Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಡಸ್ಸೋ ಏವಿಯೇಶನ್ ಒಪ್ಪಂದ

Spread the love

ನವದೆಹಲಿ:ವಿಶ್ವದ ಶಕ್ತಿಶಾಲಿ ಯುದ್ಧವಿಮಾನಗಳಲ್ಲಿ ಒಂದೆನಿಸಿದ ರಫೇಲ್ ಫೈಟರ್ ಜೆಟ್​​ನ ಮುಖ್ಯ ಭಾಗವು ಮುಂದಿನ ದಿನಗಳಲ್ಲಿ ಭಾರತದಲ್ಲೇ ತಯಾರಾಗಲಿದೆ. ಫ್ರಾನ್ಸ್ ದೇಶದ ಡಸ್ಸೋ ಏವಿಯೇಶನ್ ಜೊತೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಒಪ್ಪಂದಗಳನ್ನು ಮಾಡಿಕೊಂಡಿದೆ. ಏರ್​​ಕ್ರಾಫ್ಟ್​​ನ ಮುಖ್ಯ ಭಾಗವಾದ ಫ್ಯೂಸಲಾಜ್ ಅನ್ನು ತಯಾರಿಸಲು ಈ ಒಪ್ಪಂದಗಳಾಗಿರುವುದು. ನಾಲ್ಕು ಉತ್ಪಾದನಾ ವರ್ಗಾವಣೆ ಒಪ್ಪಂದಗಳಿಗೆ ಟಾಟಾ ಕಂಪನಿ ಸಹಿ ಹಾಕಿದೆ. ಗಮನಾರ್ಹ ಸಂಗತಿ ಎಂದರೆ ರಫೇಲ್ ಫ್ಯೂಸಲಾಜ್​​ಗಳನ್ನು ಇಲ್ಲಿಯವರೆಗೆ ಫ್ರಾನ್ಸ್ ಬಿಟ್ಟು ಬೇರೆ ದೇಶಗಳಲ್ಲಿ ತಯಾರಿಸಲಾಗಿಲ್ಲ. ಭಾರತ ಈ ವಿಚಾರದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ.

ವಿಮಾನದ ಮುಖ್ಯ ಅಂಗ ಫ್ಯೂಸಲಾಜ್
ಮನುಷ್ಯನಿಗೆ ಅಸ್ಥಿಪಂಜರ ಇದ್ದಂತೆ ವಿಮಾನಗಳಿಗೆ ಫ್ಯೂಸಲಾಜ್ ಇರುತ್ತದೆ. ಇದು ವಿಮಾನದ ಹೊರಕವಚ. ವಿಮಾನದ ಎಲ್ಲಾ ಭಾಗಗಳಿಗೂ ಇದು ಕೊಂಡಿ ಇದ್ದಂತೆ. ವಿಮಾನ ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೆ ಎಂಬುದರ ಮೇಲೆ ಫ್ಯೂಸಲಾಜ್​ನ ರೂಪುರೇಖೆಯನ್ನು ಮಾಡಲಾಗುತ್ತದೆ.

ಹೈದರಾಬಾದ್​​ನಲ್ಲಿ ಫ್ಯೂಸಲಾಜ್ ತಯಾರಿಕಾ ಘಟಕ
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆಯು ಹೈದರಾಬಾದ್​​ನಲ್ಲಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲಿದೆ. ಫ್ಯೂಜಲಾಜ್​​ನ ವಿವಿಧ ಭಾಗಗಳನ್ನು ಇಲ್ಲಿ ತಯಾರಿಸಲಾಗುತ್ತದೆ.

ವರದಿ ಪ್ರಕಾರ, 2027-28ರಲ್ಲಿ ಇಲ್ಲಿಂದ ಮೊದಲ ಫ್ಯೂಸಲಾಜ್ ಭಾಗ ಹೊರಬರುವ ನಿರೀಕ್ಷೆ ಇದೆ. ತಿಂಗಳಿಗೆ ಎರಡು ಫ್ಯೂಸಲಾಜ್​​ಗಳನ್ನು ಈ ಘಟಕದಲ್ಲಿ ತಯಾರಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ.

ಡಸ್ಸೋ ಏವಿಯೇಶನ್ ಸಪ್ಲೈ ಚೈನ್​ಗೆ ಬಲ
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ರಫೇಲ್ ಫ್ಯೂಸಲಾಜ್ ತಯಾರಿಸುತ್ತಿರುವುದು ಡಸ್ಸೋ ಏವಿಯೇಶನ್ ಕಂಪನಿಯ ಜಾಗತಿಕ ಸರಬರಾಜು ಸರಪಳಿಯ ಭಾಗವಾಗಿ. ರಫೇಲ್ ತಯಾರಿಕೆಯ ಭಾಗವಾಗಿ ಭಾರತದಲ್ಲಿ ತನ್ನ ಸಪ್ಲೈ ಚೈನ್ ಅನ್ನು ಡಸ್ಸೋ ವಿಸ್ತರಿಸಿದಂತಾಗುತ್ತದೆ. ಫ್ರಾನ್ಸ್ ಹೊರಗೆ ಭಾರತದಲ್ಲಿ ಮಾತ್ರವೇ ಫ್ಯೂಸಲಾಜ್​​ಗಳು ತಯಾರಾಗುತ್ತಿರುವುದು ಗಮನಾರ್ಹ ಸಂಗತಿ. ಡಸ್ಸೋ ಏವಿಯೇಶನ್ ಸಂಸ್ಥೆಯ ಸಿಇಒ ಎರಿಕ್ ಟ್ರಾಪಿಯರ್ ಅವರು ಭಾರತದಲ್ಲಿ ತಯಾರಾಗುವ ಫ್ಯೂಜಲಾಜ್​​ಗಳು ಸಂಪೂರ್ಣ ಗುಣಮಟ್ಟ ಕಾಯ್ದುಕೊಂಡಿರುತ್ತವೆ ಎಂದು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *