿಕೊಂಡಿದೆ” ಎಂದು ಆರೋಪಿಸಿದ್ದಾರೆ.

ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಅವರು ತಮಿಳು ಭಾಷೆ ವಿಶ್ವದ ಅತ್ಯಂತ ಹಳೆಯ ಭಾಷೆಯ ಸ್ಥಾನಮಾನ ಹೊಂದಿದೆ. ಇತರ ಭಾಷೆಗಳಿಗಿಂತ ಮೊದಲೇ ಅಸ್ತಿತ್ವದಲ್ಲಿದ್ದರೂ ಎಲ್ಲಾ ಭಾಷಾ ಪರಂಪರೆಗಳನ್ನು ಗೌರವಿಸುತ್ತಿದೆ ಎಂದು ಹೇಳಿದ್ದಾರೆ.

ಚೆನ್ನೈನದಲ್ಲಿ ಇತ್ತೀಚೆಗೆ ನಡೆದ ‘ಥಗ್ ಲೈಫ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಮಲ್ ಹಾಸನ್ ಅವರು ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆ ನೀಡಿದ ಬಳಿಕ ವಿವಾದ ಸೃಷ್ಟಿಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *