Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟಿಸಿಎಸ್ ಉದ್ಯೋಗ ಕಡಿತ: 12,000 ಲೇಆಫ್ ಬಗ್ಗೆ ವ್ಯಾಖ್ಯೆ ಕೇಳಿದ ಕಾರ್ಮಿಕ ಇಲಾಖೆ

Spread the love

ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್  ದೊಡ್ಡ ಪ್ರಮಾಣದಲ್ಲಿ ಲೇಆಫ್  (ಉದ್ಯೋಗ ಕಡಿತ) ಮಾಡುತ್ತಿರುವ ವರದಿಗಳ ಬಗ್ಗೆ ಕರ್ನಾಟಕ ಕಾರ್ಮಿಕ ಇಲಾಖೆ ವಿವರ ಕೋರಿದೆ. ಟಿಸಿಎಸ್ 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬ ಮಾಹಿತಿ ದೊರೆತಿದೆ. ಈ ಕುರಿತು ಕಂಪನಿಯಿಂದ ವಿವರ ಕೋರಲಾಗಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಲೇಆಫ್​​​ಗೆ ಕಾರಣವನ್ನು ತಿಳಿಯಲು ಮತ್ತು ಆ ಬಗ್ಗೆ ಸಮಾಲೋಚನೆ ನಡೆಸಲು ಬರುವಂತೆ ನಮ್ಮ ಇಲಾಖೆಯು ಟಿಸಿಎಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ತಿಳಿಸಿದರು.

ಸನ್​ರೈಸ್ ಇಂಡಸ್ಟ್ರೀಸ್​ಗೆ ಕೆಲವೊಂದು ಷರತ್ತುಗಳೊಂದಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡಲಾಗಿದೆ . ಕಳೆದ ಐದು ವರ್ಷಗಳಿಂದ ನಾವು ಸನ್​ರೈಸ್ ಇಂಡಸ್ಟ್ರೀಸ್​ಗೆ ವಿನಾಯಿತಿ ನೀಡುತ್ತಾ ಬಂದಿದ್ದೇವೆ. ಪ್ರತಿ ವರ್ಷ ಈ ವಿನಾಯಿತಿಯನ್ನು ವಿಸ್ತರಣೆ ಮಾಡುತ್ತಾ ಬರಲಾಗಿದೆ ಎಂದು ಲಾಡ್ ಹೇಳಿದರು.

ಅವರು ಯಾರನ್ನಾದರೂ ಕೆಲಸದಿಂದ ತೆಗೆದುಹಾಕಲು ಬಯಸಿದರೆ, ಅವರು ನಮಗೆ ಮಾಹಿತಿ ನೀಡಬೇಕು. ಆ ಬಗ್ಗೆ ನಾವು ಅವರೊಂದಿಗೆ ಮಾತನಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.


Spread the love
Share:

administrator

Leave a Reply

Your email address will not be published. Required fields are marked *