ಮಳೆಗಾಲಕ್ಕೆ ಸ್ವಿಗ್ಗಿ ಮತ್ತು ಜೋಮ್ಯಾಟೋ ಹೊಸ ರೈನ್ ಚಾರ್ಜ್: ಗ್ರಾಹಕರಿಂದ ಪ್ರತ್ಯಾರೋಪ

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತದೆ. ಮುಂಗಾರು ಮಳೆ ಅಪ್ಪಳಿಸಲು ಸಜ್ಜಾಗಿದೆ. ಇನ್ನು ಮಳೆ ಆರ್ಭಟಗಳು ಹೆಚ್ಚಾಗುತ್ತದೆ. ಇದರ ನಡುವೆ ಸರ್ಕಾರ, ಸ್ಥಳೀಯ ಆಡಳಿತ ಮಳೆ ಅವಾಂತರ ಎದುರಿಸಲು ಸಜ್ಜಾಗುತ್ತಿದೆ. ಇತ್ತ ಜನಸಾಮಾನ್ಯರು ಕೂಡ ಮಳೆಗಾಲಕ್ಕೆ ತಯಾರಾಗುತ್ತಿದ್ದಾರೆ. ಇದರ ನಡುವೆ ಸ್ವಿಗ್ಗಿ ಹಾಗೂ ಜೋಮ್ಯಾಟೋ ಕೂಡ ಮಳೆಗಾಲಕ್ಕೆ ಹೊಸ ಪ್ಲಾನ್ ಮೂಲಕ ಬಂದಿದೆ. ಮನೆಯಲ್ಲಿ ಕುಳಿತು ಬೆಚ್ಚಗೆ ಆಹಾರ ಸವಿಯು ಪ್ರಿಯರಿಗೆ ಸ್ವಿಗ್ಗಿ ಹಾಗೂ ಜೋಮ್ಯಾಟೋ ಶಾಕ್ ನೀಡಿದೆ. ಇದೀಗ ಮಳೆಯಲ್ಲಿ ನಿಮಗೆ ಫುಡ್ ಡೆಲಿವರಿ ಮಾಡಲು ಹೆಚ್ಚುವರಿಯಾಗಿ ರೈನ್ ಚಾರ್ಜ್ ಹಾಕಲಾಗುತ್ತದೆ.

ಇತ್ತೀಚಿನ ವರೆಗೆ ಸ್ವಿಗ್ಗಿ, ಜೊಮ್ಯಾಟೋ ಸದಸ್ಯರಲ್ಲದ ಗ್ರಾಹಕರಿಗೆ ಈ ರೀತಿಯ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿತ್ತು. ರೈನ್ ಸರ್ಚಾರ್ಜ್ ಸೇರಿದಂತೆ ಇತರ ಚಾರ್ಚ್ ವಿಧಿಸಲಾಗುತ್ತಿತ್ತು. ಆದರೆ ಡೆಲಿವರಿ ವೇಳೆ ಎದುರಾಗುತ್ತಿರುವ ಸವಾಲು ಹಾಗೂ ಆರ್ಥಿಕ ಸಂಕಷ್ಟ ತಪ್ಪಿಸಲು ರೈನ್ ಚಾರ್ಜ್ ವಿಧಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ರೈನ್ ಟ್ಯಾಕ್ಸ್ ವಿಧಿಸಿ ಆಗಿದೆ. ಇದೀಗ ಮಳೆಗಾಲದಲ್ಲಿ ಮನೆ ಒಳಗೆ ಬೆಚ್ಚಗೆ ಕುಳಿತು ಏನಾದರೂ ತಿನ್ನಬೇಕು ಎಂದರೂ ಮಳೆಗೂ ಟ್ಯಾಕ್ಸ್ ಕಟ್ಟಬೇಕು. 2 ರೂಪಾಯಿಯಿಂದ 10 ರೂಪಾಯಿವರೆಗೆ ಚಾರ್ಜ್ ಮಾಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಮಳೆ ತೆರಿಗೆಗೆ ಗ್ರಾಹಕರು ಗರಂ
ಸ್ವಿಗ್ಗಿ ಜೊಮ್ಯಾಟೋ ಮೂಲಕ ಪ್ರತಿ ದಿನ ಅಥವಾ ಸತತವಾಗಿ ಆಹಾರ ಆರ್ಡರ್ ಮಾಡುವ ಸದಸ್ಯರು ಈ ನಿರ್ಧಾರದಿಂದ ಗರಂ ಆಗಿದ್ದಾರೆ. ಸ್ವಿಗ್ಗಿ, ಜೊಮ್ಯಾಟೋ ಸದಸ್ಯರಲ್ಲದವರಗೆ ಈ ಶುಲ್ ವಿಧಿಸುವುದರಲ್ಲಿ ಅರ್ಥವಿದೆ. ಆದರೆ ಸದಸ್ಯರಾಗಿ, ಹೆಚ್ಚುವರಿ ಪಾವತಿ ಮಾಡಿಯೂ ಮತ್ತೆ ರೈನ್ ಟ್ಯಾಕ್ಸ್ ವಿದಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿ ಡೆಲಿವರಿ ಹೆಚ್ಚು ಸವಾಲು
ಮಳೆಗಾಲದಲ್ಲಿ ಫುಡ್ ಡೆಲಿವರಿ ಹೆಚ್ಚು ಸವಾಲಿನಿಂದ ಕೂಡಿದೆ. ಪ್ರಮುಖವಾಗಿ ಭಾರಿ ಮಳೆಯಲ್ಲಿ ಡೆಲಿವರಿಗಾಗಿ ಸಾಗುವುದೇ ದೊಡ್ಡ ಸವಾಲು. ಇನ್ನು ಆಹಾರಗಳು ಸುರಕ್ಷಿತವಾಗಿ ತಲುಪಿಸಬೇಕು. ಮಳೆಯಿದಂ ಹಲವು ರಸ್ತೆಗಳು ಜಲಾವೃತಗೊಳ್ಳುವುದು ಸಾಮಾನ್ಯ . ಈ ವೇಳೆ ನಿಗದಿತ ಸಮಯದೊಳಗೆ ಆಹಾರಗಳನ್ನು ಗ್ರಾಹಕರಿಗೆ ತಲುಪಿಸುವುದು ಸವಾಲಾಗುತ್ತದೆ. ಡೆಲಿವರಿ ಎಜೆಂಟ್ ಹರಸಾಹಸ ಮಾಡಿ ಫುಡ್ ತಲುಪಿಸಿದ ಹಲವು ಘಟನೆಗಳು ನಡೆದಿದೆ. ಆದರೆ ಈ ಸರ್ಜಚಾರ್ಜ್ ನೇರವಾಗಿ ಡೆಲಿವರಿ ಎಜೆಂಟ್‌ಗಳಿಗೆ ಸಿಗುವುದಿಲ್ಲ. ಇದು ಕಂಪನಿ ಒಟ್ಟು ಆದಾಯದಲ್ಲಿ ಸೇರಿಕೊಳ್ಳಲಿದೆ ಎನ್ನಲಾಗುತ್ತಿದೆ.
ಜೊಮ್ಯಾಟೋ ಹಾಗೂ ಸ್ವಿಗ್ಗಿ ಹೊಸ ರೈನ್ ಟ್ಯಾಕ್ಸ್ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಬದಲಾವಣೆ ಆಗಿದೆ. ಪ್ರತಿ ತಿಂಗಳು ಈ ರೀತಿ ಒಂದೊಂದು ಸರ್ಚಾರ್ಜ್ ಸೇರಿಸಿಕೊಳ್ಳುತ್ತಾ ಸಾಗುವುದು ಸರಿಯಲ್ಲ. ಇದು ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ಹಲವರು ಸಲಹೆ ನೀಡಿದ್ದಾರೆ. ಮಳೆ ಇಲ್ಲದ ವೇಳೆ ಆರ್ಡರ್ ಮಾಡಿದರೂ ಈ ರೈನ್ ಟ್ಯಾಕ್ಸ್ ಹಾಕಲಾಗುತ್ತದಯೇ ಎಂದು ಹಲವರು ಪ್ರಶ್ನಿಸಿದ್ದಾರೆ.
