Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತೇಜಸ್ ಎಂಕೆ-1ಎ ಯುದ್ಧವಿಮಾನಗಳು ವಾಯುಪಡೆಗೆ ಸೇರ್ಪಡೆ

Spread the love

ನವದೆಹಲಿ:ಜೂನ್‌ ಅಂತ್ಯಕ್ಕೆ ಭಾರತೀಯ ವಾಯುಪಡೆಗೆ ತೇಜಸ್‌ ಎಂಕೆ-1ಎ ಯುದ್ಧವಿಮಾನಗಳು ಸೇರ್ಪಡೆಯಾಗಲಿವೆ ಎಂದು ಮೂಲಗಳು ತಿಳಿಸಿವೆ. ಯದ್ಧವಿಮಾನಗಳೂ ಸೇರಿ ರಕ್ಷಣಾ ಕ್ಷೇತ್ರಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ ಎಂದು ವಾಯುಪಡೆ ಮುಖ್ಯಸ್ಥರು ಅಸಮಾಧಾನಾ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌)ನ ನಾಸಿಕ್‌ ಘಟಕದಿಂದ ಮೊದಲ ತೇಜಸ್‌ ಎಂಕೆ-1ಎಯನ್ನು ಹಸ್ತಾಂತರಿಸಲು ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಬಳಿಕ ಎಚ್‌ಎಎಲ್‌ನ 3ನೇ ಘಟಕವನ್ನು ನಾಸಿಕ್‌ನಲ್ಲಿ ಸ್ಥಾಪಿಸಲಾಗಿದೆ.

ಅಮೆರಿಕದ ಸಂಸ್ಥೆಯಿಂದ ಎಫ್404 ಎಂಜಿನ್‌ಗಳ ಪೂರೈಕೆ ವಿಳಂಬವಾದ ಕಾರಣ ತೇಜಸ್‌ ಎಂಕೆ-1ಎ ಉತ್ಪಾದನಾ ಯೋಜನೆ ಅಂದುಕೊಂಡ ಸಮಯಕ್ಕಿಂತ ಒಂದು ವರ್ಷ ವಿಳಂಬವಾಗಿತ್ತು. ಈ ಯುದ್ಧವಿಮಾನಗಳನ್ನು 2024ರ ಮಾ.31ಕ್ಕೇ ವಾಯುಪಡೆಗೆ ನೀಡಲು ಎಚ್‌ಎಎಲ್‌ ಒಪ್ಪಿತ್ತು. ಎಚ್‌ಎಎಲ್‌ ಭಾರತೀಯ ವಾಯುಪಡೆಯು 2021ರ ಫೆಬ್ರವರಿಯಲ್ಲಿ 48,000 ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಎಚ್‌ಎಎಲ್‌ 83 ತೇಜಸ್‌ ಎಂಕೆ-1ಎ ಯುದ್ಧವಿಮಾನಗಳನ್ನು ತಯಾರಿಸಲಿದೆ.

ಯುದ್ಧವಿಮಾನ ಪೂರೈಕೆ ವಿಳಂಬವಾದ ಬಗ್ಗೆ ಎ.ಪಿ.ಸಿಂಗ್‌ 3 ತಿಂಗಳ ಹಿಂದೆಯೂ ಎಚ್‌ಎಎಲ್‌ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು.


Spread the love
Share:

administrator

Leave a Reply

Your email address will not be published. Required fields are marked *