Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಒಂದೇ ಒಂದು ಸುಳಿವು ಇಲ್ಲದಿದ್ದರೂ ಸಿಕ್ಕಿಬಿದ್ದ ಕಳ್ಳರು: ಕೊಡಗು ಪೊಲೀಸರ ಸಾಹಸಗಾಥೆ

Spread the love

ಅವರೆಲ್ಲ ಅಂತರಾಜ್ಯ ನಟೋರಿಯಸ್ ಗ್ಯಾಂಗ್ ಕಳ್ಳರ ಟೀಮ್. ಏನೇ ಅಪರಾದ ಮಾಡಿದರೂ ಯಾವುದೇ ಸುಳಿವು ಬಿಡದೆ ಎಸ್ಕೇಪ್ ಆಗುತ್ತಿದ್ದರು. ಇದೇ ಟೀಂ ಕೊಡಗಿನ ಪೊಲೀಸರ ಮನೆಗೆ ಖನ್ನ ಹಾಕಿ ಎಸ್ಕೇಪ್ ಆಗಿತ್ತು. ಆದರೆ ಯಾವುದೇ ಸುಳಿವು ನೀಡದ ಖತರ್ನಾಕ್ ಟೀಂ ಅನ್ನು ಕೊಡಗು ಪೊಲೀಸರು ಬಂಧಿಸಿದ್ದೇ ರೋಚಕ.

ಪೊಲೀಸರ ಮನೆಗೆ ಖನ್ನ ಹಾಕಿದವರು ಅರೆಸ್ಟ್ :
ಹೌದು, ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಮಡಿಕೇರಿಯ ಫೈರ್ ರೆಂಜ್ ನಲ್ಲಿರುವ ಕೊಡಗು ಪೊಲೀಸರ ವಸತಿ ಗೃಹಕ್ಕೆ ನುಗ್ಗಿದ ಖತರ್ನಾಕ್ ಗಳ ಟೀಂ ಪೊಲೀಸರ ಮನೆಯಿಂದ 90 ಸಾವಿರ ನಗದು ಹಾಗೂ ಇರತ ಕೆಲವು ಬೆಲೆ ಬಾಳುವ ವಸ್ತುಗಳನ್ನ ಕದ್ದು ಎಸ್ಕೇಪ್ ಆಗಿದ್ರು. ಇಲ್ಲಿ ಕಳ್ಳರನ್ನ ಹಿಡಿಯುವ ಪೊಲೀಸರ ಮನೆಗಳ ಮೇಲೆ ಕನ್ನ ಹಾಕಿದ್ದು ಸಾರ್ವಜನಿಕ ಟೀಕೆಗೂ ಕಾರಣವಾಗಿತ್ತು. ಯಾವುದೇ ಸುಳಿವು ಇಲ್ಲದ ಈ ಪ್ರಕರಣವನ್ನ ಚಾಲೆಂಜ್ ಆಗಿ ಸ್ವೀಕರಿಸಿದ ಕೊಡಗು ಎಸ್ಪಿ ರಾಮರಾಜನ್ ನೇತೃತ್ವದ ತಂಡ, ಆರೋಪಿಗಳ ಪತ್ತೆಗೆ ಟೀಂ ರಚನೆ ಮಾಡಿತ್ತು. ಆದ್ರೆ ಪೊಲೀಸರಿಗೆ ಸವಾಲಾಗಿದ್ದೇ ಇಲ್ಲಿ ಆರೋಪಿಗಳು ಒಂದೇ ಒಂದು ಸಣ್ಣ ಸುಳಿವನ್ನ ಕೂಡ ಬಿಟ್ಟು ಹೋಗದೆ ಇರೋದು. ಹಾಗಾಗಿ ಪೊಲೀಸರು ಕಳ್ಳತನವಾದ ಅಂದಾಜು ಸಮಯವನ್ನ ಆಧರಿಸಿ ಸಿಸಿ ಕ್ಯಾಮರಗಳ ಪರಿಶೀಲನೆ ಮುಂದಾಗ್ತಾರೆ. ಒಂದೇ ಒಂದು ಸಿಸಿ ಕ್ಯಾಮರದಲ್ಲಿ ಕಳ್ಳರ ಪತ್ತೆಯಾಗುತ್ತದೆ. ಈ ವಿಡಿಯೋ ಆಧರಿಸಿದ ಪೊಲೀಸರು 700ಕಿ.ಲೋ ಮೀಟರ್ ವರೆಗೆ ಸರ್ಜಿಂಗ್ ನಡೆಸಿ ಮಧ್ಯಪ್ರದೇಶದ ಧಾರ್ ಜಿಲ್ಲೆ ನಟೋರಿಯಸ್ ಗ್ಯಾಂಗ್ ನ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. 23 ವರ್ಷದ ಸುರೇಶ್ ಸೆಂಗಾರ್ ಮತ್ತೊಬ್ಬ 27 ವರ್ಷದ ಮನೇಶ್ ಬಗೇಲ್ ರನ್ನ ಪಿರಿಯಾಪಟ್ಟಣದಲ್ಲಿ ಪೊಲೀಸರು ಬಂದಿಸಿದ್ದಾರೆ.

ಇನ್ನು ಇವರನ್ನ ಪತ್ತೆ ಹಚ್ಚಲು ಕೊಡಗು ಪೊಲೀಸರು ಹರ ಸಹಾಸವನ್ನೆ ಪಟ್ಟಿದ್ದಾರೆ. ಹಗಲು ರಾತ್ರಿ, ಊಟ ತಿಂಡಿ ನಿದ್ದೆ ಇಲ್ಲದೆ ಸರ್ಚ್ ಮಾಡಿದ್ದಾರೆ. ಮಕ್ಕಂದೂರಿನ ಬೈಕ್ ಕಳ್ಳತನ ಎಲ್ಲವನ್ನೂ ಸೂಕ್ಷ್ಮ ವಾಗಿ ಪರಿಶೀಲಿಸಿದ ಪೊಲೀಸರು ಮೊದಲು ಸಿಸಿ ಕ್ಯಾಮರಗಳ ಪರಿಶೀಲನೆ ನಡೆಸುತ್ತಾರೆ. ಪ್ರತಿ ಚೆಕ್ ಪೋಸ್ಟ್ ನಲ್ಲಿ ಆರೋಪಿಗಳು ಬರೋದು, ಚೆಕ್ ಪೋಸ್ಟ್ ಇರುವಾಗ ಇಬ್ಬರೇ ಬರೋದು ಚೆಕ್ ಪೋಸ್ಟ್ ಬಳಿಕ ಮೂವರು ಬೈಕ್ ನಲ್ಲಿ ತೆರಳೋದು ಸಾಮಾನ್ಯವಾಗಿದ್ದು, ಎಲ್ಲವನ್ನೂ ಸೂಕ್ಷ್ಮ ವಾಗಿ ಪರಿಶೀಲನೆ ನಡೆಸಿದ ಪೊಲೀಸರು ಗೋವಾ, ಮಹಾರಾಷ್ಟ್ರ ಮಧ್ಯಪ್ರದೇಶ ಹಾಗೂ ಕರ್ನಾಟಕದ ಕೆಲವು ಕಡೆಗಳಲ್ಲೂ ಕೊಡಗು ಪೊಲೀಸ್ ಟೀಂ ಹುಡುಕಾಟ ನಡೆಸಿದ್ದಾರೆ. ಪೊಲೀಸರು ಅನುಮಾನದ ಮೇಲೆ ಅರವತ್ತರಿಂದ ಎಪ್ಪತ್ತು ಜನರ ವಿಚಾರಣೆ ನಡೆಸಿದ್ದಾರೆ ಒಟ್ಟಾರೆಯಾಗಿ ಒಂದು ಲಕ್ಷದ ಕಳ್ಳತನ ಪ್ರಕರಣದ ಕಾರ್ಯಚರಣೆಯಲ್ಲಿ‌15 ಲಕ್ಷ ಖರ್ಚಾಗಿದೆ ಎಂದು ಕೊಡಗು ಎಸ್ಪಿ ರಾಮರಾಜನ್ ತಿಳಿಸಿದ್ದಾರೆ.

ಈ ಖತರ್ನಾಕ್ ಟೀಮ್ ನ ಪ್ಲಾನ್ ಹೇಗಿತ್ತು ಅಂದ್ರೆ ಇವರು ಯಾವುದೇ ಮೊಬೈಲ್ ಗಳನ್ನ ಬಳಸುತ್ತಿರಲಿಲ್ಲ. ಯಾವುದೇ ಸಣ್ಣ ಸುಳಿವನ್ನ ಕೂಡ ಬಿಡ್ತಾ ಇರಲಿಲ್ಲ. ಕಾಡು ಪ್ರದೇಶದ ಅಪಾರ್ಟ್ಮೆಂಟ್ ನ ಬಿಲ್ಡಿಂಗ್ ಗಳೆ ಇವರ ಟಾರ್ಗೆಟ್. ಯಾಕಂದ್ರೆ ಇವರು ಕಳ್ಳತನದಲ್ಲಿ ಬಹಳ ಎಕ್ಸಪರ್ಟ್ ಗಳಾಗಿರೋದ್ರಿಂದ ಇಂತ ಮನೆಗಳನ್ನೆ ಟಾರ್ಗೇಟ್ ಮಾಡ್ತಾ ಇದ್ರು‌. ಕಳ್ಳತನದ ಸಮಯದಲ್ಲಿ ಸುಲಭವಾಗಿ ಎಸ್ಕೇಪ್ ಆಗಲು ಇಂಥ ಮನೆಗಳನ್ನೇ ಟಾರ್ಗೆಟ್ ಮಾಡ್ತಾ ಇದ್ದರಂತೆ. ಇನ್ನು ಈ ಗ್ಯಾಂಗ್ ಬಹಳ ನಟೋರಿಯಸ್ ಗ್ಯಾಂಗ್ ಕೂಡ ಹೌದು‌. ಈ ಹಿಂದೆ ಸಾರ್ವಜನಿಕವಾಗಿ ಕಳ್ಳತನ ಎಸಗುವಾಗ ಸಾರ್ವಜನಿಕವಾಗಿ ಸಿಕ್ಕಿಬಿದ್ದಾಗ ಸ್ಥಳಿಯರೊಬ್ಬರ ಕಣ್ಣನೆ ಕಿತ್ತು ಎಸ್ಕೇಪ್ ಆಗಿದರಂತೆ. ಹೀಗಾಗಿ ನಮ್ಮ ಪೊಲೀಸರು ಒಂದು ತಿಂಗಳ ಕಾಲ ಮಧ್ಯಪ್ರದೇಶ ಧಾರ್ ಜಿಲ್ಲೆಯಲ್ಲಿ ಮಾರು ವೇಶದಲ್ಲಿದ್ದುಕೊಂಡು ಅವರ ಚಲನವಲನಗಳನ್ನ ಸೂಕ್ಷ್ಮವಾಗಿ ಪರಿಶೀಲಿಸಿ ಕೊನೆಯದಾಗಿ ಆರೋಪಿಗಳನ್ನ ಬಂಧಿಸಿದ್ದಾರೆ

ಪೊಲೀಸ್ ಕ್ವಾರ್ಟರ್ ಕಳ್ಳತನದಲ್ಲಿ ಒಂದು ಬ್ಲಾಡ್ ಸ್ಯಾಂಪಲ್ ಸಿಕ್ಕಿದ್ದು ಇದು ಮೂವರು ಆರೋಪಿಗಳ ಪೈಕಿ ಒಬ್ಬನದಾಗಿದೆ. ಇದರಲ್ಲಿ ಆತ ಬಂದ ಸಮಯದಲ್ಲಿ ಆತನಿಗೆ ಜಿಗಣೆ ಕಚ್ಚಿದ್ದು ಅದರ ರಕ್ತದ ಸ್ಯಾಂಪಲ್ ಹಾಗೂ ಆರೋಪಿ ಒಬ್ಬನ ರಕ್ತದ ಸ್ಯಾಪಂಲ್ ಒಂದೇ ಆಗಿರೋದು ಈ ಒಂದು ಪ್ರಕರಣಕ್ಕೆ ಮತ್ತಷ್ಟು ಬಲ ತುಂಬಿದಂತಾಗಿದೆ ಎನ್ನುತ್ತಾರೆ ಕೊಡಗು ಎಸ್ಪಿ ರಾಮರಾಜನ್.


Spread the love
Share:

administrator

Leave a Reply

Your email address will not be published. Required fields are marked *