ಜಾತ್ರೆಗೆ ಹೋದ ಮೂವರು ಮಕ್ಕಳು ಹೆಣವಾಗಿ ಮರಳಿದರು!

ಮಂಡ್ಯ: ಕಾಲುಜಾರಿ ವಿಸಿ ನಾಲೆಯಲ್ಲಿ (VC Nala) ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣತಾಲೂಕಿನ ನಾರ್ತ್ ಬ್ಯಾಂಕ್ ಸಮೀಪ ನಡೆದಿದೆ. ಮೈಸೂರಿನ ಗೌಸಿಯಾನಗರದ ನಿವಾಸಿಗಳಾದ ಸೋನು (17), ಸಿಮ್ರಾನ್ (16), ಸಿದ್ದೇಶ್ (9) ಮೃತ ದುರ್ದೈವಿಗಳು. ಮೂವರು ಚಿಕ್ಕಾಯರಳ್ಳಿಯ ಮಾರಮ್ಮ ಜಾತ್ರೆಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಸೋನು ಹಾಗೂ ಸಿದ್ದೇಶ್ ಅವರ ಮೃತದೇಹಗಳನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಸಿಮ್ರಾನ್ಗಾಗಿ ವಿಸಿ ನಾಲೆಯಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಕೆಆರ್ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.