ಜಾತಿಗಣತಿಗೆ ತಂತ್ರಜ್ಞಾನವೇ ಅಡ್ಡಿ: ಆ್ಯಪ್ ಮತ್ತು ನೆಟ್ವರ್ಕ್ ಸಮಸ್ಯೆಯಿಂದ ಸಿಬ್ಬಂದಿ ಕಂಗಾಲು

ಬೆಂಗಳೂರು: ನೆಟ್ವರ್ಕ್ ಸರಿಯಾಗಿ ಸಿಗುತ್ತಿಲ್ಲ, ಆ್ಯಪ್ ಒಮ್ಮೆ ಓಪನ್ ಆದರೆ ಮತ್ತೊಮ್ಮೆ ಓಪನ್ ಆಗುತ್ತಿಲ್ಲ.ಆ್ಯಪ್ನಲ್ಲಿ ಎಂಟ್ರಿ ಮಾಡಿದರೂ ಮಾಹಿತಿ ಡಿಲೀಟ್ ಆಗುತ್ತಿವೆ! ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತಿರುವ ಸಿಬ್ಬಂದಿಯ ಅಳಲು. ದಾವಣಗೆರೆ, ಹಾಸನ, ವಿಜಯಪುರ, ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದ ಹಲವೆಡೆ ಶಿಕ್ಷಕರು ಇಂಥದ್ದೇ ಸಮಸ್ಯೆಯಿಂದ ಪರದಾಡಿದ್ದಾರೆ. ಪ್ರತಿಭಟನೆ ಕೂಡ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಸಮೀಕ್ಷೆ ಸರಿಯಾಗಿ ಆಗ್ತಿಲ್ಲ ಎಂದು ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಹೈಕೋರ್ಟ್ನಲ್ಲಿ ಜಾತಿಗಣತಿ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಇವತ್ತು ಕೂಡ ನಡೆಯಲಿದೆ. ಹಿಂದುಳಿದ ವರ್ಗಗಳ ಆಯೋಗದ ವಾದ ಅಂತ್ಯವಾಗಿದೆ. ಇಂದು ಕೂಡ ವಾದ-ಪ್ರತಿವಾದ ಆಲಿಸಲಿದೆ.

