Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸುಜುಕಿಯ ಇ-ವಿಟಾರಾ ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತು – ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಉತ್ಪಾದನೆ ಆರಂಭ

Spread the love

ಅಹ್ಮದಾಬಾದ್: ಮಾರುತಿ ಸುಜುಕಿಯ ಹೊಸ ಹಿಟ್ ಬ್ರ್ಯಾಂಡ್ ಆದ ಗ್ರ್ಯಾಂಡ್ ವಿಟಾರಾದ ಇವಿ ಆವೃತ್ತಿಯಾದ ಇ-ವಿಟಾರಾ ಈಗ ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇ-ವಿಟಾರಾ ಯೋಜನೆಯನ್ನು ಬಿಡುಗಡೆ ಮಾಡಲಿದ್ದಾರೆ. ಇದೂ ಸೇರಿದಂತೆ ಪ್ರಧಾನಿಗಳು ಇಂದು ಹಂಸಲಪುರ್​ನಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್​ನಲ್ಲಿ ಎರಡು ಮಹತ್ವದ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಸುಜುಕಿ ಸೇರಿ ಮೂರು ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಲಿರುವ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಫ್ಯಾಕ್ಟರಿಗೂ ಪ್ರಧಾನಿಗಳು ಚಾಲನೆ ನೀಡಲಿದ್ದಾರೆ.

ಇ-ವಿಟಾರಾ ಇವಿಗಳ ರಫ್ತು…

ಅಹ್ಮದಾಬಾದ್​ನ ಹಂಸಲಪುರ್​ನಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್​ನಲ್ಲಿ ಇ-ವಿಟಾರಾ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ನಡೆದಿದೆ. ಈ ಬ್ಯಾಟರಿ ವಾಹನಗಳು ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲಿವೆ. ಜಪಾನ್, ಯೂರೋಪ್​ನಂತಹ ಉನ್ನತ ಮಾರುಕಟ್ಟೆಗಳಿಗೆ ಈ ವಾಹನಗಳು ಸರಬರಾಜಾಗಲಿರುವುದು ಗಮನಾರ್ಹ. ಜಪಾನ್ ಮೂಲದ ಸುಜುಕಿ ಸಂಸ್ಥೆಯ ಮೊದಲ ಜಾಗತಿಕ ಬ್ಯಾಟರಿ ಎಲೆಕ್ಟ್ರಿಕ್ ವಾಹನ ಯೋಜನೆ ಇದು. ಇದರೊಂದಿಗೆ ಹಂಸಲಪುರವು ಸುಜುಕಿಯ ಎಲೆಕ್ಟ್ರಿಕ್ ವಾಹನಗಳಿಗೆ ಜಾಗತಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್​ಗಳ ತಯಾರಿಕೆ

ಸುಜುಕಿ, ಟೋಶಿಬಾ ಮತ್ತು ಡೆನ್ಸೋ ಕಂಪನಿಗಳು ಜಂಟಿಯಾಗಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್​ಗಳನ್ನು ತಯಾರಿಸಲಿವೆ. ಟಿಡಿಎಸ್ ಲಿಥಿಯಂ ಅಯಾನ್ ಬ್ಯಾಟರಿ ಘಟಕದಲ್ಲಿ ಈ ಎಲೆಕ್ಟ್ರೋಡ್​ಗಳು ತಯಾರಾಗಲಿವೆ. ಈ ಎಲೆಕ್ಟ್ರೋಡ್​ಗಳು ಇವಿ ಬ್ಯಾಟರಿಗಳ ಕ್ಷಮತೆಯನ್ನು ಹೆಚ್ಚಿಸಬಲ್ಲುವು. ಇದನ್ನು ಭಾರತದಲ್ಲಿ ತಯಾರಿಸಲಾಗುತ್ತಿರುವುದು ಇದೇ ಮೊದಲು.


Spread the love
Share:

administrator

Leave a Reply

Your email address will not be published. Required fields are marked *