Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತೆಲಂಗಾಣ: ವಯಸ್ಸಾದ ಪೋಷಕರನ್ನು ನಿರ್ಲಕ್ಷಿಸಿದರೆ ಸಂಬಳ ಕಟ್; ಸಿಎಂ ರೇವಂತ್ ರೆಡ್ಡಿ ಕಟ್ಟುನಿಟ್ಟಿನ ಆದೇಶ

Spread the love

ಹೈದರಾಬಾದ್: ವೃದ್ಧ ಪೋಷಕರನ್ನು ನೋಡಿಕೊಳ್ಳಲು ವಿಫಲರಾದ ಸರಕಾರಿ ನೌಕರರ ವೇತನದಿಂದ 10 ರಿಂದ 5 % ಕಡಿತಗೊಳಿಸಲು ರಾಜ್ಯ ಸರಕಾರ ಮುಂಬರುವ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಶಾಸನವನ್ನು ಪರಿಚಯಿಸಲಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಗುರುವಾರ ಹೇಳಿದ್ದಾರೆ.
ಹೊಸದಾಗಿ ನೇಮಕಗೊಂಡ ಗ್ರೂಪ್-1 ಮತ್ತು ಗ್ರೂಪ್-2 ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಿಎಂ ಎ ರೇವಂತ್ ರೆಡ್ಡಿ, ರಾಜ್ಯ ಸರಕಾರಿ ಅಧಿಕಾರಿಗಳಿಗೆ ಕಾರ್ಯನಿರ್ವಹಣಾ ಶಿಕ್ಷಣವನ್ನು ನೀಡಲು ಹಾರ್ವಡ್್ರ ವಿಶ್ವವಿದ್ಯಾಲಯ ಮತ್ತು MCR HRD Institute ಜೊತೆ ಒಪ್ಪಂದ ನಡೆಸಲಾಗುವುದು ಎಂದು ಹೇಳಿದ್ದಾರೆ.
ಯುವ ಅಧಿಕಾರಿಗಳು ತಮ್ಮ ತಂದೆ-ತಾಯಿಗಳ ತ್ಯಾಗದ ಫಲವಾಗಿ ಈ ಅಪೇಕ್ಷಿತ ಉದ್ಯೋಗಗಳನ್ನು ಪಡೆದಿದ್ದಾರೆ. ಆದ್ದರಿಂದ ಅವರು ತಮ್ಮಪೋಷಕರನ್ನು ಸರಿಯಾಗಿ ನೋಡಿಕೊಳ್ಳಬೇಕು,” ಎಂದು ಹೇಳಿದರು.
ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ತಮ್ಮ ಪೋಷಕರನ್ನು ನೋಡಿಕೊಳ್ಳಲು ವಿಫಲರಾದವರ ಸಂಬಳದ 10 ರಿಂದ 15 ಪ್ರತಿಶತವನ್ನು ಕಡಿತಗೊಳಿಸಿ ಪೋಷಕರ ಖಾತೆಗಳಿಗೆ ಜಮೆ ಮಾಡಲು ನಾವು ಶಾಸನವನ್ನು ಪರಿಚಯಿಸಲು ಯೋಜಿಸಿದ್ದೇವೆ” ಎಂದು ರೇವಂತ್ ರೆಡ್ಡಿ ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *