ಮೂಢನಂಬಿಕೆ: ಸಾಮೂಹಿಕವಾಗಿ ಪ್ರಾಣ ತ್ಯಾಗಕ್ಕೆ ಮುಂದಾಗಿದ್ದ 21 ಭಕ್ತರು ರಕ್ಷಣೆ, ಚಿಕ್ಕೋಡಿಯಲ್ಲಿ 144 ಸೆಕ್ಷನ್ ಜಾರಿ

ಚಿಕ್ಕೋಡಿ : ಉತ್ತರ ಕರ್ನಾಟಕದಲ್ಲಿ ಆಗಾಗ್ಗೆ ಇಂತಹ ಪ್ರಕರಣಗಳು ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿರುತ್ತವೆ. ಈ ನಡುವೆ ಇನ್ನೂ ಜೀವಂತವಾಗಿದೆಯಾ ಮೂಡನಂಬಿಕೆ ಪದ್ಧತಿ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುವಂತೆ ಮಾಡಲಿದೆ ಈ ಘಟನೆ.

ಹೌದು, ಮೂಡನಂಬಿಕೆಗೆ ಬಲಿಯಾಗುತ್ತಿದ್ದ ಕುಟುಂಬವನ್ನು ಇದೀಗ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಈ ಮೂಲಕ ಬಹುದೊಡ್ಡ ಅನಾಹುತ ತಪ್ಪಿದಂತೆ ಆಗಿದೆ. ಇಲ್ಲಿನ ಚಿಕ್ಕೋಡಿಯ ಅನಂತಪುರ ಗ್ರಾಮದಲ್ಲಿ (Anantapur village in Chikkodi) ಈ ಘಟನೆ ನಡೆದಿದೆ. ಪರಮಾತ್ಮ ಬರ್ತಾನೆ ಜೀವ ಒಯ್ಯುತಾನೆ ಎಂದು ಈ ಭಕ್ತರು ಹೇಳುತ್ತಿದ್ದಾರೆ.
ಸೆಪ್ಟೆಂಬರ್ 08 ರಂದು ಪ್ರಾಣತ್ಯಾಗ ಮಾಡುವುದಕ್ಕೆ ಇಲ್ಲಿಗೆ ಉತ್ತರ ಪ್ರದೇಶ ಭಕ್ತರು ಬಂದಿದ್ದರು. ಅನಂತಪುರ ಗ್ರಾಮದ ಇರಕರ ಕುಟುಂಬದ 4 ಜನ ಸೇರಿದಂತೆ ಒಟ್ಟು 21 ಜನ ಪ್ರಾಣ ತ್ಯಾಗಕ್ಕೆ ಮುಂದಾಗಿದ್ದರು. ಇವರೆಲ್ಲಾ ಸಂತ ರಾಮಪಾಲನ ಅನುಯಾಯಿಗಳಾಗಿದ್ದಾರೆ ಎನ್ನಲಾಗಿದೆ. ಇವರು ಪುಸ್ತಕ ಓದಿ ಹಾಗೂ ಪ್ರವಚನ ಕೇಳಿ ಪ್ರಾಣತ್ಯಾಗ ಮುಂದಾಗಿದ್ದ ಭಕ್ತರು ಎಂದು ತಿಳಿದುಬಂದಿದೆ.
ಅನಂತಪುರ ಗ್ರಾಮದ ಇರಕರ ಕುಟುಂಬದ, ತುಕಾರಾಮ, ಸಾವಿತ್ರಿ, ರಮೇಶ್, ವೈಷ್ಣವಿ ಪ್ರಾಣತ್ಯಾಗಕ್ಕೆ ಮುಂದಾಗಿದ್ದ ಭಕ್ತರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ ಚಿಕ್ಕೋಡಿ ಎಸಿ ಸುಭಾಷ್ ಸಂಪಗಾವಿ ನೇತೃತ್ವದಲ್ಲಿ ಭೇಟಿ ನಡೆದಿದ್ದು, ಅವರಿಗೆ ಅರಿವು ಮೂಡಿಸುವ ಕಾರ್ಯ ಆಗಿದೆ.
ಅಲ್ಲದೆ ಪ್ರಾಣತ್ಯಾಗ ಮಾಡಲು ಮುಂದಾಗಿದ್ದವರಿಗೆ ಸ್ವಾಮೀಜಿಗಳಿಂದ ಧರ್ಮ ಧಿಕ್ಷೆ ನೀಡಲಾಗಿದೆ. ಈ ನಡುವೆ ಕಾನೂನಿನ ಎಚ್ಚರಿಕೆ ಕೊಟ್ಟಿರುವ ಅಧಿಕಾರಿಗಳು, ಇರಕರ ಕುಟುಂಬದ ಮನೆ ಸುತ್ತಲೂ144 ಸೆಕ್ಷನ್ ಜಾರಿ ಮಾಡಲಾಗಿದೆ. ಜೊತೆಗೆ ಆಹಾರ ತ್ಯಜಿಸಿದ್ದ ಭಕ್ತಿರಿಗೆ ಊಟ ನೀಡಲಾಗಿದೆ. ಇವರೆಲ್ಲಾ ಆಧ್ಯಾತ್ಮದಿಂದ ಲೋಕಿಕ ಜೀವನವನ್ನೇ ತ್ಯಜಿಸಲು ಮುಂದಾಗಿದ್ದರು. ಸದ್ಯ ಸ್ಥಳದಲ್ಲಿ ವೈದ್ಯರು ಸೇರಿ ಅಧಿಕಾರಿಗಳ ತಂಡ ಇದೆ. ಅಲ್ಲದೆ ಉತ್ತರ ಪ್ರದೇಶ ಸೇರಿ ಬೇರೆ ರಾಜ್ಯಗಳಿಂದ ಬಂದಿದ್ದ ಭಕ್ತರನ್ನು ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ.