Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದಂಪತಿಗಳ ಮಧ್ಯೆ ಶಂಕೆಯ ಬೆಂಕಿ: ಪತ್ನಿ ಮತ್ತು ಮಕ್ಕಳ ಮೇಲೆ ಆಸಿಡ್ ಎರಚಿದ ಪತಿ

Spread the love

ಲಕ್ಕೆ: ವ್ಯಕ್ತಿಯೊಬ್ಬ ಗಾಢನಿದ್ರೆಯಲ್ಲಿದ್ದ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳ ಮೇಲೆ ಆಸಿಡ್ ಎರಚಿದ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿರುವ ಟಿಕ್ರಿ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಭಾನುವಾರ ಪೊಲೀಸರು ಈ ಬಗ್ಗೆ ತಿಳಿಸಿದ್ದಾರೆ.

ಆರೋಪಿ ರಾಮ್ ಗೋಪಾಲ್ ತನ್ನ ಪತ್ನಿ ರಾಮಗುಣಿಗೆ ವಿವಾಹೇತರ ಸಂಬಂಧವಿದೆ ಎಂದು ಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಗೋಡೆ ಹಾರಿ ಮನೆಯೊಳಗೆ ನುಗ್ಗಿ ತನ್ನ 39 ವರ್ಷದ ಪತ್ನಿ ಮತ್ತು ಹೆಣ್ಣುಮಕ್ಕಳಾದ 23 ವರ್ಷದ ರಚಿತಾ ಮತ್ತು 16 ವರ್ಷದ ನೇಹಾ ಅವರ ಮೇಲೆ ಆಸಿಡ್‌ ಎರಚಿದ್ದಾನೆ. ಘಟನೆಯಿಂದ ಮೂವರಿಗೂ ಗಂಭೀರ ಸುಟ್ಟ ಗಾಯಗಳಾಗಿದ್ದು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಎಎಸ್ಪಿ ದೇವೇಂದ್ರ ಕುಮಾರ್ ಮಾತನಾಡಿ, ರಾಮಗುಣಿ ತಮ್ಮ ಮಕ್ಕಳೊಂದಿಗೆ ಟಿಕ್ರಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಅವರ ಪತಿ ಹರ್ಡೋಯ್‌ನ ಶಹಾಬಾದ್‌ನಲ್ಲಿ ವಾಸಿಸುತ್ತಿದ್ದರು. ದಾಳಿ ನಡೆದ ಸಮಯದಲ್ಲಿ ದಂಪತಿಯ ಮಗ ಆಶು ಮನೆಯಲ್ಲಿ ಇರಲಿಲ್ಲ. ಘಟನೆಯ ಬಳಿಕ ಆಶು ತನ್ನ ತಂದೆಯ ವಿರುದ್ಧ ದೂರು ದಾಖಲಿಸಿದ್ದಾನೆ ಎಂದು ಹೇಳಿದರು.

ವಿಪರೀತ ಕುಡಿತದ ಚಟ ಹೊಂದಿದ್ದ ರಾಮ್ ಗೋಪಾಲ್, ಶಹಾಬಾದ್‌ನಲ್ಲಿರುವ ತನ್ನ ಕೃಷಿ ಭೂಮಿಯನ್ನು ಮಾರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಗಾಗ್ಗೆ ಜಗಳಗಳು ಮತ್ತು ಅನುಮಾನದಿಂದಾಗಿ ರಾಮಗುಣಿ ತನ್ನ ಮಕ್ಕಳೊಂದಿಗೆ ಬೇರೆಡೆಗೆ ತೆರಳಿದ್ದರು. ಆರೋಪಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *