ಬಿಗ್ ಬಾಸ್ ಮನೆಗೆ 800 ಸೀರೆ, 50 ಕೆಜಿ ಆಭರಣ ತಂದಿದ್ದ ತಾನ್ಯಾ ಮಿತ್ತಲ್

ಬಿಗ್ ಬಾಸ್ 19 ಶೋನಲ್ಲಿ ಆಧ್ಯಾತ್ಮಿಕ ಚಿಂತಕಿ, ಉದ್ಯಮಿ ತಾನ್ಯಾ ಮಿತ್ತಲ್ ( Tanya Mittal ) ಹೆಸರು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಎಪಿಸೋಡ್‌ವೊಂದರಲ್ಲಿ ತಾನ್ಯಾ ಮಿತ್ತಲ್ ಅವರು ಅಚ್ಚರಿಕರ ಹೇಳಿಕೆ ಕೊಟ್ಟು, ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

800 ಸೀರೆ ತಂದ ತಾನ್ಯಾ ಮಿತ್ತಲ್
ಐಷಾರಾಮಿ ಜೀವನಶೈಲಿಗೆ ಹೆಸರಾದ ತಾನ್ಯಾ ಮಿತ್ತಲ್ ಅವರು, “ನಾನು ಬಿಗ್ ಬಾಸ್ ಮನೆಗೆ 800 ಸೀರೆಗಳನ್ನು, 50kg ಜ್ಯುವೆಲರಿ ತಂದಿದ್ದೇನೆ” ಎಂದಿದ್ದಾರೆ. “ನಾನು ನನ್ನ ಐಷಾರಾಮಿ ಬದುಕನ್ನು ಬಿಡಲು ರೆಡಿ ಇಲ್ಲ, ನಾನು ನನ್ನ ಜ್ಯುವೆಲರಿ ಸಾಮಗ್ರಿಗಳು, 800ಕ್ಕೂ ಹೆಚ್ಚು ಸೀರೆಗಳನ್ನು ತಗೊಂಡು ಬಂದಿದ್ದೇನೆ. ಪ್ರತಿ ದಿನಕ್ಕೆ ನಾನು 3 ಸೀರೆ ಆಯ್ಕೆ ಮಾಡಿಕೊಂಡು ಚೇಂಜ್ ಮಾಡುತ್ತಿರುತ್ತೇನೆ” ಎಂದಿದ್ದಾರೆ.
ಮೇಡಂ ಅಂತ ಕರೆಯಬೇಕು!
ಬಿಗ್ ಬಾಸ್ ಮನೆಯಲ್ಲಿದ್ದವರಿಗೆ ತಾನ್ಯಾ, ನನಗೆ ‘ಮೇಡಂ’ ಅಥವಾ ‘ಬಾಸ್’ ಎಂದು ಕರೆಯಿರಿ ಎಂದಿದ್ದರು. ಇದಕ್ಕೂ ದೊಡ್ಡ ಚರ್ಚೆ ಆಗಿತ್ತು. ಮೊದಲ ದಿನವೇ ಸ್ಪರ್ಧಿ ಕುನಿಕಾ ಸದಾನಂದ್, ಇನ್ನೊಬ್ಬ ಸ್ಪರ್ಧಿ ಮೃದುಲ್ ತಿವಾರಿಗೆ ಯಾರನ್ನೂ ‘ಮೇಡಂ’ ಅಂತ ಕರೆಯಬೇಡಿ ಎಂದಿದ್ದರು. ಅದಕ್ಕೆ ತಾನ್ಯಾ ವಿರೋಧ ವ್ಯಕ್ತಪಡಿಸಿದ್ದರು. ‘ಹೊರಗಡೆ ನನಗೆ ಬಾಸ್ ಅಂತ ಹೇಳ್ತಾರೆ, ಈಗ ನೀವು ನನ್ನನ್ನು ಮೇಡಂ ಅಂತ ಕರೆಯಿರಿ. ನನ್ನನ್ನು ಹೆಸರಿನಿಂದ ಕರೆಯುವುದು ನನಗೆ ಇಷ್ಟವಿಲ್ಲʼ ಎಂದು ಹೇಳಿದರು. ಅವರು ತಮ್ಮ ಕುಟುಂಬದವರು ತನ್ನನ್ನು “ಬಾಸ್” ಎಂದು ಕರೆಯುತ್ತಾರೆ ಮತ್ತು ಅದು ತನಗೆ ಇಷ್ಟವಾಗುತ್ತದೆ. ಸುಲಭವಾಗಿ ಹೆಣ್ಣುಮಕ್ಕಳಿಗೆ ಗೌರವ ಸಿಗುವುದಿಲ್ಲ, ಅದನ್ನು ಒತ್ತಡದಿಂದಲಾದರೂ ಸರಿ ಪಡೆಯಬೇಕು. ವರ್ಷಗಳಿಂದ ನೀವು ಗೌರವವನ್ನು ಪಡೆದುಕೊಳ್ತೀರಿ. ನನಗೆ 50 ವರ್ಷ ವಯಸ್ಸಾದಾಗ ಮಾತ್ರ ಗೌರವ ಪಡೆಯಲು ಇಷ್ಟಪಡೋದಿಲ್ಲ. ನನಗೆ ಈಗಲೇ ಗೌರವ ಬೇಕುʼ ಎಂದಿದ್ದಾರೆ.
ಭದ್ರತಾ ಸಿಬ್ಬಂದಿ ಬೇಕೇ ಬೇಕು!
“ಕುಂಭ ಮೇಳದಲ್ಲಿ ನನ್ನ ಭದ್ರತಾ ಸಿಬ್ಬಂದಿ 100 ಜನರನ್ನು ರಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರನ್ನೂ ರಕ್ಷಿಸಿದ್ದಾರೆ. ಅದರಿಂದಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಸೆಕ್ಯುರಿಟಿಗಳು ಉತ್ತಮ ತರಬೇತಿ ಪಡೆದಿದ್ದಾರೆ. ನನಗೆ ಇನ್ನೂ ಯಾವುದೇ ಬೆದರಿಕೆಗಳು ಬಂದಿಲ್ಲ. ಆದರೆ ಒಂದು ಬೆದರಿಕೆ ಬಂದರೆ ಸೆಕ್ಯುರಿಟಿ ಇಟ್ಟುಕೊಳ್ಳಲು ಕಾಯುತ್ತಿದ್ದೇನೆ. ನಮ್ಮ ಕುಟುಂಬದಲ್ಲಿ ಮೊದಲಿನಿಂದಲೂ ಇದು ನಡೆಯುತ್ತಿದೆ. ಎಲ್ಲರಿಗೂ ಭದ್ರತೆ ಇತ್ತು. ನಮಗೆ ಸಿಬ್ಬಂದಿಯೊಂದಿಗೆ ಓಡಾಡುವ ಅಭ್ಯಾಸವಿದೆ. ನಮಗೆ ಅದೇ ಇಷ್ಟ” ಎಂದು ತಾನ್ಯಾ ಮಿತ್ತಲ್ ಹೇಳಿದ್ದಾರೆ.
ಬಿಗ್ ಬಾಸ್ 19 ಸ್ಪರ್ಧಿಗಳು
ಕಳೆದ ಭಾನುವಾರವೇ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 19 ಶೋ ಆರಂಭವಾಗಿದೆ. ಆಶ್ನೂರ್ ಕೌರ್, ನೀಲಂ ಗಿರಿ, ಆವೆಜ್ ದರ್ಬಾರ್, ನಗ್ಮಾ ಮಿರಾಜ್ಕರ್, ನೆಹಲ್ ಚುಡಾಸಮಾ,ಬಸೀರ್ ಅಲಿ, ಗೌರವ್ ಖನ್ನಾ, ಅಭಿಷೇಕ್ ಬಜಾಜ್, ನಟಾಲಿಯಾ ಜನೋಸ್ಜೆಕ್, ಜೈಶಾನ್ ಕ್ವಾದ್ರಿ, ಫರ್ಹಾನಾ ಭಟ್, ಕುನಿಕಾ ಸುದಾನಂದ್, ಮೃದುಲ್ ತಿವಾರಿ, ಅಮಾಲ್ ಮಲ್ಲಿಕ್, ಪ್ರಣೀತ್ ಮೋರ್ ಮುಂತಾದವರು ಈ ಶೋ ಸ್ಪರ್ಧಿಗಳು. ಫರ್ಹಾನಾ ಭಟ್ ಮೊದಲ ಎಪಿಸೋಡ್‌ನಲಿ ಔಟ್ ಆಗಿದ್ದಾರೆ ಎನ್ನಲಾಗಿದೆ.