Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಳ್ಳತನದ ಚಟ: ಮಗನನ್ನೇ ಕಟ್ಟಿಹಾಕಿದ ಪೋಷಕರು!

Spread the love

ನಾಗ್ಪುರ: ನಿರಂತರವಾಗಿ ಮೊಬೈಲ್ ಕಳ್ಳತನ ಮಾಡುತ್ತಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹನ್ನೆರಡು ವರ್ಷದ ಬಾಲಕನನ್ನು ಪೋಷಕರೇ ಕಳೆದ ಎರಡು ತಿಂಗಳಿನಿಂದ ಪ್ರತಿದಿನ ಹಲವು ಗಂಟೆಗಳ ಕಾಲ ಕಟ್ಟಿಹಾಕುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕನ ಕದಿಯುವ ಚಟದ ಕಾರಣದಿಂದ ದಿನಗೂಲಿ ಪೋಷಕರು ಕೆಲಸಕ್ಕೆ ತೆರಳುವ ವೇಳೆ ಬಾಲಕನ ಕೈಗಳನ್ನು ಸರಪಣಿಯಿಂದ ಕಟ್ಟಿ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಂಡ ನೀಡಿದ ಸುಳಿವಿನ ಮೇರೆಗೆ ಶುಕ್ರವಾರ ಬಾಲಕನನ್ನು ರಕ್ಷಿಸಲಾಗಿದೆ. ಶಾಲೆಬಿಟ್ಟು ಮನೆಯಲ್ಲಿದ್ದ ಬಾಲಕನನ್ನು ಸರ್ಕಾರಿ ಬಾಲಗೃಹಕ್ಕೆ ಕಳುಹಿಸಲಾಗಿದೆ.

ಮನೆಗೆ ಹೋಗಿ ನೋಡಿದಾಗ ಬಕೆಟ್ ಮೇಲೆ ಆತನನ್ನು ನಿಲ್ಲಿಸಲಾಗಿತ್ತು. ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗುವಾಗ ಪೋಷಕರು ಆತನನ್ನು ಕಟ್ಟಿಹಾಕುತ್ತಿದ್ದರು. ಕಟ್ಟಿಹಾಕಿದ್ದರಿಂದ ಉಂಟಾಗಿರುವ ಗಾಯಗಳು ಕನಿಷ್ಠ ಎರಡರಿಂದ ಮೂರು ತಿಂಗಳಷ್ಟು ಹಳೆಯವು” ಎಂದು ಮೂಲಗಳು ಹೇಳಿವೆ.

ಬಾಲಕನಿಗೆ ನಡವಳಿಕೆಗೆ ಸಂಬಂಧಿಸಿದ ಸಮಸ್ಯೆ ಇದೆ ಎನ್ನಲಾಗಿದ್ದು, ಈ ಬಗ್ಗೆ ಅಜ್ನಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಈತನ ತಪ್ಪುಗಳ ಬಗ್ಗೆ ಅದರಲ್ಲೂ ಮುಖ್ಯವಾಗಿ ಕದಿಯುವ ಚಟದ ಬಗ್ಗೆ ಜಿಗುಪ್ಸೆಗೊಂಡ ಪೋಷಕರು ಆತನನ್ನು ಕಟ್ಟಿಹಾಕುತ್ತಿದ್ದರು ಎಂದು ಮೂಲಗಳು ಹೇಳಿವೆ. ಇದೇ ಕಾರಣಕ್ಕೆ ಪೋಷಕರು ಈತನನ್ನು ಶಾಲೆಯಿಂದ ಬಿಡಿಸಿದ್ದರು.

ಬಾಲಕನ ಕಾಲು ಮತ್ತು ಕೈಗಳಲ್ಲಿ ಇರುವ ಗಾಯಗಳು ಹಾಗೂ ಮಾನಸಿಕ ಮತ್ತು ದೈಹಿಕ ಆಘಾತ, ಸರಪಣಿ ಮತ್ತು ಹಗ್ಗದಿಂದ ಬಿಗಿದ ಕಾರಣದಿಂದ ಆಗಿವೆ ಎಂದು ವೈದ್ಯಕೀಯ ಪರೀಕ್ಷೆ ದೃಢಪಡಿಸಿದೆ. ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಪ್ರಕರಣವನ್ನು ಪ್ರಸ್ತುತಪಡಿಸಲಾಗಿದೆ. ಪೊಲೀಸರು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ತನಿಖೆ ನಡೆಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *