Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಮಹಿಳೆಯ ಚಪ್ಪಲಿ ನೋಡಿ ಮನೆ ಟಾರ್ಗೆಟ್: 140 ಕೇಸ್‌ಗಳಲ್ಲಿ ನಕಲಿ ಕೀ ಕಳ್ಳನ ಬಂಧನ’

Spread the love

ಬೆಂಗಳೂರು: ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದವನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯ ಪ್ರಕಾಶ್​ ಅಲಿಯಾಸ್​ ಬಾಲಾಜಿ (43) ಬಂಧಿತ ಆರೋಪಿ. ಆರೋಪಿ ​ವಿರುದ್ಧ ಈವರೆಗೆ ಬರೋಬ್ಬರಿ 140 ಪ್ರಕರಣ ದಾಖಲಾಗಿವೆ. ಬಂಧಿತ ಆರೋಪಿಯಿಂದ 80 ಲಕ್ಷ ಮೌಲ್ಯದ 779 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಪ್ರಕಾಶ್​ ಕೀ ಮಾಡುವ ಮಷಿನ್ ಆನ್ಲೈನ್​ನಲ್ಲಿ ಖರೀದಿಸಿದ್ದನು. ಅಪಾರ್ಟ್​ಮೆಂಟ್​ ಖರೀದಿದಾರನ ರೀತಿ ಹೋಗಿ ಕೀ ಮಾಡ್ಯೂಲ್ ಪಡೆದು, ನಕಲಿ ಕೀ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದನು. ಆರೋಪಿ ಕಳ್ಳತನ ಮಾಡಲು ಮಹಿಳೆಯರ ಚಪ್ಪಲಿ ಇರುವ ಮನೆಗಳನ್ನೇ ಟಾರ್ಗೆಟ್​ ಮಾಡುತ್ತಿದ್ದನು. ಕದ್ದ ವಸ್ತುಗಳನ್ನು ಸ್ವಿಗ್ಗಿ, ಜೊಮ್ಯಾಟೋ ಬ್ಯಾಗ್​ನಲ್ಲಿ ಹಾಕಿಕೊಂಡು ಡೆಲಿವರಿ ಬಾಯ್​ನಂತೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದನು.

ಆರೋಪಿ ಪ್ರಕಾಶ್ ಉತ್ತರಹಳ್ಳಿಯಲ್ಲಿ ತನ್ನ ಪತ್ನಿ ಜೊತೆಗೆ ವಾಸವಾಗಿದ್ದನು. ಯೂಟ್ಯೂಬ್​ನಲ್ಲಿ ಕಳ್ಳತನದ ವಿಡಿಯೋ ನೋಡಿ ಹೊಸ ಹೊಸ ಮಾದರಿಯಲ್ಲಿ ಕಳ್ಳತನ ಮಾಡುತ್ತಿದ್ದನು. ಕದ್ದ ಚಿನ್ನಾಭರಣವನ್ನು ರಾಜೀವ್ ಎಂಬಾತನಿಂದ ಮಾರಾಟ ಮಾಡಿಸುತ್ತಿದ್ದನು.

ಆರೋಪಿ ಪ್ರಕಾಶ್​ ಅಪ್ರಾಪ್ತನಾಗಿದ್ದಾಗಲೇ ಕಳ್ಳತನಕ್ಕಿಳಿದಿದ್ದನು. ಆರೋಪಿ ಪ್ರಕಾಶ್​ ಬಾಲ್ಯದಲ್ಲೇ ತಂದೆ, ತಾಯಿಯನ್ನು ಕಳೆದುಕೊಂಡು ಚಿಕ್ಕಮ್ಮನ‌ ಪೋಷಣೆಯಲ್ಲಿ ಬೆಳೆದಿದ್ದಾನೆ. ಚಿಂದಿ ಆಯುವ ಕೆಲಸ ಮಾಡುತ್ತಾ ಕಳ್ಳತನಕ್ಕೆ ಇಳಿದಿದ್ದನು. ಆರೋಪಿ ಪ್ರಕಾಶ್​ಗೆ ಬೆಟ್ಟಿಂಗ್, ಮದ್ಯಪಾನ, ಗಾಂಜಾ, ಹುಡುಗಿಯರ ಶೋಕಿ ಇತ್ತು. ಕಳೆದ ವರ್ಷ ಮೇ 16 ರಂದು ಸಿಸಿಬಿ ಪೊಲೀಸರು ಆರೋಪಿ ಪ್ರಕಾಶ್​ನನ್ನು​ ಬಂಧಿಸಿದ್ದರು. ಬಿಡುಗಡೆಯಾಗಿ ಬಂದ ಬಳಿಕ ಮತ್ತೆ 13 ಮನೆಗಳಲ್ಲಿ ಕಳ್ಳತನ ಮಾಡಿದ್ದನು. ಆರೋಪಿ ಪ್ರಕಾಶ್​ ಬಂಧನಕ್ಕೆ ನಗರದ ವಿವಿಧ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪೊಲೀಸರ ಕಣ್ತಪ್ಪಿಸಿಕೊಳ್ಳಲು ಆರೋಪಿ ಪ್ರಕಾಶ್​ ಮೊಬೈಲ್​ ಬಳಕೆ ಮಾಡುತ್ತಿರಲಿಲ್ಲ. ಹೀಗಾಗಿ, ಮಡಿವಾಳ ಠಾಣೆ ಪೊಲೀಸರು ಆರೋಪಿ ಪ್ರಕಾಶ್​ನ ಪತ್ನಿ ಮತ್ತು ಕುಟುಂಬಸ್ಥರ ಫೋನ್​ ಟ್ರ್ಯಾಕ್​ ಮಾಡಿದ್ದರು. ಆಗ, ಪೊಲೀಸರಿಗೆ ಆರೋಪಿ ಪ್ರಕಾಶ್​ ಅತ್ತಿಬೆಲೆಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿರುವುದು ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿ ಪ್ರಕಾಶ್​ನನ್ನು ಬಂಧಿಸಿದ್ದಾರೆ. ಆರೋಪಿ ಪ್ರಕಾಶ್​ ಮುಂಚೆ ಉತ್ತರಹಳ್ಳಿಯಲ್ಲಿ ವಾಸವಾಗಿದ್ದನು.

ಆರೋಪಿಯನ್ನು ಬಂಧಸಿದ ಬಳಿಕ, ನಗರದ ವಿವಿಧೆಡೆ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ಮಡಿವಾಳದಲ್ಲಿ ಮತ್ತು ಹುಳಿಮಾವುನಲ್ಲಿ ತಲಾ ಮೂರು ಕಡೆ ಕಳ್ಳತನ ಮಾಡಿದ್ದಾನೆ. ಮೈಕೋಲೇಔಟ್, ಬಂಡೆಪಾಳ್ಯ, RR ನಗರ, ಸುಬ್ರಹ್ಮಣ್ಯಪುರ, ಹೆಚ್​ಎಸ್​ಆರ್​ ಲೇಔಟ್, ಬೇಗೂರು ಈ ಎಲ್ಲ ನಗರಗಳಲ್ಲಿ ಆರೋಪಿ ಪ್ರಕಾಶ್​ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯಿಂದ 80 ಲಕ್ಷ ಮೌಲ್ಯದ 779 ಗ್ರಾಂ ಚಿನ್ನಾಭರಣ ಮತ್ತು ಎರಡು ಬೈಕ್​ಗಳು, ಕೃತ್ಯಕ್ಕೆ ಬಳಸಿದ್ದ 130 ನಕಲಿ ಕೀಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕಾಶ್ ಮತ್ತು ರಾಜೀವ್​ ವಿರುದ್ಧ ಮಡಿವಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *