Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೆಲರಾಯಿ ಚರ್ಚ್ ಬಳಿ 7 ದನಗಳ ಅನುಮಾನಾಸ್ಪದ ಸಾವು

Spread the love

ಮಂಗಳೂರು: ಹೊರವಲಯ ನೀರುಮಾರ್ಗದ ಕೆಲರಾಯಿ ಚರ್ಚ್ ಬಳಿಯ ನಿವಾಸಿ ಹೈನುಗಾರರಾಗಿರುವ ಜೋಸೆಫ್ ಸ್ಟಾ ನಿ ಪ್ರಕಾಶ್ ಎಂಬವರ ಮನೆಯ 7 ದನಗಳು ಹತ್ತುದಿನಗಳ ಅವಧಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ದನಗಳಿಗೆ ಯಾರೋ ವಿಷ ಪದಾರ್ಥ ನೀಡಿ ಸಾಯಿಸಿರುವ ಬಗ್ಗೆ ಅನುಮಾನವಿದೆ.

ಕರು ಇರುವ ಹಾಲು ಕರೆಯುವ, ತನೆಯ ಹಸುಗಳು, ದೊಡ್ಡ ಮತ್ತು ಮಧ್ಯಮ ಗಾತ್ರದ ಎತ್ತುಗಳು ಸೇರಿವೆ. ಸುಮಾರು 50 ವರ್ಷದಿಂದ ಹೈನುಗಾರಿಕೆ ನಡೆಸುತ್ತಿದ್ದು, 30ಕ್ಕೂ ಅಧಿಕ ಜಾನುವಾರುಗಳಿವೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೋಸೆಫ್ ಸ್ಟಾ ನಿ ಪ್ರಕಾಶ್, ನಿತ್ಯ ನೀರುಮಾರ್ಗ- ಕೆಲರಾಯಿ ಕಡೆಗೆ ದನಗಳನ್ನು ಮೇಯಲು ಬಿಡುತ್ತೇವೆ. ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ. ಮೇಯಲು ಹೋದ ದನಗಳಿಗೆ ಯಾರೋ ವಿಷವುಣಿಸಿದ್ದಾರೆ.

ಮನೆಗೆ ಬಂದ ಬಳಿಕ ಒಂದೊಂದೇ ದನಗಳಿಗೆ ನಿತ್ರಾಣಗೊಂಡು, ಬಿದ್ದು ಸಾವನ್ನಪ್ಪಿವೆ. ಗುತ್ತಿಗೆ ಬಳಿ ದಪ್ಪವಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.ಜೂ.12ರಂದು ಒಂದು ದನ ಸಾವನ್ನಪ್ಪಿದೆ. 13ರಂದು ಪಶು ವೈದ್ಯರು ಬಂದು ರಕ್ತದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಆರು ದನಗಳು ಮನೆಯಲ್ಲಿಯೇ ಸಾವನ್ನಪ್ಪಿದ್ದು, ಒಂದು ದನ ಮೇಯಲು ಬಿಟ್ಟಲ್ಲಿ ಗುಡ್ಡದಲ್ಲಿಯೇ ಮೃತಪಟ್ಟಿದೆ. ಇನ್ನು ಒಂದು ಜೀವನ್ಮರಣ ಸ್ಥಿತಿಯಲ್ಲಿದೆ. ಸ್ಥಳೀಯವಾಗಿ ಇನ್ನೂ ಕೆಲವರು ದನಗಳನ್ನು ಮೇಯಲು ಬಿಡುತ್ತಿದ್ದಾರೆ. ಆದರೆ ಅವರಿಗೆ ಆ ದನಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದರು. ಘಟನೆಯ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *