27 ಪ್ರಕರರಗಳಲ್ಲಿ ಗೆದ್ದಿದ್ದ ಆ ನಕಲಿ ವಕೀಲ

ಕೀನ್ಯಾ:ಯಾವುದು ನಕಲಿ ಯಾವುದು ಅಸಲಿ ಎಂದು ಗುರುತಿಸುವುದೇ ಕಷ್ಟವಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ವೈದ್ಯರೆಂದು ಹೇಳಿಕೊಂಡು ಜನಸಾಮಾನ್ಯರೆಂದು ಯಾಮಾರಿಸುವ ಬಗೆಗಿನ ಸುದ್ದಿ ಗಳನ್ನು ಆಗಾಗ ಕೇಳುತ್ತಿರುತ್ತೇವೆ.
ಆದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಕಲಿ ವಕೀಲರ ಹಾವಳಿ ಹೆಚ್ಚಾಗಿದೆ. ಕಾನೂನು ವ್ಯವಸ್ಥೆ ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ನಕಲಿ ವಕೀಲ ಎಂದು ಯಾಮಾರಿಸಿದ್ದು ಮಾತ್ರವಲ್ಲ ಈತನು ತನ್ನ ಬುದ್ಧಿವಂತಿಕೆಯಿಂದ ಎಲ್ಲಾ ಕೇಸ್ ಗಳನ್ನು ಗೆದಿದ್ದಾನೆ. ಈತನ ಹೆಸರು ಬ್ರಿಯನ್ ಮೆಂಡ ಆಗಿದ್ದು, ಈ ಘಟನೆಯೂ ಕೀನ್ಯಾ ದಲ್ಲಿ ನಡೆದಿದೆ.
ಈಗಿನ ಕಾಲದಲ್ಲಿ ವಕೀಲ ವೃತ್ತಿ ಸೇರಲು ಬೇಕಾದ ಪದವಿ ಪಡೆದುಕೊಂಡಿದ್ದರೂ ಕೇಸ್ ಗಳನ್ನು ಗೆಲ್ಲಲು ಅಷ್ಟೇ ಬುದ್ಧಿವಂತಿಕೆ ಬೇಕಾಗುತ್ತದೆ. ಇಂತಹ ಕಾಲಘಟ್ಟದಲ್ಲಿ ಬ್ರಿಯನ್ ಮೆಂಡ ಹೆಸರಿನ ನಕಲಿ ವಕೀಲನೊಬ್ಬನು ಒಂದಲ್ಲ, ಎರಡಲ್ಲ ಬರೋಬ್ಬರಿ 27 ಪ್ರಕರಣಗಳನ್ನು ಗೆದ್ದು, ವಕೀಲ ವೃತ್ತಿಯಲ್ಲಿರುವವರಿಗೂ ಅಚ್ಚರಿ ಮೂಡುವಂತೆ ಮಾಡಿದ್ದಾನೆ.
ಕೀನ್ಯಾದ ಈ ವ್ಯಕ್ತಿಯೂ ನಿಜವಾದ ವಕೀಲನಲ್ಲ, ಜನಸಾಮಾನ್ಯರಿಗಾಗಿ ಸರಿಸುಮಾರು 26 ಪ್ರಕರಣಗಳನ್ನು ಗೆದ್ದುಕೊಂಡಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಈತನು ತನ್ನ ಬುದ್ಧಿವಂತಿಕೆಯನ್ನು ಬಳಸಿಕೊಂಡು ತನ್ನ ಮೇಲೆ ಹಾಕಲಾದ ಕೇಸ್ ವಿರುದ್ಧ ವಾದಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಈ ನಕಲಿ ವಕೀಲನು 27 ನೇ ಪ್ರಕರಣವನ್ನು ವಾದಿಸಿ ಗೆದಿದ್ದು ವಕೀಲ ವೃತ್ತಿಯಲ್ಲಿರುವವವರೂ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾನೆ. ಯಾವುದೇ ಕಾನೂನು ಪದವಿ ಪಡೆಯದಿದ್ದರೂ ಕೂಡ ತನ್ನ ಚಾಣಚಕ್ಯತೆ ಹಾಗೂ ಬುದ್ಧಿವಂತಿಕೆಯಿಂದ ಒಟ್ಟಾರೆ 27 ಪ್ರಕರಣಗಳನ್ನು ವಾದಿಸಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ.