ಥಾಯ್ಲೆಂಡ್: ಪ್ರಧಾನಮಂತ್ರಿ ಪೇಟೊಂಗ್‌ಟರ್ನ್ ಶಿನಾವತ್ರಾ ಅಮಾನತು; ಸಾಂವಿಧಾನಿಕ ಕೋರ್ಟ್ ಆದೇಶ!

ಥಾಯ್ಲೆಂಡ್: ಥಾಯ್ ಪ್ರಧಾನಮಂತ್ರಿ ಪೇಟೊಂಗ್‌ಟರ್ನ್ ಶಿನಾವತ್ರಾ ಅವರನ್ನು ಥಾಯ್ಲೆಂಡ್ ಸಾಂವಿಧಾನಿಕ ಕೋರ್ಟ್ ಮಂಗಳವಾರ (ಜು.01) ಪ್ರಧಾನಿ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ನೀಡಿದೆ.

ಶಿನಾವತ್ರಾ ಅವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಬಾಕಿ ಇದ್ದಿರುವುದಾಗಿ ವರದಿ ವಿವರಿಸಿದೆ.
ಕೋರ್ಟ್ ಆದೇಶದ ಪ್ರಕಾರ, ಶಿನಾವತ್ರಾ ವಿರುದ್ಧ ನಮಗೆ 36 ಸೆನೆಟರ್ ಗಳು ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ. ಅಲ್ಲದೇ ಕಾಂಬೋಡಿಯಾ ಮಾಜಿ ಪ್ರಧಾನಿ ಹುನ್ ಸೇನ್ ಅವರಿಗೆ ಆಡಿಯೋ ಅನ್ನು ಸೋರಿಕೆ ಮಾಡಿರುವುದು ಸಾಂವಿಧಾನದ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಪೇಟೊಂಗ್‌ಟರ್ನ್ ಶಿನಾವತ್ರಾ ವಿರುದ್ಧ ವಿಚಾರಣೆ ನಡೆಯುತ್ತಿರುವುದರಿಂದ ಡೆಪ್ಯುಟಿ ಪ್ರಧಾನಮಂತ್ರಿ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.
ಪೇಟೊಂಗ್‌ಟರ್ನ್ ಶಿನಾವತ್ರಾ ಅವರನ್ನು ಪ್ರಧಾನಿ ಹುದ್ದೆಯಿಂದ ಅಮಾನತು ಮಾಡಿರುವ ಕೋರ್ಟ್ ಆದೇಶದ ಬಗ್ಗೆ ಥಾಯ್ ಸರ್ಕಾರ ತಕ್ಷಣವೇ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ವರದಿ ತಿಳಿಸಿದೆ.
