Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅನೈತಿಕ ಸಂಭಂದದ ಶಂಕೆ: ಪತ್ನಿಯ ಕೊಲೆ ಮಾಡಿ ಪೋಲೀಸ್ ಗೆ ಶರಣಾದ ಗಂಡ

Spread the love

ದೇವನಹಳ್ಳಿ : ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಗಂಡನೇ ಹೆಂಡತಿಯನ್ನು ಕೊಲೆ ಮಾಡಿ ಪೊಲೀಸರ ಮುಂದೆ ಬಂದು ಶರಣಾಗಿದ್ದಾನೆ. ಮೃತ ಹೆಂಡತಿಯನ್ನು 32 ವರ್ಷದ ರಾಬೀಯ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನಿಜಾಮುದ್ದೀನ್​ ಎಂದು ಗುರುತಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ತಮ್ಮರಸನಹಳ್ಳಿಯಲ್ಲಿ ಘಟನೆ ನಡೆದಿದ್ದು. ನಿಜಾಮುದ್ದೀನ ಎಂಬಾತ ತನ್ನ ಹೆಂಡತಿಯನ್ನು ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿದ್ದಾನೆ. ನಿಜಾಮುದ್ದೀನ್​ ಮತ್ತು ರಾಬೀಯ ಮದುವೆಯಾಗಿ ಜೀವನ ಸಾಗಿಸುತ್ತಿದ್ದರು. ಆದರೆ ನಿಜಾಮುದ್ದೀನ್​ಗೆ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಮೂಡಿ ಕೊಲೆ ಮಾಡಿದ್ದಾನೆ.

ತಮ್ಮರಸನಹಳ್ಳಿ ಗ್ರಾಮದ ಕೆರೆ ಸಮೀಪ ಘಟನೆ ನಡೆದಿದ್ದು. ಕೊಲೆ ಮಾಡಿದ ನಂತರ ಆರೋಪಿ ನಿಜಾಮುದ್ದೀನ್​ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾರೆ. ಮೃತರನ್ನು ಮೂಲತಃ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ನಿವಾಸಿಗಳು ಎಂದು ಗುರುತಿಸಿದ್ದು. ಕೊಲೆ ಆರೋಪಿ ವಿರುದ್ದ ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *