Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಜ್‌ಕುಮಾರ್ ಎಂಬ ಹೆಸರು ಬಂದಿದ್ದೇ ಒಂದು ರೋಚಕ ಕಥೆ: ಅಣ್ಣಾವ್ರಿಗೇ ಗೊತ್ತಿರದ ಸತ್ಯ!

Spread the love

ರಾಜ್ ಕುಮಾರ್ ಅವರ ಮೂಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ‘ಬೇಡರ ಕಣ್ಣಪ್ಪ’ ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕರು ಅವರ ಹೆಸರನ್ನು ರಾಜ್ ಕುಮಾರ್ ಎಂದು ಬದಲಾಯಿಸಿದ್ದರು. ರಾಜ್ ಕುಮಾರ್ ಅವರಿಗೆ ಈ ಬಗ್ಗೆ ತಿಳಿದಿರಲಿಲ್ಲ. ಈ ಬದಲಾವಣೆಯ ಕುರಿತು ಅವರು ನೀಡಿದ ಸಂದರ್ಶನದ ಆಡಿಯೋ ಈಗ ವೈರಲ್ ಆಗಿದೆ.

ರಾಜ್​ಕುಮಾರ್ (Rajkumar) ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿಡಿದವರು. ಅವರು ನಮ್ಮನ್ನು ಬಿಟ್ಟು ಹಲವು ವರ್ಷಗಳೇ ಕಳೆದಿದ್ದರೂ ಈಗಲೂ ಅವರ ಹೆಸರು ಚಾಲ್ತಿಯಲ್ಲಿ ಇದೆ. ಅವರು ಹಾಕಿಕೊಟ್ಟ ಮಾರ್ಗದರ್ಶನವನ್ನು ಅನೇಕರು ಫಾಲೋ ಮಾಡುತ್ತಿದ್ದಾರೆ. ರಾಜ್​ಕುಮಾರ್ ಮೂಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಆ ಬಳಿಕ ಅವರ ಹೆಸರನ್ನು ರಾಜ್​ಕುಮಾರ್ ಎಂದು ಬದಲಿಸಲಾಯಿತು. ಈ ಬದಲಾವಣೆ ಬಗ್ಗೆ ರಾಜ್​ಕುಮಾರ್ ಅವರಿಗೇ ತಿಳಿದಿರಲಿಲ್ಲ.

ರಾಜ್​ಕುಮಾರ್ ನಾಟಕಗಳನ್ನು ಮಾಡಿಕೊಂಡಿದ್ದವರು. ಗುಬ್ಬಿ ವೀರಣ್ಣ ಕಂಪನಿಯಲ್ಲಿ ಅವರಿದ್ದರು. 1954ರಲ್ಲಿ ಬಂದ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಎಚ್​ಎಲ್​ಎನ್​ ಸಿಂಹ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರದ ಡೈರೆಕ್ಟರ್ ಸಿಂಹ ಅವರೇ ತಂಡದ ಜೊತೆ ಚರ್ಚಿಸಿ ಮುತ್ತುರಾಜ್ ಎಂಬ ಹೆಸರನ್ನು ರಾಜ್​ಕುಮಾರ್ ಆಗಿ ಬದಲಿಸಿದ್ದರು. ಆ ಬಗ್ಗೆ ರಾಜ್​ಕುಮಾರ್ ಸಂದರ್ಶನ ಒಂದರಲ್ಲಿ ಹೇಳಿದ್ದರು. ಅದರ ಆಡಿಯೋ ಈಗ ವೈರಲ್ ಆಗಿದೆ. ಈ ಆಡಿಯೋನ ಅನೇಕರು ಇಷ್ಟಪಟ್ಟಿದ್ದಾರೆ.

‘ಬೇಡರ ಕಣ್ಣಪ್ಪ ಸಿನಿಮಾಗೆ ಹೋದಾಗ ಹೆಸರು ಬದಲಾಗಿತ್ತು. ಒಂದು ತಿಂಗಳು ಶೂಟ್ ಆಗಿತ್ತು. ನಾನು ಪೇಪರ್​ನಲ್ಲಿ ರಾಜ್​ಕುಮಾರ್ ಹೆಸರು ನೋಡಿ ಗಾಬರಿ ಆದೆ. ನನ್ನ ಹೆಸರು ಮುತ್ತುರಾಜು. ಬೇಡರಕಣ್ಣಪ್ಪ ಪಾತ್ರ ಕೊಟ್ಟಿದ್ದಾರೆ. ಆದರೆ, ಇಲ್ಲಿ ಯಾರೋ ರಾಜ್​ಕುಮಾರ್ ಅನ್ನೊರನ್ನು ಸೇರಿಸಿಕೊಂಡಿದ್ದಾರೆ ಎಂದುಕೊಂಡೆ. ನನ್ನ ನಟನೆ ಚೆನ್ನಾಗಿಲ್ಲ ಅಂತ ಬೇರೆ ಯಾರನ್ನೋ ಹಾಕಿಕೊಂಡಿದ್ದಾರೆ. ಕೊಟ್ಟರು ಕೈ ಅಂದುಕೊಂಡೆ’ ಎಂದಿದ್ದರು ರಾಜ್​ಕುಮಾರ್.

‘ಯಾರು ರಾಜ್​ಕುಮಾರ್ ಎಂದು ನಾನು ಸಿಂಹ ಅವರನ್ನು ಕೇಳಿದೆ. ಮುತ್ತು ರಾಜ್ ಹೆಸರನ್ನು ತೆಗೆದು, ನಾವೇ ರಾಜ್​ಕುಮಾರ್ ಅಂತ ಹೆಸರು ಬದಲಾಯಿಸಿದ್ದೇವೆ. ನನಗೆ ನಾಚಿಕೆ ಆಯ್ತು. ನಾನು ಮಾಡ್ತಿರೋದು ಮೊದಲ ಸಿನಿಮಾ ಇದು. ಒಳ್ಳೆಯ ಹೆಸರು ಬಂದರೆ ರಾಜ್​ಕುಮಾರ್ ಅಂತ ಇಟ್ಟಿದ್ದಕ್ಕೆ ತೊಂದರೆ ಇಲ್ಲ, ಆದರೆ ಸಿನಿಮಾ ಚೆನ್ನಾಗಿ ಆಗಿಲ್ಲ ಎಂದರೆ, ಈ ಕರ್ಮಕ್ಕೆ ಇವನು ರಾಜ್​ಕುಮಾರ್ ಅಂತ ಹೆಸರು ಇಟ್ಕೊಂಡ್ನಾ ಅಂತ ಕೇಳೋ ತರ ಆಗಬಹುದು’ ಎಂದು ರಾಜ್​ಕುಮಾರ್ ವಿವರಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *