Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟೆಕ್ಸಾಸ್: ಸಾಮೂಹಿಕ ಗುಂಡಿನ ದಾಳಿಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬಲಿ; ಘಟನೆಯಲ್ಲಿ ಒಟ್ಟು ನಾಲ್ವರು ಮೃತ್ಯು

Spread the love

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ರವಿವಾರ ರಾತ್ರಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 21 ವರ್ಷದ ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ದಾಳಿಯು ಸಂಭಾವ್ಯ ಭಯೋತ್ಪಾದನಾ ಕೃತ್ಯವಾಗಿರಬಹುದೆಂಬ ಶಂಕೆಯಲ್ಲಿ ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (FBI) ತನಿಖೆ ಕೈಗೊಂಡಿದೆ ಎಂದು ವರದಿಯಾಗಿದೆ.
ನಗರದ ಪಶ್ಚಿಮದ ಆರನೇ ಬೀದಿಯಲ್ಲಿರುವ ಜನದಟ್ಟಣೆಯ ಮನರಂಜನಾ ಪ್ರದೇಶದ ಬಾರ್ ನ ಹೊರಭಾಗದಲ್ಲಿ ದಾಳಿ ನಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದವರಲ್ಲಿ ಸವಿತಾ ಶಾನ್ (21) ಕೂಡ ಸೇರಿದ್ದಾರೆ. ಆಸ್ಟಿನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಡ್ಯುಯಲ್-ಡಿಗ್ರಿ ಸೀನಿಯರ್ ಆಗಿದ್ದ ಅವರು ಪದವಿ ಪಡೆಯಲು ಕೆಲವೇ ತಿಂಗಳುಗಳು ಬಾಕಿ ಇತ್ತು.

ನಿರ್ವಹಣಾ ಮಾಹಿತಿ ವ್ಯವಸ್ಥೆಗಳು (Management Information Systems) ಹಾಗೂ ಅರ್ಥಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದ ಶಾನ್ ಅತ್ಯುತ್ತಮ ವಿದ್ಯಾರ್ಥಿ ನಾಯಕಿಯಾಗಿ ಗುರುತಿಸಿಕೊಂಡಿದ್ದರು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅವರು ಸಹಪಾಠಿಗಳಲ್ಲಿ ಜನಪ್ರಿಯರಾಗಿದ್ದರು.
ಸೋಮವಾರ ಮಧ್ಯಾಹ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಸ್ಟಿನ್‌ ಪೊಲೀಸ್ ಮುಖ್ಯಸ್ಥೆ ಲಿಸಾ ಡೇವಿಸ್, ಘಟನೆಯಲ್ಲಿ ಮೃತಪಟ್ಟವರಲ್ಲಿ 19 ವರ್ಷದ ರೈಡರ್ ಹ್ಯಾರಿಂಗ್ಟನ್ ಹಾಗೂ ಸವಿತಾ ಶಾನ್ ಅವರ ಗುರುತುಗಳನ್ನು ದೃಢಪಡಿಸಿದರು. ಉಳಿದ ಇಬ್ಬರ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ರವಿವಾರ ಆಸ್ಟಿನ್ ಡೌನ್ ಟೌನ್ ನಲ್ಲಿ ನಡೆದ ಈ ದಾಳಿಯು ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಟೆಕ್ಸಾಸ್‌ನಲ್ಲಿರುವ ಭಾರತೀಯ-ಅಮೆರಿಕನ್ ಸಮುದಾಯ, ವಿಶೇಷವಾಗಿ ‘ಸಿಲಿಕಾನ್ ಹಿಲ್ಸ್ ಕಾರಿಡಾರ್ ಪ್ರದೇಶದಲ್ಲಿ ವಾಸಿಸುವ ವಿದ್ಯಾರ್ಥಿಗಳು ಹಾಗೂ ತಂತ್ರಜ್ಞಾನ ವೃತ್ತಿಪರರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ದಾಳಿಯ ಹಿನ್ನಲೆ, ಶಂಕಿತನ ಉದ್ದೇಶ ಹಾಗೂ ಭಯೋತ್ಪಾದನಾ ಸಂಪರ್ಕದ ಸಾಧ್ಯತೆಗಳ ಕುರಿತು ವಿವಿಧ ಕೋನಗಳಿಂದ ತನಿಖೆ ಮುಂದುವರಿದಿದೆ. ಕಾನೂನು ಜಾರಿ ಸಂಸ್ಥೆಗಳು ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದು, ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಶೀಘ್ರದಲ್ಲೇ ಬಹಿರಂಗಪಡಿಸುವ ನಿರೀಕ್ಷೆಯಿದೆ.


Spread the love
Share:

administrator

Leave a Reply

Your email address will not be published. Required fields are marked *