Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಜಿ ದಾರಕ್ಕೆ ಬಲಿಯಾದ ಮೂವರು: ಸಂಕ್ರಾಂತಿ ಸಂಭ್ರಮದ ನಡುವೆ ಗಾಜುಲೇಪಿತ ದಾರದಿಂದ ಕತ್ತು ಸೀಳಲ್ಪಟ್ಟು ದುರ್ಮರಣ!

Spread the love

ವಾರಾಣಾಸಿ: ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗಾಳಿಪಟ ಹಾರಿಸಲು ನಿಷೇಧಿತ ಹಾಗೂ ತೀಕ್ಷ್ಣವಾದ ಗಾಜುಲೇಪಿತ ದಾರವನ್ನು ಬಳಸಿದ ಪರಿಣಾಮ ದೇಶದ ವಿವಿಧಭಾಗಗಳಲ್ಲಿ ಸಂಭವಿಸಿದ ದುರಂತಗಳಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಉತ್ತರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ದಾರದಿಂದ ಕತ್ತು ಸೀಳಲ್ಪಟ್ಟುಮೂವರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸಂಕ್ರಾಂತಿ ಹಬ್ಬದ ವೇಳೆ ಗಾಳಿಪಟ ಹಾರಾಟದಿಂದ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಹಬ್ಬದ ಸಮಯದಲ್ಲಿ ಸಂಚಾರವೂ ಹೆಚ್ಚಾಗಿರುವುದರಿಂದ ರಸ್ತೆ ಹಾಗೂ ಸೇತುವೆಗಳ ಮೇಲೆ ಅಡ್ಡವಾಗಿ ತೂಗುವ ಗಾಳಿಪಟದ ದಾರ ದ್ವಿಚಕ್ರ ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಗಾಳಿಪಟದ ದಾರ ಕುತ್ತಿಗೆಗೆ ಸುತ್ತಿಕೊಂಡು ಕತ್ತು ಸೀಳುವಂತಹ ದುರಂತಗಳು ಸಂಭವಿಸುತ್ತಿವೆ.

ಉತ್ತರಪ್ರದೇಶದಲ್ಲಿ 28 ವರ್ಷದ ಸಮೀರ್ ಹಂಶಿ ಶಾಲಾ ಕ್ಯಾಂಪಸ್ ಸಮೀಪ ಇಂತಹ ದುರಂತದಲ್ಲಿ ಮೃತಪಟ್ಟಿದ್ದಾರೆ. ಕೇರಕತ್ ಪಟ್ಟಣದ ನಿವಾಸಿಯಾಗಿದ್ದ ಅವರುಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆಗೆ ಸುತ್ತಿಕೊಂಡು ಗಂಭೀರ ಗಾಯಗೊಂಡರು. ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.

ಜೌನಪುರ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಇಂತಹ ಎರಡು ಸಾವುಗಳು ವರದಿಯಾಗಿವೆ. ಡಿಸೆಂಬರ್ 11ರಂದು ಶಾಲಾ ಶಿಕ್ಷಕ ಸಂದೀಪ್ ತ್ರಿಪಾಠಿ (45) ಗಾಜುಲೇಪಿತದಾರದಿಂದ ಕತ್ತು ಸೀಳಲ್ಪಟ್ಟು ಮೃತಪಟ್ಟಿದ್ದರು.

ಬುಧವಾರ ಉತ್ತರಪ್ರದೇಶದ ಲಕೀಂಪುರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕ ಅವಧೀಶ್ ಕುಮಾರ್ (38) ಮೃತಪಟ್ಟಿದ್ದಾರೆ. ಅವರು ತೆಲಂಗಾಣದಿಂದ ಕೃಷಿ ಕೆಲಸಕ್ಕಾಗಿಆಗಮಿಸಿದ್ದರು. ಅಲ್ಲದೆ, ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯ ಬಂಬುಳಗಿ ಗ್ರಾಮದಲ್ಲಿ ಸಂಜೀವ ಕುಮಾರ್ (48) ಎಂಬವರು ಕೂಡ ಇದೇ ರೀತಿಯ ದುರಂತದಲ್ಲಿಜೀವ ಕಳೆದುಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *