ಅಚ್ಚರಿಯಾಗಿ ಕೆಲಸ ಮಾಡಬಲ್ಲ ಹ್ಯುಮನಾಯ್ಡ್ ರೋಬೋಟ್ ಬೆಲೆ ಈಗ 5 ಲಕ್ಷ ರೂಪಾಯಿ

ಅಮೆರಿಕದ ತಂತ್ರಜ್ಞಾನ ಕಂಪನಿಗಳು ಭವಿಷ್ಯದಲ್ಲಿ ಮಾನವರಿಗೆ ಸೇವೆ ಸಲ್ಲಿಸಲು ಹ್ಯುಮನಾಯ್ಡ್ ರೋಬೋಟ್‌ಗಳನ್ನು (ಸಹಾಯಕ ರೋಬೋಟ್‌ಗಳು) ತರಲು ಪ್ರಯತ್ನಿಸುತ್ತಿದ್ದರೆ. ಆದರೆ, ಈ ವಿಚಾರದಲ್ಲಿ ಚೀನಾ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದೆ.

ಚೀನಾ ಮೂಲದ ಯೂನಿಟ್ರಿ ರೊಬೊಟಿಕ್ಸ್ ಈಗಾಗಲೇ ‘R1’ ಎಂಬ ತನ್ನ ಇತ್ತೀಚಿನ ಮಾದರಿಯ ಹ್ಯುಮನಾಯ್ಡ್ ರೋಬೋಟ್ ಅನ್ನು ಕೇವಲ 5 ಲಕ್ಷ ರೂಪಾಯಿಗೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವತ್ತ ಗಮನಹರಿಸಿದೆ.
ಕಂಪನಿಯು ಇತ್ತೀಚೆಗಷ್ಟೇ ವಿಡಿಯೋವೊಂದನ್ನು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಆ ವಿಡಿಯೋದಲ್ಲಿ ‘R1’ ರೋಬೋಟ್, ಪಲ್ಟಿ ಹೊಡೆಯುವುದು, ಕೈಗಳ ಮೇಲೆ ನಡೆಯುವುದು, ಬಾಕ್ಸಿಂಗ್ ಪಂಚ್‌ಗಳನ್ನು ಮಾಡುವುದು, ಹಾಸಿಗೆಯಿಂದ ಎದ್ದೇಳುವುದು ಮತ್ತು ಬೆಟ್ಟದ ಮೇಲೆ ಓಡುವಂತಹ ಕೌಶಲ್ಯಗಳನ್ನು ಪ್ರದರ್ಶಿಸಿದೆ. ಈ ರೋಬೋಟ್ ಸುಮಾರು 25 ಕೆಜಿ ತೂಕವಿದ್ದು, ಸುಮಾರು ನಾಲ್ಕು ಅಡಿ ಎತ್ತರವಿದೆ.
ತುಂಬಾ ಸಂಕೀರ್ಣವಾದ ಕಾರ್ಯಗಳನ್ನೂ ಸುಲಭವಾಗಿ ನಿರ್ವಹಿಸಲು ನೆರವಾಗುವಂತೆ ‘ದೊಡ್ಡ ಬಹು-ಮಾದರಿ’ ಯೋಜನೆಯೊಂದಿಗೆ ಈ ರೋಬೋಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರೊಳಗೆ ನಾಲ್ಕು ಮೈಕ್ರೊಫೋನ್‌ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ವೈಫೈ 6 ಮತ್ತು ಬ್ಲೂಟೂತ್ 5.2 ಸಂಪರ್ಕವನ್ನು ಬೆಂಬಲಿಸಲು ರೋಬೋಟ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಅಂದಹಾಗೆ, ಇದು ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗದ ಹ್ಯುಮನಾಯ್ಡ್ ರೋಬೋಟ್ ಆಗಿದೆ. ಇನ್ನು ಝೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್‌ಝೌ ಮೂಲದ ಯುನಿಟ್ರಿ ಕಂಪನಿಯು ಈ ಹಿಂದೆ ಎರಡು ಹ್ಯುಮನಾಯ್ಡ್ ಮಾದರಿಗಳನ್ನು ಬಿಡುಗಡೆ ಮಾಡಿದೆ. G1 (ಎತ್ತರ 130 ಸೆಂ.ಮೀ., ತೂಕ 35 ಕೆಜಿ), ಬೆಲೆ 99,000 ಯುವಾನ್ ( 12,07,883 ರೂಪಾಯಿ) ಮತ್ತು H1 (ಎತ್ತರ 180 ಸೆಂ.ಮೀ., ತೂಕ 47 ಕೆಜಿ), ಬೆಲೆ 650,000 ಯುವಾನ್ (79,30,763 ರೂಪಾಯಿ).
ಚೀನಾದಲ್ಲಿ ನೂರಾರು ರೋಬೋಟಿಕ್ಸ್ ಕಂಪನಿಗಳಿದ್ದು, ಅವು ಅಮೆರಿಕದ ಕಂಪನಿಗಳೊಂದಿಗೆ ಸ್ಪರ್ಧಿಸುತ್ತಾ ಮುಂದುವರಿದ ಹ್ಯುಮನಾಯ್ಡ್ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಪ್ರಸ್ತುತ ಚರ್ಚೆಯಲ್ಲಿರುವ ಯುನಿಟ್ರಿ ಕಂಪನಿಯ ರೋಬೋಟ್‌ನ ಬೆಲೆ $5,900 (ಸುಮಾರು 5 ಲಕ್ಷ ರೂಪಾಯಿ) ಆಗಿದ್ದರೆ, ಹಗ್ಗಿಂಗ್ ಫೇಸ್ ಎಂಬ AI ಕಂಪನಿಯು ಕಳೆದ ತಿಂಗಳು ಕೇವಲ $3,000 ( 2,61,847 ರೂಪಾಯಿ) ಗೆ ‘ಹೋಪ್‌ಜೆಆರ್’ ಎಂಬ ಓಪನ್ ಸೋರ್ಸ್, ಪೂರ್ಣ ಗಾತ್ರದ ಹ್ಯುಮನಾಯ್ಡ್ ರೋಬೋಟ್ ಅನ್ನು ತರುತ್ತಿರುವುದಾಗಿ ಘೋಷಿಸಿದೆ.
