ಸ್ಕೂಟರ್ ಸವಾರನ ಮೇಲೆ ಗೂಳಿ ಭೀಕರ ದಾಳಿ!

ರಾಜ್ಕೋಟ್: ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ ನಡೆಸಿರುವ ಘಟನೆ ರಾಜ್ಕೋಟ್ ಜಿಲ್ಲೆಯ ಕೊಟ್ಡಾ ಸಂಗನಿ ಬಳಿಯ ವೆರಾವಲ್ ಗ್ರಾಮದಲ್ಲಿ ನಡೆದಿದೆ. ವ್ಯಕ್ತಿ ಸ್ಕೂಟಿಯಲ್ಲಿ ಬಂದು ನಿಲ್ಲುತ್ತಿದ್ದಂತೆ ಎದುರಿನಿಂದ ಬಂದ ಗೂಳಿ ಏಕಾಏಕಿ ದಾಳಿ ನಡೆದಿದೆ. ಗಾಡಿಯಿಂದ ನೆಲದ ಮೇಲೆ ಆತನನ್ನು ಬೀಳಿಸಿ ತುಳಿದಿದೆ. ಆಗ ಅಲ್ಲೇ ಹತ್ತಿರದಲ್ಲಿದ್ದ ಮತ್ತೊಂದು ಗೂಳಿ ಆತನನ್ನು ಉಳಿಸಲು ಸಹಾಯ ಮಾಡಿದೆ. ಹತ್ತಿರ ಇದ್ದವರು ಹೇಗೋ ಮಾಡಿ ಆತನನ್ನು ಗೂಳಿಯಿಂದ ಕಾಪಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಅವರ ಸ್ಥಿತಿ ಗಂಭೀರವಾಗಿದೆ.
