Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಮ್ಮ ಸಾವಿರಾರು ಮತದಾರರ ಹೆಸರುಗಳು ನಾಪತ್ತೆಯಾಗಿವೆ: ಸಂಜಯ್ ರಾವತ್ ಗಂಭೀರ ಆರೋಪ!

Spread the love

ಮುಂಬೈ: ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಸಾವಿರಾರು ಜನರ ಹೆಸರುಗಳು ಕಾಣೆಯಾಗಿದ್ದು ಇವಿಎಂ ಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಉದ್ದವ್‌ ಶಿವಸೇನೆ ಬಣದ ನಾಯಕ ಸಂಜಯ್ ರಾವತ್ ಆರೋಪ ಮಾಡಿದ್ದಾರೆ.

ಬೃಹನ್‌ಮುಂಬೈ ಮಹಾನಗರಪಾಲಿಕೆ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಸಮಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಂಬೈನಂತಹ ನಗರದಲ್ಲಿ ನಡೆಯುತ್ತಿರುವ ಮತದಾನದ ಮಾದರಿ ಗಂಭೀರ ವಿಷಯವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ, ಎಂಎನ್‌ಎಸ್‌, ಕಾಂಗ್ರೆಸ್‌ಗೆ ಮತ ಚಲಾಯಿಸಿದ ಸಾವಿರಾರು ಜನರ ಹೆಸರುಗಳು ಕಾಣೆಯಾಗಿದೆ ಎಂದು ದೂರಿದರು.

ಇವಿಎಂ ಯಂತ್ರ ಸರಿಯಾಗಿ ಕೆಲಸ ಮಾಡುವುದಿಲ್ಲ. ಚುನಾವಣಾ ಆಯೋಗ ನಮ್ಮ ಮಾತನ್ನು ಕೇಳಲು ಸಿದ್ಧವಾಗಿಲ್ಲ. ನಿನ್ನೆ ಹಿರಿಯ ಬಿಜೆಪಿ ನಾಯಕರು ಮತ್ತು ಚುನಾವಣಾ ಆಯೋಗದ ಸಿಬ್ಬಂದಿ ನಡುವೆ ಸಭೆ ನಡೆದಿದೆ. ನೀತಿ ಸಂಹಿತೆ ಇನ್ನೂ ಜಾರಿಯಲ್ಲಿರುವಾಗ ಈ ಸಭೆ ಹೇಗೆ ನಡೆದಿದೆ ಎಂದು ಪ್ರಶ್ನೆ ಮಾಡಿದರು


Spread the love
Share:

administrator

Leave a Reply

Your email address will not be published. Required fields are marked *